ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಸ್ಮರಿಸುವ, ಗೌರವ ಸಲ್ಲಿಸುವ ದಿನ ಇಂದು. ಅಂತಹ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ವಿಶಿಷ್ಟ ಹಾಗೂ ಸ್ಮರಣೀಯವಾಗಿ ಆಚರಿಸುತ್ತಾ ಬಂದಿರುವ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಈ ಬಾರಿಯೂ ವಿವಿಧ ಕ್ಷೇತ್ರಗಳ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ವರ್ಷದ ಮಹಿಳೆ-2020 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುರಸ್ಕಾರಕ್ಕೆ ಭಾಜನರಾದ ‘ಮಹಿಳಾ ಪಂಚರತ್ನ’ಗಳ ಕಿರು ಪರಿಚಯ ಇಲ್ಲಿದೆ.
‘ಯಾರೇ ಕೈ ಬಿಟ್ಟರೂ ಭೂ ತಾಯಿ ಕೈ ಬಿಡುವುದಿಲ್ಲ’ ಎಂಬ ವಿಶ್ವಾಸದೊಂದಿಗೆ ಬೇಸಾಯ ಮಾಡಲು ಶುರು ಮಾಡಿ ಕೃಷಿಯಲ್ಲದೆ, ಓದಿನಲ್ಲೂ ಸಾಧನೆಗೈದ ಪುಟ್ಟಮ್ಮನ ಯಶೋಗಾಥೆ ಇದು.
ಸಾಲದ ಸುಳಿಗೆ ಸಿಲುಕಿ ಜೀವನ ಸಾಕು ಎಂದು ನಿರ್ಧರಿಸಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತೊರೆಬೊಮ್ಮನಹಳ್ಳಿಯ ಪುಟ್ಟಮ್ಮ, ತಾನು ಬದುಕಲೇ ಬೇಕು ಎಂಬ ಆತ್ಮವಿಶ್ವಾಸದಿಂದ ಹಸು, ಮೇಕೆ ಸಾಕಣೆ ಮಾಡಿ ನೆಮ್ಮದಿಯ ಬದುಕು ಕಂಡುಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಮೊದಲಿಗೆ ಸ್ವಸಹಾಯ ಸಂಘದ ಮೂಲಕ ಸಾಲ ಪಡೆದು 3 ಹಸು ಖರೀದಿಸಿದ ಇವರಿಗೆ, ಆ ಹಸುಗಳೇ ಆದಾಯದ ಮೂಲವಾದವು.
ಜಮೀನಿನಲ್ಲಿ ಸೀಮೆ ಹುಲ್ಲು ಬೆಳೆದು ಹಸುಗಳನ್ನು ಸಾಕಿ, ಹಾಲು ಮಾರಿಕೊಂಡು ಸಂಪಾದನೆ ದಾರಿ ಕಂಡುಕೊಂಡ ಪುಟ್ಟಮ್ಮ, ಹಸುಗಳ ಜತೆಗೆ ಮೇಕೆಗಳನ್ನು ಸಾಕಲು ಶುರು ಮಾಡಿ ಲಾಭ ಗಳಿಸಿದರು. ಹಲವು ಸವಾಲುಗಳ ನಡುವೆ ಕೃಷಿ ಡಿಪ್ಲೊಮಾ ಮಾಡುವ ಛಲದೊಂದಿಗೆ ಓದಲಾರಂಭಿಸಿ ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆಯಾದರು.
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ನ್ಯಾಷನಲ್ ಆಫ್ ಅಗ್ರಿಕಲ್ಚರಲ್ ಎಕ್ಸ್​ಟೆನ್ಷನ್ ಮ್ಯಾನೇಜ್​ವೆುಂಟ್ ಸಂಸ್ಥೆ ನಡೆಸುವ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್​ಟೆನ್ಷನ್ ವಿಷಯದಲ್ಲೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ಸಾವಯವ ಕೃಷಿ ಮಾಡುತ್ತ ಲಾಭ ಗಳಿಸುವ ಮಾರ್ಗ ಕಂಡುಕೊಂಡು ಹಸು, ಮೇಕೆಗಳ ಸಗಣಿ, ಒಣಗಿದ ಮರದ ಎಲೆಗಳಿಂದ ತೊಟ್ಟಿ ನಿರ್ವಹಿಸಿ ಅದನ್ನು ಪೈಪ್ ಮೂಲಕ ಜಮೀನಿಗೆ ಹಾಯಿಸಿ 3 ಎಕರೆಯಲ್ಲಿ ಬಗೆ ಬಗೆಯ ಸೊಪ್ಪು-ತರಕಾರಿ ಬೆಳೆದು ಸ್ವಂತ ವಾಹನದಲ್ಲಿ ಬೆಂಗಳೂರಿಗೆ ಕೊಂಡೊಯ್ದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ.
ಜತೆಗೆ ಶ್ರೀಕಂಠೇಶ್ವರ ಸ್ವಸಹಾಯ ಸಂಘ ಕಟ್ಟಿ ಮಹಿಳೆಯರಿಗೆ ಹೈನುಗಾರಿಕೆ, ರೇಷ್ಮೆ, ಹೊಲಿಗೆ ತರಬೇತಿ, ಗುಡಿ ಕೈಗಾರಿಕೆ ಮಾಡಲು ತರಬೇತಿ ನೀಡಿ, ಸ್ವಸಹಾಯ ಸಂಘಗಳಿಂದ ಸಾಲ ಕೊಡಿಸಿ ಮಾರ್ಗದರ್ಶಕರಾಗಿದ್ದಾರೆ. ಜೇನು ಸಾಕಣೆ, ರೇಷ್ಮೆಗೂಡಿನಲ್ಲಿ ಹಾರ ಮಾಡುವ ಕರಕುಶಲ ವಿಧಾನ ಕರಗತ ಮಾಡಿಕೊಂಡಿದ್ದಾರೆ.
ಹಲವಾರು ತರಬೇತಿಗಳಲ್ಲಿ ಭಾಗವಹಿಸುವ ಇವರು, ಇಂಡಿಯಾ ಇಂಟರ್ ನ್ಯಾಷನಲ್ ಟ್ರೆಡ್ ಫೇರ್(ಡೆಲ್ಲಿ), ಬೆಂಗಳೂರು ಆಕಾಶವಾಣಿ, ಮೈಸೂರು, ಮಂಡ್ಯ ಇನ್ನೂ ಹಲವು ಕಡೆಗಳಲ್ಲಿ ಕೃಷಿ ಸಂಬಂಧಿತ ವಿಷಯವಾಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈಜು, ಕರಾಟೆಯಲ್ಲೂ ಪುಟ್ಟಮ್ಮ ಪರಿಣತರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
