ಮಂಗಳೂರು:ಲಾರಿ, ಟ್ರಕ್​ಗಳಲ್ಲಿ ಓವರ್​ಲೋಡ್​ಗೆ ಸರ್ಕಾರ ಅಧೀನದ ಸಂಸ್ಥೆಗಳೂ ಕಾರಣವಾಗಿವೆ. ಭ್ರಷ್ಟಾಚಾರಿ ಸಾರಿಗೆ, ಪೊಲೀಸ್ ಇಲಾಖೆಗಳಿಂದಾಗಿ ಇದು ನಡೆಯುತ್ತಿದೆ. ಸೆಪ್ಟೆಂಬರ್ 1ರಿಂದ ಇಂತಹ ಯಾವುದೇ ಓವರ್​ಲೋಡ್ ಸೂಚನೆಯನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಲಾರಿ ಮಾಲೀಕರು, ಏಜೆಂಟ್​ಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ನವಮಂಗಳೂರು ಬಂದರು ಮಂಡಳಿಯಿಂದಲೇ ಹೊರಡುವ ಟ್ರಕ್​ಗಳಲ್ಲಿ ಟನ್​ಗಟ್ಟಲೆ ಓವರ್​ಲೋಡ್ ಮಾಡಲಾಗುತ್ತಿದೆ. ಇದನ್ನು ನಿಷೇಧಿಸುವಂತೆ ಜಿಲ್ಲಾಡಳಿತ, ಸಾರಿಗೆ ಇಲಾಖೆಗೂ ವಿನಂತಿಸ ಲಾಗಿದೆ. ಓವರ್​ಲೋಡ್​ನಿಂದಾಗಿ ರಸ್ತೆ ಕೆಡುತ್ತದೆ, ಅಲ್ಲದೆ ಎಲ್ಲ ಲಾರಿ ಮಾಲೀಕರಿಗೆ ಅವಕಾಶಗಳು ಸಿಗುತ್ತಿಲ್ಲ. ಭ್ರಷ್ಟಾಚಾರ ನಿಲ್ಲಬೇಕು, ಓವರ್​ಲೋಡ್ ಕೂಡ ನಿಲ್ಲಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ ಮುಂತಾದೆಡೆ ಟ್ರಕ್​ಗಳ ಓವರ್​ಲೋಡ್​ನಿಂದ ರಸ್ತೆ ಹಾಳಾದರೆ ಕೇಸ್ ಹಾಕುತ್ತಾರೆ, ಅದು ನಮ್ಮಲ್ಲೂ ನಡೆಯಲಿ. ಹೊರರಾಜ್ಯ ದಿಂದ ಬರುವ ಟ್ರಕ್​ಗಳು ಸಾರಿಗೆ ನಿಯಮ ಪ್ರಕಾರ, ಇಲ್ಲಿ ಸರಕು ಸಾಗಾಟ ಮಾಡುವಂತಿಲ್ಲ. ಆದರೆ ನಿಯಮ ಉಲ್ಲಂಘನೆ ಆಗುತ್ತಿದ್ದು, ಇದನ್ನೂ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಯಾರಾ ಫ್ಯುಯಲ್ಸ್ ಹಾಗೂ ರಿಲಯನ್ಸ್ ಕಂಪನಿಯವರು ಜಿಲ್ಲೆಯ 1000ಕ್ಕೂ ಅಧಿಕ ಟ್ಯಾಂಕರ್​ಗಳನ್ನು ಕಡೆಗಣಿಸಿ ಹೊರರಾಜ್ಯದ, ಹೊರಜಿಲ್ಲೆಯ ಟ್ಯಾಂಕರ್​ನವರಿಗೆ ಮಣೆ ಹಾಕುವುದು ಸರಿಯಲ್ಲ, ನಮ್ಮೆಲ್ಲ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇರಿಸಿದ್ದೇವೆ, 15 ದಿನಗಳ ಗಡುವನ್ನೂ ನೀಡಿದ್ದೇವೆ. ಆ.18ರಂದು ರಾಜ್ಯಮಟ್ಟದ ಸಭೆಯಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.
ಏಕಮಾದರಿ ದರ:2015ರಲ್ಲಿ -ಠಿ;52 ಇದ್ದ ಡೀಸೆಲ್ ದರ ಈಗ -ಠಿ;96 ತಲುಪಿದೆ. ವಿಮೆ, ಬಿಡಿಭಾಗಗಳ ದರ ಏರಿದೆ. ಆದರೂ ಕಾರ್ಯಾಚರಣೆಗೆ ಸಿದ್ಧರಿದ್ದೇವೆ. ಏಕಮಾದರಿ ದರ ನಿಗದಿಪಡಿಸಲು ಅವಕಾಶ ನೀಡಬೇಕೆಂಬುದು ನಮ್ಮ ಬೇಡಿಕೆ ಎಂದು ದ.ಕ ಟ್ರಕ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುನೀಲ್ ಡಿ’ಸೋಜ ಹೇಳಿದರು.
ಗುಜರಿ ನೀತಿಗೆ ವಿರೋಧ:ಕೇಂದ್ರ ಸರ್ಕಾರ 15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕಬೇಕೆಂಬ ನೀತಿ ತರುತ್ತಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಷಣ್ಮುಗಪ್ಪ, ಬೇಕಾದರೆ 8 ವರ್ಷಕ್ಕೊಮ್ಮೆ ಇಂಜಿನ್ ಬದಲಾಯಿಸುವ ನೀತಿ ತರಲಿ. ಅದು ಬಿಟ್ಟು ಇಡೀ ವಾಹನ ಗುಜರಿಗೆ ಹಾಕಿದರೆ ನಾವು 30-40 ಲಕ್ಷ ರೂ. ಕೊಟ್ಟು ಟ್ರಕ್ ಖರೀದಿಸಿದವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ಒಟಿಟಿಯಲ್ಲಿ ಬರಲಿದೆ ಪದ್ಮಶ್ರೀ ಪುರಸ್ಕೃತ ನಟಿ ಭಾರತಿ ವಿಷ್ಣುವರ್ಧನ್​ ಅವರ ‘ಬಾಳೆ ಬಂಗಾರ’

ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + two =
Remember me
