ಗದಗ:ಈ ನಾರಿಮಣಿಯರು, ಶಾಸಕರಿಗೆ ತಕ್ಕ ಪಾಠ ಕಲಿಸಿದ್ದು ಭೂಮಿ ಪೂಜೆಗೆ ಬಂದವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. ಈ ಅಪರೂಪದ ಘಟನೆ ನಡೆದದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ.
ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕೆರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮಾಡಲು ಶಾಸಕರಾದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸಿದ್ದರು. ಈ ಸಂದರ್ಭ ಸ್ಥಳೀಯ ಮಹಿಳೆಯರು ಜತೆಗೂಡಿದ್ದು ಮೊದಲು ಚರಂಡಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:ಕುಸಿದಿವೆ ಚರಂಡಿ ಮುಚ್ಚಳಗಳು
ಅಲ್ಲಿಂದ ಕಾಲ್ಕೀಳುವ ಲಕ್ಷಣ ಕಾಣಿಸಿಕೊಂಡಿದ್ದೇ ಶಾಸಕರನ್ನು ಅವರು ಸುತ್ತುವರದು ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಶಾಸಕರು ಮಹಿಳೆಯರ ಮಾತಿನಂತೆಯೆ ವರಸೆ ಬದಲಾಯಿಸಿದ್ದು ಮೊದಲಿಗೆ ಚರಂಡಿ ಮಾಡಿ ನಂತರವೇ ರಸ್ತೆ ಮಾಡುವುದಾಗಿ ಹೇಳಿದ್ದಾರೆ.
ಈ ಸಂದರ್ಭ ಮಹಿಳೆಯರು ಹಾಗೂ ಸ್ಥಳೀಯರ ಮಾತಿಗೆ ಉತ್ತರ ನೀಡದೆ ಶಾಸಕರು ಕಾಲ್ಕಿತ್ತಿದ್ದಾರೆ. ಈ ಹಿಂದೆ ಚರಂಡಿ ಮಾಡುವಂತೆ ಹತ್ತಾರು ಬಾರಿ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಈ ಬಾರಿ ಸ್ಥಳಕ್ಕೇ ಶಾಸಕರು ಬಂದಿದ್ದು ಈ ವಿಚಾರವಾಗಿ ಬಿಡಬಾರದು ಎಂದುಕೊಂಡ ಸ್ಥಳೀಯರು ಶಾಸಕರಿಗೆ ಚರಂಡಿ ಮಾಡಿಸಲು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಬರ್ತಾ ಇದ್ದಂತೆ ಭೂಮಿ ಪೂಜೆ ಮಾಡಲು ಬಂದ ಶಾಸಕರಿಗೆ ಸ್ಥಳೀಯರು ಹಾಗೂ ಅಲ್ಲಿನ ಮಹಿಳೆಯರು ಪಾಠ ಕಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nine =
Remember me
