ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಇದು ಒಂದು. ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ವಿತರಿಸುವ ಯೋಜನೆ ಇದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳೇ ಕಾರಣ ಎಂಬ ವಿಶ್ಲೇಷಣೆಯೂ ಇದೆ.
ಇದೀಗ ಲೋಕಸಭೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಇಂಡಿ ಒಕ್ಕೂಟ ಇಲ್ಲಿಯೂ ಗ್ಯಾರಂಟಿ ಯೋಜನೆಗಳನ್ನೇ ಪ್ರಮುಖವಾಗಿ ಅಸ್ತ್ರವಾಗಿ ಬಳಸುತ್ತಿದೆ. ಇತ್ತೀಚೆಗಷ್ಟೇ ಸಮಾವೇಶವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಈ ಬಾರಿ ಇಂಡಿ ಒಕ್ಕೂಟ ಏನಾದರೂ ಅಧಿಕಾರಕ್ಕೆ ಬಂದರೆ, ಆ ದಿನವೇ ನಾನು ಮಹಿಳೆಯರ ಖಾತೆಗೆ ಟಕಾಟಕ್​ ಅಂತ ಹಣ ಜಮಾವಣೆ ಮಾಡುತ್ತೇನೆ ಎಂದು ಹೇಳಿದ್ದರು.
ರಾಹುಲ್​ ಗಾಂಧಿ ಅವರು ಈ ಘೋಷಣೆ ಮಾಡಿದ ಬೆನ್ನಲ್ಲೇ ಗಂಭೀರವಾಗಿ ಪರಿಗಣಿಸಿರುವ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್​ ಆಫೀಸ್​ನಲ್ಲಿ ಕ್ಯೂ ನಿಂತಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಹೋಗಿ ಪೋಸ್ಟ್​ ಆಫೀಸ್​ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈಗಲೇ ಖಾತೆ ಮಾಡಿಸಿಕೊಂಡರೆ ತಿಂಗಳಿಗೆ ನಮ್ಮ ಖಾತೆ 8500 ರೂ. ಜಮಾ ಮಾಡುತ್ತಾರೆ ಎಂಬ ಆಸೆಯಿಂದಲೇ ಊಟ, ತಿಂಡಿ ಬಿಟ್ಟು ಕ್ಯೂನಲ್ಲಿ ನಿಂತು ಡಿಜಿಟಲ್​ ಖಾತೆ ಓಪನ್​ ಮಾಡಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಪೋಸ್ಟ್​ ಆಫೀಸ್​ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. IPPB ಖಾತೆ ತೆರೆಯಲು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕಳೆದ 15 ದಿನಗಳಿಂದ ನಗರದಲ್ಲಿ ಇದೇ ಸ್ಥಿತಿ ಇದೆ ಎಂದು ಹೇಳಲಾಗಿದೆ. ಇನ್ನು ಸಾಕಷ್ಟು ಮಹಿಳೆಯರು ಬರುತ್ತಿರುವ ಕಾರಣ, ಜನಜಂಗುಳಿಯನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಸ್ಟ್​ ಆಫೀಸ್​ಗಳಲ್ಲಿ ಟೋಕನ್​ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಟೋಕನ್​ಗಳು ಸಹ ಖಾಲಿಯಾದ ಹಿನ್ನೆಲೆಯಲ್ಲಿ ಇದೀಗ ಕೌಂಟರ್​ಗಳನ್ನು ತೆರೆದು, ಬರುವಂತಹ ಮಹಿಳೆಯರ ಆಧಾರ್​ ಕಾರ್ಡ್​ ಪರಿಶೀಲನೆ ಮಾಡಿ ರಿಜಿಸ್ಟ್ರೇಷನ್​ ಮಾಡಲಾಗುತ್ತಿದೆ.
ಇನ್ನು ಮಹಿಳೆಯರ ಸಂಖ್ಯೆಯನ್ನು ದಂಗಾದ ಪೋಸ್ಟ್​ ಆಫೀಸ್​ ಕಚೇರಿ ಸಿಬ್ಬಂದಿ ನಿಮ್ಮ ಖಾತೆಗೆ ಈಗಲೇ ಹಣ ಬರುವುದಿಲ್ಲ ಎಂಬ ಬೋರ್ಡ್​ ಹಾಕಿದ್ದಾರೆ. ನೀವು ಬಂದು IPPB ಖಾತೆಯನ್ನು ತೆರೆಯಬಹುದು ಆದರೆ, ನಮ್ಮಿಂದ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಮುಂದೆ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದು ಹಣ ಜಮೆ ಮಾಡುವ ಯೋಜನೆ ಜಾರಿ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ಬೋರ್ಡ್​ ಅಳವಡಿಸುವ ಮೂಲಕ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್​ ಗಾಂಧಿ ಹೇಳಿದ್ದೇನು?ಬಿಹಾರದಲ್ಲಿ ಇಂಡಿ ಒಕ್ಕೂಟದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್​ ಗಾಂಧಿ, ಇಂಡಿ ಒಕ್ಕೂಟದ ರಚನೆಯಾದ ಬೆನ್ನಲ್ಲೇ ಜುಲೈನಿಂದ, ಪ್ರತಿ ತಿಂಗಳು 8,500 ರೂ. ಮಹಿಳಾ ಖಾತೆಗಳಿಗೆ ಜಮಾ ಮಾಡಲಾಗುವುದು. ಇದು ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ರಾಹುಲ್​ ಹೇಳಿದ್ದರು.
ಸಂಸದ ಪ್ರಜ್ವಲ್​ ರೇವಣ್ಣ ಮನೆಯಿಂದ ಹಾಸಿಗೆ, ದಿಂಬು ಹೊತ್ತೊಯ್ದ ಎಸ್​ಐಟಿ ಅಧಿಕಾರಿಗಳು!

ಸಾಮಾಜಿಕ ಜಾಲತಾಣಕ್ಕೆ ಇಳಿದ್ರೆ ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ ಎಂದ ಬಿಗ್​ ಬಿ! ಫ್ಯಾನ್ಸ್ ರಿಯಾಕ್ಷನ್​ ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
