ಯಾರ ಮನಸ್ಸು ಸದಾ ಪ್ರಸನ್ನವಾಗಿ ಇರುತ್ತದೆಯೋ, ಅವರೇ ಅನ್ಯರ ಜೊತೆಗೆ ಪ್ರೀತಿಯಿಂದ ಮಾತನಾಡಬಲ್ಲರು. ಮನಸ್ಸಿನಲ್ಲಿಯ ಈ ಪ್ರೀತಿಯು ಉತ್ತಮ ಆರೋಗ್ಯದ ಲಕ್ಷಣವು. ಸದಾ ಆರೋಗ್ಯವಂತನಾಗಿ ಇರಬೇಕೆಂದರೆ ಅನ್ಯರ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿ ಪ್ರೀತಿಯನ್ನು ತುಂಬಿಕೊಂಡಿರ ಬೇಕು. ಅಂತೆಯೇ ಚರಕ ಮಹರ್ಷಿಗಳು ಪ್ರಿಯವಾದಿತ್ವವನ್ನು ಒಂದು ದಿವ್ಯರಸಾಯನವನ್ನಾಗಿ ಹೇಳಿದ್ದಾರೆ. ಪ್ರೀತಿಯ ಮಾತುಗಳಿಂದ ಆರೋಗ್ಯವು ಸುಧಾರಿಸುವದಲ್ಲದೆ ಪ್ರೀತಿಯ ಮಾತುಗಳನ್ನು ಕೇಳಿದಾಗ ರೋಗಿಯ ಆರೋಗ್ಯದಲ್ಲಿಯೂ ಗಣನೀಯ ಸುಧಾರಣೆಗಳು ಕಂಡು ಬರುತ್ತವೆ.
ಅಂತೆಯೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಬಳಿ ಹೋಗಿ ಒಂದೆರಡು ಧೈರ್ಯದ ಮಾತುಗಳನ್ನು ಹೇಳುವ ಪದ್ಧತಿಯು ರೂಢಿಯಲ್ಲಿದೆ. ಯಾರ ಮನಸ್ಸಿನಲ್ಲಿ ಸೌಹಾರ್ದ, ಸೌಮ್ಯತೆಗಳು ತುಂಬಿ ರುತ್ತವೆಯೋ ಅವರ ವಾಣಿಯಿಂದ ಮಾತ್ರ ಪ್ರೀತಿಯ ಮಾತುಗಳು ಬರಲು ಸಾಧ್ಯ. ಮನಸ್ಸಿನಲ್ಲಿ ಕ್ರೋಧ ಮಾತ್ಸರ್ಯಾದಿಗಳು ತುಂಬಿರು ವಾಗ ಹೊರಬಂದ ಮಾತುಗಳು ಶಸ್ತ್ರದಂತೆ, ಬೆಂಕಿಯ ಜ್ವಾಲೆಗಳಂತೆ ಅನರ್ಥವನ್ನೇ ಉಂಟು ಮಾಡುತ್ತವೆ. ಅಂತೆಯೇ ವೇದದಲ್ಲಿ ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರ್ರೂಯಾತ್’- ಸತ್ಯವನ್ನೇ ನುಡಿಯಬೇಕು, ಅದನ್ನು ಸಹ ಪ್ರೀತಿಯಿಂದಲೇ ನುಡಿಯಬೇಕು ಎಂಬುದಾಗಿ ಹೇಳುವುದರ ಮೂಲಕ ಪ್ರಿಯವಾದಿತ್ವಕ್ಕೆ ಮಹತ್ವವನ್ನು ಕೊಡಲಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂಬುದಾಗಿ ಬಸವಣ್ಣನವರು ಮಾತಿನ ಮಹತ್ವವನ್ನು ವಿವರಿಸಿದ್ದಾರೆ.
ಪ್ರಿಯವಾದ ಮಾತಿನ ಬಗ್ಗೆ ವೇದವನ್ನೇ ಮೊದಲು ಮಾಡಿಕೊಂಡು ವಚನ ಶಾಸ್ತ್ರಪರ್ಯಂತವಾಗಿ ಸರ್ವರೂ ಮಹತ್ವವನ್ನು ಕೊಟ್ಟಿದ್ದಾರೆ. ಈ ಪ್ರಿಯವಾದಿತ್ವವು ಮನಸ್ಸಿನ ಸಂತೋಷದ ಸಂಕೇತವು. ಮನಸ್ಸಿನ ಸಂತೋಷವೇ ಆರೋಗ್ಯದ ಲಕ್ಷಣ. ಸದಾ ಸಂತುಷ್ಟನಾದ ವ್ಯಕ್ತಿ ನಿರೋಗಿ. ಅಂತೆಯೇ ಚರಕಮಹರ್ಷಿಗಳು ಪ್ರಿಯವಾದಿತ್ವವನ್ನು ಒಂದು ದಿವ್ಯ ರಸಾಯನ ಎಂದಿದ್ದಾರೆ. ಕಾರಣ ಪ್ರತಿಯೊಬ್ಬರೂ ಅನ್ಯರ ಜೊತೆಗೆ ಮಾತನಾಡು ವಾಗ ತಲೆಯ ಮೇಲೆ ಬರ್ಫಇಟ್ಟುಕೊಂಡು ಬಾಯಲ್ಲಿ ಸಕ್ಕರೆಯನ್ನು ಹಾಕಿಕೊಂಡು ಮಾತನಾಡಬೇಕು ಎಂಬುದಾಗಿ ಹೇಳಿದ್ದಾರೆ. ಅಂದರೆ ಮನ ಸ್ಸನ್ನು ಶಾಂತವಾಗಿಟ್ಟು ಪ್ರಸನ್ನತೆಯನ್ನು ಕಾಪಾಡಿಕೊಂಡು ಸರ್ವರ ಜೊತೆ ಪ್ರೀತಿಯಿಂದ ಮಾತನಾಡುತ್ತಾ ಸದಾ ಆರೋಗ್ಯವಂತರಾಗಿ ಇರಬೇಕು.
ಪಂದ್ಯದ ಮಧ್ಯೆ ತನ್ನ ಪಾದ ಸ್ಪರ್ಶಿಸಿದ ಫ್ಯಾನ್​ಗೆ ಧೋನಿ ಹೇಳಿದ ಕಿವಿಮಾತಿದು; ನೀವಿಲ್ಲದ ಐಪಿಎಲ್​ ಏನೇನೂ ಅಲ್ಲ…

ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
