ಬೆಂಗಳೂರು :ಕೆಲಸದಲ್ಲಿನ ಒತ್ತಡದಿಂದ ಮತ್ತು ಸಂಬಳ ಹೆಚ್ಚು ಮಾಡಿಲ್ಲ ಅಂತ ಮನನೊಂದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ, ಕಾರ್ಖಾನೆಯ ಆಡಳಿತದವರೇ ತನ್ನ ಸಾವಿಗೆ ಕಾರಣ ಎಂದು ಡೆತ್​ನೋಟ್ ಬರೆದಿಟ್ಟಿದ್ದಾನೆ.
ದಾವಣಗೆರೆ ಮೂಲದ 28 ವರ್ಷದ ಶಿವರಾಜ, ಮೃತ ಕಾರ್ಮಿಕ. ಬೆಂಗಳೂರು ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲೇ ನೇಣುಬಿಗಿದುಕೊಂಡಿದ್ದಾನೆ.
ಇದನ್ನೂ ಓದಿ:ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!
ತನ್ನ ನಿಜವಾದ ಸಂಬಳ ಕೇವಲ 18,000 ರೂ.ಗಳಾಗಿದ್ದು, ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕೆಲವು ಹಿರಿಯ ಅಧಿಕಾರಿಗಳು ನೋವು ಕೊಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಕಂಪನಿಯಲ್ಲಿ ಸಿಗುವ ಇನ್ಷೂರೆನ್ಸ್​ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸಾರಿ ಕೇಳಿದ್ದಾನೆ.
ಕುಸ್ತಿಪಟು ಸಾಗರ್​ ಧನಕರ್​​ ಕೊಲೆ : ಮತ್ತೊಬ್ಬ ಆಟಗಾರನ ಬಂಧನ

ಭಾರತೀಯ ಕಂಪೆನಿಗಳಿಂದ ಸೀಫುಡ್​ ಆಮದು ನಿಲ್ಲಿಸಿದ ಚೀನಾ! ಕಾರಣ ಏನು ಗೊತ್ತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
