ಚಿಕ್ಕಮಗಳೂರು: ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡುವ ಕಾಂಗ್ರೆಸ್​ನ ಗ್ಯಾರಂಟಿಗಳ ಪೈಕಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ನಡೆದಿವೆ. ಈಗ ಮಹಿಳೆಯರ ಶಕ್ತಿ ಮೀರಿದ ಪ್ರಯಾಣದಿಂದ ಬಸ್ಸೊಂದು ಮಾರ್ಗಮಧ್ಯೆಯೇ ನಿಂತು ಹೋಗುವಂತಾಗಿದೆ.
ಇದನ್ನೂ ಓದಿ:VIDEO | ಸೀಟ್​​ಗಾಗಿ ‘ಶಕ್ತಿ’ ಪ್ರಯೋಗ: ಬಸ್​​ನೊಳಗೇ ಜಡೆ ಹಿಡಿದು ಜಗಳವಾಡಿದ ಮಹಿಳೆಯರು!
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಇಂದು ಈ ಪ್ರಕರಣ ನಡೆದಿದೆ. ಬೆಂಗಳೂರಿನಿಂದ ಹೊರನಾಡಿಗೆ ಹೊರಟಿದ್ದ ಈ ಬಸ್​ನಲ್ಲಿ ಮಹಿಳೆಯರು ಶಕ್ತಿ ಮೀರಿ ಪ್ರಯಾಣಿಸುತ್ತಿದ್ದರು. ಅರ್ಥಾತ್, ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಉಚಿತವಾಗಿ ಧಾರ್ಮಿಕ ಕ್ಷೇತ್ರದ ದರ್ಶನ ಪಡೆಯಲು ಹೊರಟಿದ್ದ ಮಹಿಳೆಯರೇ ಈ ಬಸ್​ನಲ್ಲಿ ಅಧಿಕ ಸಂಖ್ಯೆಯಲ್ಲಿದ್ದರು. ಅಂದರೆ, 60 ಆಸನಗಳ ಸಾಮರ್ಥ್ಯದ ಈ ಬಸ್​ನಲ್ಲಿ ನೂರಕ್ಕೂ ಅಧಿಕ ಪ್ರಯಾಣಿಕರಿದ್ದರು.
ಇದನ್ನೂ ಓದಿ:ಬಸ್​ ಡೋರೇ ಕಿತ್ತು ಹೋಯ್ತು!; ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ‘ಶಕ್ತಿ’ ಪ್ರಯೋಗ
ಹೀಗೆ ಓವರ್ ಲೋಡ್​ ಆಗಿದ್ದ ಬಸ್​ ತಿರುವಿನಲ್ಲಿ ಒಂದು ಕಡೆಗೇ ಹೆಚ್ಚಿನ ಭಾರ ಬಿದ್ದಂತಾಗಿ ಪರ್ಚ್ ಕಟ್ ಆಗಿ ಕೆಟ್ಟು ಮಾರ್ಗಮಧ್ಯೆ ನಿಲ್ಲುವಂತಾಗಿತ್ತು. ಪರಿಣಾಮವಾಗಿ, ಬಸ್​ನಲ್ಲಿ ತುಂಬಿದ್ದ ಮಹಿಳೆಯರು ರಸ್ತೆಬದಿಯಲ್ಲಿ ಸಾಲಾಗಿ ಕೂರುವಂತಾಗಿತ್ತು. ಅಲ್ಲದೆ ಪ್ರಯಾಣಿಕರೆಲ್ಲರೂ ಗಂಟೆಗಟ್ಟಲೆ ಕಾದು ಸುಸ್ತಾಗುವಂತಾಗಿತ್ತು. ಈ ಮಾರ್ಗದಲ್ಲಿ ಸರ್ಕಾರಿ ಬಸ್​ಗಳ ಸಂಖ್ಯೆ ಅತಿ ಕಡಿಮೆಯಾದ್ದರಿಂದ ಬೇರೆ ಬಸ್ ಸಿಗದೆ ಪರದಾಡುವಂತಾಗಿತ್ತು.
ಇದನ್ನೂ ಓದಿ:ಮಹಿಳೆಯರೇ ಹುಷಾರು: ‘ಶಕ್ತಿ’ ಮೀರಿ ಪ್ರಯಾಣಿಸುವ ಮುನ್ನ ಎಚ್ಚರಿಕೆ ಇರಲಿ..
ಮೀನು ಮಾರ್ಕೆಟ್​ನಲ್ಲಿ ಮಾತೃವಾತ್ಸಲ್ಯ ಅನಾವರಣ; ವಿದೇಶದಿಂದ ಮಗ ಮುಖಮುಚ್ಚಿಕೊಂಡು ಬಂದರೂ ಗುರುತು ಹಿಡಿದ ಅಮ್ಮ!

ಅಭಿನವ ಹಾಲಶ್ರೀ ನೀಡಿದ್ದ ಲಕ್ಷಾಂತರ ರೂಪಾಯಿ ವಾಪಸ್ ಮಠಕ್ಕೆ ತಲುಪಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
