ಬೆಂಗಳೂರು:ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24ಗಿ7, ಸಿಪಿಸಿ ಕಂಪನಿ ಸಹಯೋಗದೊಂದಿಗೆ ಜನರಿಗೆ ಸಕ್ಸೀಡ್ ಇ- ಲರ್ನಿಂಗ್ ಆ್ಯಪ್​ ತಲುಪಿಸಲು ಆರಂಭಿಸಿರುವ ‘ವಿದ್ಯಾಭಿಯಾನ’ಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅಭಿಯಾನ ಆರಂಭವಾದ ನಾಲ್ಕೇ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ, ಆ್ಯಪ್​​ನಲ್ಲಿರುವ ಪಠ್ಯಕ್ರಮದ ಅಂಶಗಳನ್ನು ನೋಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿ, ಹೆಚ್ಚು ವಿದ್ಯಾರ್ಥಿಗಳು ಇದರ ಸುದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ವಿವಿಧ ಸಚಿವರು, ಶಾಸಕರು, ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಆ್ಯಪ್​ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಲು ಅಭಿಯಾನ ಉತ್ತಮವಾದ ಕಾರ್ಯ ಎಂದು ಶುಭ ಹಾರೈಸಿದ್ದಾರೆ. ವಿದ್ಯಾಭಿಯಾನ ರಾಜ್ಯದ ಮೂಲೆ ಮೂಲೆಯಲ್ಲಿರುವ ಪಾಲಕರು, ವಿದ್ಯಾರ್ಥಿಗಳನ್ನು ತಲುಪುತ್ತಿದ್ದು, ವಿದ್ಯಾರ್ಥಿಗಳಿಗೆ ಆಪ್​ನಲ್ಲಿರುವ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 98440 99258 ಸಂರ್ಪಸಬಹುದು.
ಟ್ರಯಲ್ ಉಚಿತ:ವಿದ್ಯಾರ್ಥಿಗಳಿಗೆ ಈ ಆಪ್ ಇತರೆ ಆಪ್​ಗಳಿಗಿಂತ ಹೇಗೆ ವಿಭಿನ್ನವಾಗಿದೆ. ಇದರಲ್ಲಿರುವ ಒಟ್ಟಾರೆ ವೀಡಿಯೋಗಳ ಗುಣಮಟ್ಟ ಸೇರಿ ಬೋಧನಾ ವಿಧಾನದ ಬಗ್ಗೆ ತಿಳಿಸಿಕೊಡಲು ಉಚಿತ ಟ್ರಯಲ್​ಗೆ ಅವಕಾಶ ಕಲ್ಪಿಸಿದೆ. ಇದನ್ನು ಆಯ್ಕೆ ಮಾಡಿಕೊಂಡಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯಗಳಲ್ಲಿನ ಒಂದು ಅಧ್ಯಯನವನ್ನು ಉಚಿತವಾಗಿ ವ್ಯಾಸಂಗ ಮಾಡಬಹುದು. ಪ್ರತಿ ಅಧ್ಯಯನ ತೆರೆದಾಗ ಅಲ್ಲಿ ‘ಲಾಕ್’ ಎಂಬ ಚಿನ್ಹೆ ತೋರಿಸುತ್ತದೆ. ಇದೇ ಮಾದರಿ ಅನ್​ಲಾಕ್ ಇರುವ ಚಿನ್ಹೆಯೂ ಇರಲಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ, ಉಚಿತವಾಗಿ ಆ ಅಧ್ಯಯನವನ್ನು ಅಭ್ಯಾಸ ಮಾಡಬಹುದಾಗಿದೆ.
ಬೆರಳ ತುದಿಯಲ್ಲೇ ಪಠ್ಯಕ್ರಮದ ಸಂಪೂರ್ಣ ಮಾಹಿತಿ ನೀಡುತ್ತಿರುವುದಕ್ಕೆ ಪತ್ರಿಕೆ, ನ್ಯೂಸ್ ಚಾನಲ್​ಗೆ ಧನ್ಯವಾದ. ಆಂದೋಲನ ಯಶಸ್ವಿಯಾಗಲಿ.
|ಎಸ್.ಸುರೇಶ್ ಕುಮಾರ್ಶಿಕ್ಷಣ ಸಚಿವ
ವಿದ್ಯಾರ್ಥಿಗಳಿಗೆ ಸ್ಮಾಟ್ ಆಗಿ ಶಿಕ್ಷಣ ನೀಡುವ ಉದ್ದೇಶದಿಂದ ಇಡೀ ಪಠ್ಯಕ್ರಮವನ್ನು ಆ್ಯಪ್​​ನಲ್ಲಿ ಲೋಡ್ ಮಾಡಿದೆ. ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಕಾರ್ಯ ಶ್ಲಾಘನೀಯ.
|ವೈ.ಎಸ್.ವಿ.ದತ್ತಮಾಜಿ ಶಾಸಕ
ಕರೊನಾ ವೇಳೆ ಕಲಿಕೆಯಿಂದ ಮಕ್ಕಳು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಿರುವುದು ಹೆಚ್ಚು ಸೂಕ್ತವಾಗಿದೆ. ಇದೊಂದು ವಿಶೇಷವಾದ ಕಾರ್ಯಕ್ರಮ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ.
|ಕೆ.ಗೋಪಾಲಯ್ಯಆಹಾರ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
