ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಸ್ಮರಿಸುವ, ಗೌರವ ಸಲ್ಲಿಸುವ ದಿನ ಇಂದು. ಅಂತಹ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ವಿಶಿಷ್ಟ ಹಾಗೂ ಸ್ಮರಣೀಯವಾಗಿ ಆಚರಿಸುತ್ತಾ ಬಂದಿರುವ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಈ ಬಾರಿಯೂ ವಿವಿಧ ಕ್ಷೇತ್ರಗಳ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ವರ್ಷದ ಮಹಿಳೆ-2020 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುರಸ್ಕಾರಕ್ಕೆ ಭಾಜನರಾದ ‘ಮಹಿಳಾ ಪಂಚರತ್ನ’ಗಳ ಕಿರು ಪರಿಚಯ ಇಲ್ಲಿದೆ.
84 ವರ್ಷ ವಯಸ್ಸಿನಲ್ಲೂ ಘನ ತ್ಯಾಜ್ಯ ನಿರ್ವಹಣೆ, ಪರಿಸರ ಕಾಳಜಿ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುವ ಹೆಸರು ಅಲ್ಮಿತ್ರಾ ಎಚ್. ಪಟೇಲ್. ಬೆಂಗಳೂರಿನಲ್ಲಿ ನೆಲೆಸಿರುವ ಅಲ್ಮಿತ್ರಾ ಅವರು ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲೂ ಕೆಲಸ ಮಾಡುತ್ತಿದ್ದಾರೆ.
1956ರಲ್ಲಿ ಬಾಂಬೆ ವಿವಿಯಿಂದ ಬಿಎಸ್ಸಿ ಪದವಿ ಪಡೆದ ಅಲ್ಮಿತ್ರಾ, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದರು. ಅಲ್ಲಿಂದ ಭಾರತಕ್ಕೆ ವಾಪಸಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 1969ರಿಂದ 72ರ ತನಕ ಗಿರ್ ಅರಣ್ಯಧಾಮದಲ್ಲಿ ಸಿಂಹಗಳ ಉಳಿವಿಗಾಗಿ ಯೋಜನಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. 1972ರಿಂದ 80ರ ತನಕ ವಿಶ್ವ ವನ್ಯಜೀವಿ ನಿಧಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
1973ರಿಂದಲೂ ಟ್ರೀ ವಾರ್ಡನ್ ಆಗಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಲಸೂರು ಕೆರೆ ಉಳಿಸಿ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸ್ವಾಭಿಮಾನ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ್ದಾರೆ. 1994-95ರಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಅಭಿಯಾನದಲ್ಲಿ ಕ್ಯಾಪ್ಟನ್ ಜೆ.ಎಸ್. ವೇಲು ಅವರೊಂದಿಗೆ ಸಹ ನಾಯಕರಾಗಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಕೆಲಸ ಮಾಡಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ದೇಶದ 165 ನಗರ ಪೌರಸಂಸ್ಥೆಗಳಿಗೆ ಭೇಟಿ ನೀಡಿ ಘನತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕೆಂದು 1996ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕಿದ್ದರು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ 1998ರಲ್ಲಿ ರಚಿಸಿದ ಸಮಿತಿಯಲ್ಲಿಯೂ ಸಹ ಸದಸ್ಯರಾಗಿ ದುಡಿದಿದ್ದಾರೆ.
ಮಹಾರಾಷ್ಟ್ರ, ಜಾರ್ಖಂಡ್, ಉತ್ತರಾಂಚಲ, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ಲಾಹೋರ್​ನಲ್ಲಿ 2004ರಲ್ಲಿ ಸ್ಥಾಪನೆಯಾದ ಮೊದಲ ಕಾಂಪೋಸ್ಟ್ ಘಟಕಕ್ಕೆ ಸಲಹೆ ನೀಡಿದ್ದಾರೆ. ಕೇಂದ್ರ ಯೋಜನಾ ಆಯೋಗದಲ್ಲಿಯೂ ಸಲಹಾ ಸದಸ್ಯರಾಗಿದ್ದರು. ರಾಜ್ಯ ಸರ್ಕಾರ 2012ರಲ್ಲಿ ಗ್ರೇಟರ್ ಬೆಂಗಳೂರು ಕುರಿತಂತೆ ರಚನೆ ಮಾಡಿದ್ದ ಸಲಹಾ ಸಮಿತಿಯಲ್ಲಿಯೂ ಇದ್ದರು.
ಕೇಂದ್ರ ಸರ್ಕಾರ 2016ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ರಚಿಸಿದ್ದ ತಜ್ಞರ ಸಮಿತಿಯಲ್ಲಿಯೂ ಇವರಿಗೆ ಸ್ಥಾನ ಕಲ್ಪಿಸಲಾಗಿತ್ತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಇವರು, ಹಲವು ಪುಸ್ತಕಗಳ ರಚನಾಕಾರರು ಹೌದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 5 =
Remember me
