ಕೊಪ್ಪಳ:ಕೆಲಸಕ್ಕೆಂದು ತೆರಳಿದ್ದ ನಾಲ್ವರು ಮಹಿಳೆಯರು ಮರಳುವಾಗ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಗಿರಿಜಾ ಮಾಲಿಪಾಟೀಲ್ (32), ಭುವನೇಶ್ವರಿ ಪೊಲೀಸ್ ಪಾಟೀಲ್ (40), ಪವಿತ್ರಾ ಪೊಲೀಸ್ ಪಾಟೀಲ್ (45), ವೀಣಾ ಮಾಲಿಪಾಟೀಲ್ (19) ಕಾಣೆಯಾದ ಮಹಿಳೆಯರು. ಕೊಪ್ಪಳದ ಸಂಕನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ಇವರು ಹಳ್ಳಕ್ಕೆ ಇಳಿದಿದ್ದೇ ಈ ದುರಂತಕ್ಕೆ ಕಾರಣ. ನೀರಿನ ರಭಸ ಲೆಕ್ಕಿಸದೆ ದಾಟಲು ಯತ್ನಿಸಿದ ಇವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಳ್ಳದಲ್ಲಿ ಇಳಿಯುತ್ತಲೇ ಪವಿತ್ರಾ ಮತ್ತು ವೀಣಾ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ರಕ್ಷಿಸಲು ಧಾವಿಸಿದ ಗಿರಿಜಾ ಮತ್ತು ಭುವನೇಶ್ವರಿ ಕೂಡ ನೀರುಪಾಲಾಗಿದ್ದಾರೆ.
ಕೆಲಹೊತ್ತು ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದ ಗಿರಿಜಾ-ಭುವನೇಶ್ವರಿ, ಗ್ರಾಮಸ್ಥರು ರಕ್ಷಿಸಲು ಮುಂದಾಗುವಷ್ಟರಲ್ಲಿ ಅವರೂ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಹುಡುಕಾಟ ನಡೆಯುತ್ತಿದೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ
‘ಇನ್ನೇನು ಪರಿಚಯ ರೊಮ್ಯಾನ್ಸ್​ಗೆ ತಿರುಗಬೇಕು ಎನ್ನುವಷ್ಟರಲ್ಲಿ…’: ಹೀಗಂದಿದ್ದೇಕೆ ಅನೂಪ್​ ಭಂಡಾರಿ?
ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
