ಹಾವೇರಿ:ಈ ಸುದ್ದಿ ನೋಡಿದ್ರೆ ನಿಮ್ಮ‌ ಮೈ ಜುಮ್ ಅನ್ನೋದು ಗ್ಯಾರಂಟಿ. ಶಾಲೆ ಇಲ್ಲದ ಕಾರಣ ಕೆಲ ಮಕ್ಕಳು ಒಂದಲ್ಲ ಒಂದು ಅವಾಂತರ ಮಾಡಿಕೊಳ್ಳುತ್ತಲೇ ಇದ್ದಾರೆ. ಇಲ್ಲೊಬ್ಬ ಬಾಲಕ ಕ್ರಿಕೆಟ್ ಆಡುತ್ತ ಬಾಲ್​ ಎತ್ತಿಕೊಳ್ಳಲು ತಡೆಗೋಡೆ ಮೇಲೆ ಜಿಗಿದ ಪರಿಣಾಮ ಆತನ ತೊಡೆಗೆ ಮರದ ಕಡ್ಡಿ ಹೊಕ್ಕಿದ್ದು, ನರಳಾಡುತ್ತಿದ್ದ ದೃಶ್ಯ ಬೆಚ್ಚಿಬೀಳಿಸುವಂತಿತ್ತು!
ಸವಣೂರ ತಾಲೂಕಿನ ಕಳಸೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು. 9 ವರ್ಷದ ತರುಣ್ ಬಳ್ಳಾರಿ ಎಂಬಾತನ ತೊಡೆಗೆ ಮರದ ಕಡ್ಡಿ ಹೊಕ್ಕಿದ್ದು, ಅದರ ಸಮೇತ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಳಸೂರ ಗ್ರಾಮದಲ್ಲಿ ತರುಣ್ ಮತ್ತು ಸ್ನೇಹಿತರ ತಂಡ ಶನಿವಾರ ಕ್ರಿಕೆಟ್​ ಆಡುತ್ತಿದ್ದರು. ಕ್ರಿಕೆಟ್​ ಬಾಲನ್ನು ತರಲು ಶಾಲಾ ಕಾಂಪೌಂಡ್ ಹತ್ತಿದ್ದ ಬಾಲಕ, ಜಂಪ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದ. ಈ ವೇಳೆ ಬಾಲಕನ ಬಲತೊಡೆಗೆ ಮರದ ಸಣ್ಣ ಕೊಂಬೆ ಹೊಕ್ಕಿದೆ. ನೋವಿನಿಂದ ನರಳುತ್ತಾ ಬಿದ್ದ ಬಾಲಕನನ್ನು ರಕ್ಷಣೆ ಮಾಡಿದ ಗೆಳೆಯರು, ಸ್ಥಳೀಯರ ನೆರವಿನಿಂದ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಬಾಲಕನ ಕಾಲಿಗೆ ಹೆಚ್ಚಿನ ಘಾತವಾಗಿಲ್ಲ. ಕಟ್ಟಿಗೆ ತೊಡೆ ತೂರಿ ಬಂದಿರುವುದರಿಂದ ಸೋಂಕಿನತ್ತ ನಿಗಾ ಇರಿಸಲಾಗಿದೆ ಎಂದು ಕಿಮ್ಸ್​ ಪ್ರಭಾರ ವೈದ್ಯಕಿಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ತಿಳಿಸಿದ್ದಾರೆ. ಮೇಲಿಂದ ಬಿದ್ದಿರುವುದರಿಂದ ಕಟ್ಟಿಗೆ ಕಾಲು ತೂರಿ ಹೊರ ಬಂದಿದೆ. ಆದರೆ ಮಾಂಸ, ರಕ್ತನಾಳಗಳಿಗೆ ಪೆಟ್ಟಾಗಿಲ್ಲ. ಚರ್ಮಕ್ಕೂ ಅಷ್ಟೊಂದು ಧಕ್ಕೆಯಾಗಿಲ್ಲ. ಮಕ್ಕಳ ಶಸ ಚಿಕಿತ್ಸಾ ವಿಭಾಗದಲ್ಲಿ ಡಾ. ರವೀಂದ್ರ ಖಾಸನೀಸ ನೇತೃತ್ವದ ತಂಡ ಚಿಕಿತ್ಸೆ ಮುಂದುವರಿಸಿದೆ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್​ ಜತೆ ಕೈ ಜೋಡಿಸಿದ ಬಿಜೆಪಿ! ಇದನ್ನು ದೊಡ್ಡ ವಿಷಯವಾಗಿ ಬಿಂಬಿಸಬೇಡಿ ಎಂದ ಸಂಸದ

ಗಂಡನ ಆಟೋದಲ್ಲಿ ಸುತ್ತುತ್ತಾಳೆ, ಕ್ಷಣಾರ್ಧದಲ್ಲಿ ಲಕ್ಷ-ಲಕ್ಷ ಹಣ ತರ್ತಾಳೆ! ಬೆಚ್ಚಿಬೀಳಿಸುತ್ತೆ ಈ ದಂಪತಿಯ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
