ಬೆಂಗಳೂರು:ಪದವಿ ಮುಗಿಸಿದ ಯುವಕರೇ ಎಚ್ಚರ! ನಿಮಗೂ ಈತನಿಂದ ಜಾಬ್​ ಆಫರ್​ ಲೆಟರ್​ ಬಂದಿರಬಹುದು ಒಮ್ಮೆ ಚೆಕ್​ ಮಾಡಿಕೊಳ್ಳಿ…
ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಎಸ್​ಎಸ್ಎಲ್​ಸಿ -ಪಿಯು ಬೋರ್ಡ್​ನಲ್ಲಿ ಕೆಲಸ ಸಿಗುತ್ತೆ ಎಂಬ ಆಸೆಗೆ ಬಿದ್ದು ಲಕ್ಷಲಕ್ಷ ಹಣ ಕೊಟ್ಟವರೀಗ ಕೈ ಸುಟ್ಟಿಕೊಂಡಿದ್ದಾರೆ. ಹೌದು, ಡಿಗ್ರಿ ಮುಗಿಸಿದ ಯುವಕರನ್ನೇ ಟಾರ್ಗೆಟ್​ ಮಾಡುತ್ತಿದ್ದ ಖತರ್ನಾಕ್​ ವಂಚಕನೊಬ್ಬ ಸರ್ಕಾರಿ ಕೆಲಸ ಕೊಡಿಸೋದಾಗಿ 2 ಕೋಟಿಗೂ ಅಧಿಕ ಹಣವನ್ನು ಪೀಕಿದ್ದಾರೆ. ನಕಲಿ ಆಫರ್ ಲೆಟರ್ ಕೊಟ್ಟು ತಾನೆ ಕೆಲದಿನ ಸಂಬಳವನ್ನೂ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಈ ಗೋಲ್ಮಾಲ್​ ಗೋವಿಂದ ಮೋಸದ ದುಡ್ಡಲ್ಲಿ ಹೆಲಿಕಾಪ್ಟರ್​ನಲ್ಲಿ ತೀರ್ಥಯಾತ್ರೆ ಮಾಡಿ, ತಿರುಪತಿ ಹುಂಡಿಗೂ 5 ಲಕ್ಷ ಹಾಕುವ ಮೂಲಕ ತಿಮ್ಮಪ್ಪನಿಗೂ ವಂಚನೆಯ ಪಾಲು ಕೊಟ್ಟಿದ್ದಾನೆ.
ಅಂದಹಾಗೆ ಯುವಕರಿಗೆ ಪಂಗನಾಮ ಹಾಕಿದ್ದವನ ಹೆಸರು ಪ್ರಭಾಕರ್​. ಬೆಂಗಳೂರು ಮೂಲದ ಪ್ರಭಾಕರ್​, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ಇತರ ಜಿಲ್ಲೆಗಳ ಯುವಕರನ್ನು ವಂಚಿಸಿದ್ದಾನೆ. ಕೆಲಸ ಕೊಡಿಸುವುದಾಗಿ ಹಣ ಪಡೆದು ನಕಲಿ ಆಫರ್​ ಲೆಟರ್​ ಕೊಡುತ್ತಿದ್ದ ಪ್ರಭಾಕರ್​, ಆರಂಭದಲ್ಲಿ ಯಾರಿಗೂ ಅನುಮಾನ ಬಾರದಂತೆ ಈತನೇ ಕೆಲ ತಿಂಗಳ ಕಾಲ ಸಂಬಳ ನೀಡುತ್ತಿದ್ದ.
ಈತನ ವಂಚನೆ ಬಗ್ಗೆ ಚಿಕ್ಕಮಗಳೂರು ಮೂಲದ ಯುವಕ ಉಮೇಶ್ ದೂರು ನೀಡಿದ್ದರು. ಈ ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಭಾಕರ್​ನ ಗೋಲ್ಮಾಲ್​ ರಹಸ್ಯ ಬಯಲಾಗಿದೆ. ಪ್ರಭಾಕರ್​ ಮತ್ತು ಈತನ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಆಗಬೇಕಿದ್ದ ಪ್ರೇಮಿಗಳು ಜಮೀನಿನಲ್ಲೇ ವಿಷ ಕುಡಿದರು! ಆತ್ಮಹತ್ಯೆಗೆ ಅದೇ ಕಾರಣವಾಯ್ತ?

ಇನ್ನೇನು ನಿಶ್ಚಿತಾರ್ಥ ನಡೆಯಬೇಕು… ಅಷ್ಟರಲ್ಲಿ ಬಂದ ಜವರಾಯ ಅಕ್ಕ-ತಂಗಿಯ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
