ಬೆಂಗಳೂರು:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಿಶೇಷ ಪ್ರವೇಶ ಘೋಷಿಸಿರುವ ವಂಡರ್‌ಲಾ, ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡುವ ಮೊದಲ ಸಾವಿರ ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತ ನೀಡಲಿದೆ.
ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್‌ 8ರಂದು ವಂಡರ್‌ಲಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಇರಲಿದೆ. ಈ ದಿನವನ್ನು ಮಹಿಳೆಯರಿಗಾಗಿ ಮೀಸಲಿಡುವ ಉದ್ದೇಶದಿಂದ 10 ವರ್ಷಕ್ಕಿಂತ ಮೇಲ್ಪಟ್ಟ ಗಂಡು ಮಕ್ಕಳಿಗೂ ಪ್ರವೇಶ ಇರುವುದಿಲ್ಲ.
ಮಾ.8 ರಂದು ಬೆಂಗಳೂರಿನಿಂದ ವಂಡರ್​ಲಾಗೆ ಬರುವ ಮಹಿಳೆಯರಿಗೆ ವೋಲ್ವೋ ಬಸ್ ಸೇವೆಯನ್ನು ಒದಗಿಸಲು ಬಿಎಂಟಿಸಿ ಸಹಯೋಗವನ್ನು ಘೋಷಿಸಿದೆ. ಹೆಚ್ಚುವರಿಯಾಗಿ ಅದೇ ದಿನ ಪಾರ್ಕ್ ಟಿಕೆಟ್ ಕೌಂಟರ್‌ನಲ್ಲಿ ವೋಲ್ವೋ ಬಸ್ ಟಿಕೆಟ್ ಪ್ರಸ್ತುತಪಡಿಸುವ ಮಹಿಳಾ ಪ್ರಯಾಣಿಕರಿಗೆ ವಂಡರ್ಲಾ ಪಾರ್ಕ್ ಟಿಕೆಟ್‌ಗಳ ಮೇಲೆ 15% ರಿಯಾಯಿತಿ ನೀಡುತ್ತಿದೆ.
“ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮಾರ್ಚ್ 8ರಂದು ವಂಡರ್‌ಲಾ ಪಾರ್ಕ್‌ಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವುದರ ಮೂಲಕ ಮಹಿಳೆಯರಿಗೆ ಅವಿಸ್ಮರಣೀಯ ದಿನವನ್ನಾಗಿಸಲಿದ್ದೇವೆ ಎಂದು ವಂಡರ್‌ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ .ಕೆ. ಚಿಟ್ಟಿಲಪ್ಪಿಳ್ಳಿ ಪ್ರತಿಕ್ರಿಯಿಸಿದ್ದಾರೆ.
ಬಿಎಂಟಿಸಿ ಈ ಹಿಂದೆಯೂ ವಂಡರ್‌ಲಾ ಹಾಲಿಡೇಸ್‌ನೊಂದಿಗೆ ಸಹಯೋಗ ಹೊಂದಿದ್ದು, ಇದರ ಫಲಿತಾಂಶವು ಪರಿಣಾಮಕಾರಿಯಾಗಿದೆ. ಸಾರ್ವಜನಿಕರಿಗೆ ಸಹಾಯವಾಗುವ ಇಂತಹ ಅನೇಕ ವ್ಯವಸ್ಥೆಯನ್ನು ಆಯೋಜಿಸಲು ಬಿಎಂಟಿಸಿ ಸಂಸ್ಥೆಯು ಎದುರುನೋಡುತ್ತಿದೆ ಎಂದು ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಸಿ ನಾಗರಾಜ್ ಮೂರ್ತಿ ತಿಳಿಸಿದ್ದಾರೆ.
ಕೊಡುಗೆಯ ಕುರಿತು ಹೆಚ್ಚಿನ ವಿವರಗಳಿಗಾಗಿ,https://www.wonderla.com/offers/womens-day-offer-at-wonderla-parks.htmlವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು. ಸಂಪರ್ಕ.ಸಂ. 91 80372 30333, 91 80350 73966. ವಂಡರ್​ಲಾ ಕುರಿತು ಹೆಚ್ಚಿನ ಮಾಹಿತಿಗಾಗಿ,http://www.wonderla.comಗೆ ಭೇಟಿ ನೀಡಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
