ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಸ್ಮರಿಸುವ, ಗೌರವ ಸಲ್ಲಿಸುವ ದಿನ ಇಂದು. ಅಂತಹ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ವಿಶಿಷ್ಟ ಹಾಗೂ ಸ್ಮರಣೀಯವಾಗಿ ಆಚರಿಸುತ್ತಾ ಬಂದಿರುವ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಈ ಬಾರಿಯೂ ವಿವಿಧ ಕ್ಷೇತ್ರಗಳ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ವರ್ಷದ ಮಹಿಳೆ-2020 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುರಸ್ಕಾರಕ್ಕೆ ಭಾಜನರಾದ ‘ಮಹಿಳಾ ಪಂಚರತ್ನ’ಗಳ ಕಿರು ಪರಿಚಯ ಇಲ್ಲಿದೆ.
ಹೆಣ್ಣು ಮನೆಗೆಲಸ, ಒಲೆ ಉರಿಸಲಷ್ಟೇ ಅಲ್ಲ. ತೊಡೆ ತಟ್ಟಿ ನಿಂತರೆ ಕುಸ್ತಿ ಅಖಾಡದಲ್ಲೂ ಸೆಣಸಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಗದಗ ತಾಲೂಕು ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರ. ಬಡತನ, ಮೂಲಸೌಲಭ್ಯಗಳ ಕೊರತೆ ನಡುವೆಯೂ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
23 ವರ್ಷದ ಪ್ರೇಮಾ, ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಕುಸ್ತಿಯಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆ. ಪ್ರೇಮಾ ಅವರ ತಂದೆ ರಮೇಶರಡ್ಡಿ ಹುಚ್ಚಣ್ಣವರ ಹಾಗೂ ತಾಯಿ ಯಲ್ಲಮ್ಮ ಅವರಿಗೆ ಮಗಳು ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಕನಸು. ಆದರೆ, ಕನಸು ಈಡೇರಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ತಂದೆ -ತಾಯಿ ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.
ಪ್ರೇಮಾ ನಿತ್ಯ ಕುಸ್ತಿ ಅಭ್ಯಾಸ ಮಾಡಲು ಗದಗ ನಗರಕ್ಕೆ ಬರಬೇಕಿತ್ತು. ಆದರೆ, ಅಸುಂಡಿ ಗ್ರಾಮದಿಂದ ಗದಗಕ್ಕೆ ಬಸ್ ಸಂಚಾರ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ. ಖಾಸಗಿ ವಾಹನದಲ್ಲಿ ಬರಲು ಹಣ ಇರಲಿಲ್ಲ. ಇಂಥ ಸಂದರ್ಭದಲ್ಲಿ ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಅವರು ಬಾಲಕಿಯ ಆಸಕ್ತಿ, ಶ್ರದ್ಧೆ ಗಮನಿಸಿ ತಮ್ಮ ಮನೆಯಲ್ಲೇ ಉಳಿದುಕೊಂಡು ‘ಶಾಲೆಗೆ ಹೋಗು, ಕುಸ್ತಿಯನ್ನೂ ಕಲಿ’ ಎಂದು ಪ್ರೇರೇಪಿಸಿದರು.
ಪರಿಣಾಮವಾಗಿ, ಪ್ರೇಮಾ ಅವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. 2012ರಲ್ಲಿ ರ್ಕಿಜಿಸ್ತಾನ್​ನಲ್ಲಿ ನಡೆದ ಕೆಡಿಟ್ ಏಷಿಯನ್ ರಸ್ಲಿಂಗ್ ಚಾಂಪಿಯನ್ ಶಿಪ್, 2012ರಲ್ಲಿ ನಡೆದ ಅಜರ್​ಬೈಜಾನ್ (ಬಾಕು) ಕೆಡಿಟ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್​ನಲ್ಲಿ ಕಂಚಿನ ಪದಕ, ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ, ತಮಿಳುನಾಡಿನಲ್ಲಿ ನಡೆದ 9ನೇ ಸೌತ್ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟ ಚಿನ್ನದ ಪದಕ, ಧಾರವಾಡ ದಲ್ಲಿ ಇತ್ತೀಚೆಗೆ ನಡೆದ ಕುಸ್ತಿ ಹಬ್ಬದಲ್ಲಿ ಚಿನ್ನದ ಪದಕ ಸೇರಿ ವಿವಿಧ ಕ್ರೀಡಾಕೂಟದಲ್ಲಿ ಗಣನೀಯ ಸಾಧನೆಗೈದಿದ್ದಾರೆ.
2014ರಲ್ಲಿ ಏಕಲವ್ಯ ಪ್ರಶಸ್ತಿ, ಸ್ವಾ್ಯಬ್ ಅವಾರ್ಡ್-2013, ಕಿತ್ತೂರು ರಾಣಿ ಚನ್ನಮ್ಮ ಅವಾರ್ಡ್ -2016, ಕರ್ನಾಟಕ ಒಲಿಂಪಿಕ್ ಅಯೋಶಿ ಯೇಷನ್ ಪ್ರಶಸ್ತಿ -2013, ಕರ್ನಾಟಕ ಬೆಸ್ಟ್ ರೆಸ್ಲರ್ -2011, 2012ರಲ್ಲಿ ಚಾಮುಂಡೇಶ್ವರಿ ಪ್ರಶಸ್ತಿ, ಉತ್ತಮ ಮಹಿಳಾ ಕುಸ್ತಿಪಟು ಪ್ರಶಸ್ತಿಗಳು ಇವರ ಮುಡಿಗೇರಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
