ಬೆಂಗಳೂರು:ಮಹಿಳೆಯರ ಜತೆ ಏಕಾಂತವಾಗಿ ಕಾಲ ಕಳೆಯಲು ಆಸೆಪಟ್ಟು ಡೇಟಿಂಗ್ ಆಪ್ ಮೊರೆ ಹೋಗಿದ್ದ ಯುವಕರಿಬ್ಬರು ಇದೀಗ ಪೇಚಿಗೆ ಸಿಲುಕಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದ ಮಹಿಳೆಯರ ಜತೆ ವ್ಯಾಟ್ಸ್​ಆಪ್​ನಲ್ಲಿ ನಗ್ನವಾಗಿ ವಿಡಿಯೋ ಚಾಟಿಂಗ್ ಮಾಡಿದ್ದರು. ಅದನ್ನು ರೆಕಾರ್ಡ್ ಮಾಡಿಟ್ಟುಕೊಂಡ ಮಹಿಳೆ ಯರು, ಹಣಕ್ಕಾಗಿ ಯುವಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹಣ ಪಡೆದು ಕೊಂಡ ಮಹಿಳೆಯರು ಮತ್ತೆ ಪೀಡಿಸುತ್ತಿ ರುವ ಹಿನ್ನೆಲೆಯಲ್ಲಿ ಯುವಕರು ಸೈಬರ್ ಕ್ರೖೆಂ ಪೊಲೀಸರ ಮೊರೆ ಹೋಗಿದ್ದಾರೆ.
ದೊಡ್ಡಾನೆಕ್ಕುಂದಿ ನಿವಾಸಿ 26 ವರ್ಷದ ಯುವಕ, ಮಹಿಳೆಯ ಕಾಲ ಕಳೆಯಲು ‘ಓಕೆ ಕೂಪಿಡ್’ ಆಪ್​ನಲ್ಲಿ ಹುಡುಕಾಟ ನಡೆಸಿ ಮಹಿಳೆ ಯೊಬ್ಬರನ್ನು ಸಂರ್ಪಸಿದ್ದ. ಇಬ್ಬರೂ ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. 2-3 ದಿನಗಳವರೆಗೆ ವ್ಯಾಟ್ಸ್ ಆಪ್​ನಲ್ಲಿ ಇಬ್ಬರೂ ಚಾಟಿಂಗ್ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಆಸೆೆಯನ್ನು ಮಹಿಳೆ ಬಳಿ ಹೇಳಿಕೊಂಡಿದ್ದ. ಬಳಿಕ ಆಕೆಯ ಜತೆ ವ್ಯಾಟ್ಸ್​ಆಪ್ ವಿಡಿಯೋದಲ್ಲಿ ನಗ್ನವಾಗಿ ಸಂಭಾಷಣೆ ನಡೆಸಿದ್ದ. ಅದೇ ವೇಳೆ ಆಕೆ ಆತನ ಅರಿವಿಗೆ ಬಾರದಂತೆ ವಿಡಿಯೋ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ.
ನಂತರ ಯುವಕನಿಗೆ ಕರೆ ಮಾಡಿದ ಮಹಿಳೆ, ರೆಕಾರ್ಡ್ ಮಾಡಿಕೊಂಡಿರುವ ಖಾಸಗಿ ದೃಶ್ಯಗಳನ್ನು ‘ಯೂಟ್ಯೂಬ್’ ಮತ್ತು ‘ಇನ್​ಸ್ಟಾ ಗ್ರಾಂ’ನಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಕೇಳಿದ್ದಾಳೆ. ಮಾನಕ್ಕೆ ಅಂಜಿದ ಯುವಕ ಆಕೆ ಖಾತೆಗೆ 16 ಸಾವಿರ ರೂ. ಜಮೆ ಮಾಡಿದ್ದಾನೆ. ಬಳಿಕವೂ ಮಹಿಳೆ ಮತ್ತೆ ಹಣ ಕೊಡುವಂತೆ ಬೇಡಿಕೆ ಇಟ್ಟಾಗ ಪೊಲೀಸರಿಗೆ ದೂರು ನೀಡಿದ್ದಾನೆ.
22,000 ರೂ. ವಸೂಲಿ ಮಾಡಿದ ‘ಗೆಳತಿ’:ಹಗದೂರಿನ 30 ವರ್ಷದ ಯುವಕ, ಅಪರಿಚಿತ ಯುವತಿಗೆ ವ್ಯಾಟ್ಸ್​ಆಪ್​ನಲ್ಲಿ ವಿಡಿಯೋ ಕರೆ ಮಾಡಿದ್ದ. ಆಕೆ ಅದನ್ನು ರೆಕಾರ್ಡಿಂಗ್ ಮಾಡಿಕೊಂಡು ಆತನಿಗೆ ಹಣಕ್ಕೆ ಬೇಡಿಕೆ ಇಟ್ಟು ಎಟಿಎಂ ಕಾರ್ಡ್ ಫೋಟೊ ಕಳುಹಿಸುವಂತೆ ಹೇಳಿದ್ದಾಳೆ. ನಿರಾಕರಿಸಿದರೆ ವಿಡಿಯೋಗಳನ್ನು ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ. ಆಗ ಯುವಕ ಆಕೆಯ ಖಾತೆಗೆ 22 ಸಾವಿರ ರೂ. ಸಂದಾಯ ಮಾಡಿದ್ದಲ್ಲದೇ, ಎಟಿಎಂ ಕಾರ್ಡ್ ಫೋಟೋ ಕಳುಹಿಸಿದ್ದಾನೆ. ಇದೀಗ ವಿಡಿಯೋ ಡಿಲಿಟ್ ಮಾಡಲು ಇನ್ನಷ್ಟು ಹಣ ಕೊಡುವಂತೆ ಆಕೆ ಪೀಡಿಸಿದ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ವೈಟ್​ಫೀಲ್ಡ್ ವಿಭಾಗದ ಸೈಬರ್ ಕ್ರೖೆಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 4 =
Remember me
