ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಸ್ಮರಿಸುವ, ಗೌರವ ಸಲ್ಲಿಸುವ ದಿನ ಇಂದು. ಅಂತಹ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ವಿಶಿಷ್ಟ ಹಾಗೂ ಸ್ಮರಣೀಯವಾಗಿ ಆಚರಿಸುತ್ತಾ ಬಂದಿರುವ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಈ ಬಾರಿಯೂ ವಿವಿಧ ಕ್ಷೇತ್ರಗಳ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ವರ್ಷದ ಮಹಿಳೆ-2020 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುರಸ್ಕಾರಕ್ಕೆ ಭಾಜನರಾದ ‘ಮಹಿಳಾ ಪಂಚರತ್ನ’ಗಳ ಕಿರು ಪರಿಚಯ ಇಲ್ಲಿದೆ.
ದೇವದಾಸಿ ಪದ್ಧತಿ ನಿಮೂಲನೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಪ್ರಯತ್ನಪಟ್ಟರೂ ಸಂಪೂರ್ಣ ನಿಮೂಲನೆ ಸಾಧ್ಯವಾಗಿಲ್ಲ. ಆದರೆ, ರಾಯಚೂರು ಜಿಲ್ಲೆಯ ಮೋಕ್ಷಮ್ಮ ಮಸ್ಕಿ, ತನಗೆ ಎದುರಾದ ಅವಮಾನಗಳನ್ನೂ ಲೆಕ್ಕಿಸದೆ, ಸಾವಿರಾರು ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಳಿಸಿ, ಅವರಿಗೆ ಬದುಕು ಕಲ್ಪಿಸುವ ಕೆಲಸ ಮಾಡಿದ್ದಾರೆ. ಈ ಅನಿಷ್ಟ ಪದ್ಧತಿ ವಿರುದ್ಧ ಹಿರೇನಗನೂರಿನ ಮೋಕ್ಷಮ್ಮ ಹೋರಾಟಕ್ಕಿಳಿದಾಗ ದೇವದಾಸಿಯರೇ ಇವರನ್ನು ಅವಮಾನಿಸಿದ ಪ್ರಸಂಗಗಳಿವೆ.
ಆದರೆ, ಅದ್ಯಾವುದಕ್ಕೂ ಎದೆಗುಂದದೆ ಹೋರಾಟ ಮುಂದುವರಿಸಿ ಯಶಸ್ಸು ಕಂಡಿದ್ದಾರೆ. ಬಡತನದ ಕುಟುಂಬದಲ್ಲಿ ಹುಟ್ಟಿದರೂ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎನ್ನುವ ಅಭಿಲಾಷೆಯೊಂದಿಗೆ ‘ನವಜೀವನ ಮಹಿಳಾ ಒಕ್ಕೂಟ’ ರಚಿಸಿ, ಆ ಮೂಲಕ ರಾಯಚೂರು ಜಿಲ್ಲೆಯಲ್ಲಿನ ದೇವದಾಸಿಯರನ್ನು ಗುರುತಿಸಿ, ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೋಕ್ಷಮ್ಮರ ಹೋರಾಟ ಫಲವಾಗಿ ದೇವದಾಸಿಯರಿಗೆ ರಾಜೀವ್​ಗಾಂಧಿ ವಸತಿ ನಿಗಮದಿಂದ 306 ಮನೆ ಮಂಜೂರಾಗಿವೆೆ. ಸುಧಾಮೂರ್ತಿ ಅವರ ಇನ್ಪೋಸಿಸ್ ಫೌಂಡೇಷನ್ ಸಹಯೋಗದಲ್ಲಿ ದೇವದಾಸಿಯರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಿ, ಸ್ವಾವಲಂಬಿಗಳಾಗುವಂತೆ ಮಾಡಿದ್ದಾರೆ. ದೇವದಾಸಿಯರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ 200ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ.
ಸುಧಾಮೂರ್ತಿ ಅವರ ಮೂಲಕ ಹಲವಾರು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಕಲ್ಪಿಸುವಲ್ಲಿ ನೆರವಾಗಿದ್ದಾರೆ. ಮೈಸೂರಿನಲ್ಲಿ ಡಾ.ಪಾರ್ವತಮ್ಮ ರಾಜಕುಮಾರ್ ಸ್ಥಾಪಿಸಿರುವ ಶಕ್ತಿಧಾಮದಲ್ಲಿ ರಾಯಚೂರಿನ 120 ದೇವದಾಸಿ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದ್ದಾರೆ.
ಜತೆಗೆ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ನಿಟ್ಟಿನಲ್ಲಿ ಲಿಂಗಸುಗೂರಿನಲ್ಲಿ ‘ಸ್ವಾಭಿಮಾನಿ ಜನಪರ ವಿವಿಧೋದ್ದೇಶ ಸೌಹಾರ್ದ ಸಹಕಾರಿ’ ಸ್ಥಾಪಿಸಿ ಆ ಮೂಲಕ 6 ಕೋಟಿ ರೂ. ಉಳಿತಾಯ ಮಾಡಿದ್ದು, ಸಿಂಧನೂರು, ರಾಯಚೂರು, ಮಾನ್ವಿಯಲ್ಲಿ ಶಾಖೆಗಳನ್ನು ಆರಂಭಿಸಿದ್ದಾರೆ. ದೇವದಾಸಿ ಮಹಿಳೆಯರ ವಿಮುಕ್ತಿಗಾಗಿ ವಿವಿಧ ರಾಜ್ಯ ಹಾಗೂ ವಿದೇಶಗಳಲ್ಲೂ ವಿಚಾರ ಮಂಡನೆ ಮಾಡಿರುವ ಹೆಗ್ಗಳಿಕೆ ಇವರದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
