ಬೆಂಗಳೂರು:ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವರ್ಷದ ಮಹಿಳೆ ಪ್ರಶಸ್ತಿಯನ್ನು ಐವರು ಸಾಧಕಿಯರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಮಹಿಳೆಯರ ಕಿರುಪರಿಚಯ ಹೀಗಿದೆ:
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದ ಪುಟ್ಟಮ್ಮ, ಹಸು, ನಾಟಿಕೋಳಿ ಸಾಕಣೆ ಜತೆಗೆ ರೇಷ್ಮೆ ಕರಕುಶಲ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.
ಕುಸ್ತಿಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಈ ಯುವತಿ ಬಡತನದಲ್ಲಿ ಅರಳಿದ ಪ್ರತಿಭೆ. ಗದಗ ತಾಲೂಕಿನ ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರ 23ನೇ ವಯಸ್ಸಿನಲ್ಲಿ ಕುಸ್ತಿಯಲ್ಲಿ ಉತ್ತುಂಗಕ್ಕೆ ಏರಿದ್ದಾರೆ.
‘ಡಿಂಕು’ , ‘ಅಜ್ಜಿ’ ಗೊಂಬೆ ಮೂಲಕ ಜಗತ್ತಿನ ಮೂಲೆಮೂಲೆಗಳಿಗೆ ಸಂಚರಿಸಿ ಕಲಾಪ್ರತಿಭೆ ಮೆರೆದ ‘ಧ್ವನಿ ಮಾಯಾ’ (ವೆಂಟ್ರಿಲೋಕ್ವಿಸಮ್ ಕಲಾವಿದೆ ಇಂದುಶ್ರೀ ರವೀಂದ್ರ) ಅವರ ಧ್ವನಿ ಮಕ್ಕಳಿಂದ ಮುದುಕರವರೆಗೂ ಚಿರಪರಿಚಿತ.
ರಾಯಚೂರು ಜಿಲ್ಲೆಯ ಮೋಕ್ಷಮ್ಮಮಸ್ಕಿ ಅವರು ಸಾವಿರಾರು ಮಹಿಳೆಯರನ್ನು ಈ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅವರಿಗೆ ಬದುಕು ಕಲ್ಪಿಸುವ ವಿಶಿಷ್ಟ ಕಾರ್ಯಗೈದಿದ್ದಾರೆ.
1959ರಲ್ಲಿ ಇಂಜಿನಿಯರಿಂಗ್ ಪದವೀಧರೆಯಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಲ್ಮಿತ್ರಾ ಪಟೇಲ್, ನಂತರ ಮೂರು ದಶಕಗಳ ಕಾಲ ಸಿಮೆಂಟ್ ಅಂಚುಗಳ ತಯಾರಿಕೆ ಸಂಬಂಧಿತ ಉದ್ಯಮದಲ್ಲಿ ಕೆಲಸ ಮಾಡಿದರು. ಪ್ರಸ್ತುತ ಘನತ್ಯಾಜ್ಯ ನಿರ್ವಹಣೆ ವಿಷಯಗಳಲ್ಲಿ ಚಿಂತಕರು ಹಾಗೂ ಸರ್ಕಾರದ ಸಮಿತಿಗಳಲ್ಲಿ ಸಕ್ರಿಯರಾಗಿದ್ದಾರೆ.
ಈ ಐವರು ಮಹಿಳಾ ಸಾಧಕಿಯರಿಗೆ ಈ ಬಾರಿ ವಿಜಯವಾಣಿ ಹಾಗು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯೊ ಹಾಗೂ ಶೋಭಾ ಕರಂದ್ಲಾಜೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಮಹಿಳೆಯರ ಕುರಿತಾದ ಸುದೀರ್ಘ ಮಾಹಿತಿಗಾಗಿಈ ಲಿಂಕ್​ ಅನ್ನು ಒತ್ತಿ:ವಿಶ್ವ ಮಹಿಳಾ ದಿನಾಚರಣೆ: ಹುಬ್ಬಳ್ಳಿಯಲ್ಲಿ ವಾಕಾಥಾನ್​ಗೆ ಚಾಲನೆ, ವಿಜಯವಾಣಿ- ದಿಗ್ವಿಜಯ ನ್ಯೂಸ್ ಆವಿಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
