ಗಿರೀಶ್ ಗರಗ ಬೆಂಗಳೂರು
ಲಾಕ್​ಡೌನ್ ನಿರ್ಬಂಧಗಳನ್ನು ಸಡಿಲಿಸಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳ ಮರುಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಮೆಟ್ರೋ ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳಿಗೆ ಕಾರ್ವಿುಕರ ಬರ ತಟ್ಟಿದೆ.
ಲಾಕ್​ಡೌನ್ ಬಳಿಕ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿದ್ದ ವಲಸೆ ಕಾರ್ವಿುಕರು ತಂತಮ್ಮ ಊರಿಗೆ ತೆರಳಿದ್ದಾರೆ. ಅದರಿಂದಾಗಿ ಪ್ರಮುಖ ಯೋಜನೆಗಳ ಕಾಮಗಾರಿಗೆ ತಡೆಯುಂಟಾಗಿದೆ. ಪ್ರಮುಖವಾಗಿ ಬೆಂಗಳೂರು ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ, ವಸತಿ ಸಮುಚ್ಚಯ ನಿರ್ಮಾಣ ಇನ್ನಿತರ ಕೆಲಸಗಳಿಗೆ ಕಾರ್ವಿುಕರ ಕೊರತೆ ಎದುರಾಗಿದೆ.
ಕಾರ್ವಿುಕರ ಕೊರತೆ: ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಿಂದ 20 ಲಕ್ಷಕ್ಕೂ ಹೆಚ್ಚಿನ ಕಾರ್ವಿುಕರಿದ್ದು, ಸುಮಾರು 10 ಲಕ್ಷ ಮಂದಿ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಶೇ. 50 ಕಾರ್ವಿುಕರು ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕದವರಾಗಿದ್ದು, ಈಗಾಗಲೇ ನಗರ ಪ್ರದೇಶ ತೊರೆದು ತಮ್ಮ ಊರುಗಳಿಗೆ ತೆರಳಿದ್ದಾರೆ.
ಶಾಲಾ ಕೊಠಡಿಗಿಲ್ಲ ಸಮಸ್ಯೆ: ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳುವ ಕೆಲಸಗಳಿಗೆ ಸಂಬಂಧಿಸಿದಂತೆ ಕಾಮಗಾರಿ ನಡೆಯುವ ಪ್ರದೇಶದಲ್ಲಿನ ಕಾರ್ವಿುಕರನ್ನೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕಟ್ಟಡ ನಿರ್ವಣದಂತಹ ಕೆಲಸಗಳಿಗೆ ಕಾರ್ವಿುಕರ ಸಮಸ್ಯೆಯಿಲ್ಲ. ಅದರಲ್ಲೂ ಪ್ರವಾಹದಿಂದ ಹಾಳಾಗಿರುವ ಶಾಲಾ ಕೊಠಡಿಗಳ ಮರುನಿರ್ವಣಕ್ಕೆ ಕಾರ್ವಿುಕರ ಸಮಸ್ಯೆ ಎದುರಾಗಿಲ್ಲ. ಆದರೆ, ರಸ್ತೆ ದುರಸ್ತಿ, ನಿರ್ವಣದಂತಹ ಕೆಲಸಗಳಿಗೆ ನುರಿತ ಕಾರ್ವಿುಕರೇ ಬೇಕಾಗಿರುವ ಕಾರಣ, ಅದಕ್ಕೆ ಕೊರತೆ ಎದುರಾಗಿದೆ. ಹೀಗಾಗಿ ತಕ್ಷಣಕ್ಕೆ ಆ ಕಾಮಗಾರಿಗಳು ಆರಂಭವಾಗುವುದಿಲ್ಲ.
ಮೆಟ್ರೋಗೆ ಅಡ್ಡಿಯಿಲ್ಲ
ಕಳೆದೊಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ 2ನೇ ಹಂತದ 72 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಪ್ರಮುಖವಾಗಿ ಅಂತಿಮ ಹಂತದಲ್ಲಿರುವ ನಾಯಂಡಹಳ್ಳಿಯಿಂದ ಚಲ್ಲಘಟ್ಟ, ಪುಟ್ಟೇನಹಳ್ಳಿ ಕ್ರಾಸ್​ನಿಂದ ಅಂಜನಾಪುರ ಟೌನ್​ಶಿಪ್ ಮಾರ್ಗಗಳಲ್ಲಿ ಕಾಮಗಾರಿ ಮುಂದುವರಿದಿದೆ. ಕಾರ್ವಿುಕರ ಲಭ್ಯತೆ ಆಧರಿಸಿ ಉಳಿದೆಡೆ ಹಂತ ಹಂತವಾಗಿ ಕೆಲಸ ಆರಂಭವಾಗಲಿದೆ. ಅಲ್ಲದೆ, ಲಾಕ್​ಡೌನ್ ಅವಧಿಯಲ್ಲಿ ಮೆಟ್ರೋದ ಕಾರ್ವಿುಕರ ಕಾಲನಿಯಲ್ಲಿ ಕಾರ್ವಿುಕರು ವಾಸ್ತವ್ಯ ಹೂಡಿದ್ದರಿಂದ ಮೆಟ್ರೋ ಕಾಮಗಾರಿಗೆ ಸಮಸ್ಯೆ ಎದುರಾಗಿಲ್ಲ.
2ನೇ ಟರ್ವಿುನಲ್​ಗೂ ಸಮಸ್ಯೆಯಿಲ್ಲ: ಲಾಕ್​ಡೌನ್​ಗೂ ಮುನ್ನ ಕೆಲಸ ಮಾಡುತ್ತಿದ್ದ 6 ಸಾವಿರ ಕಾರ್ವಿುಕರಿಗೆ ವಸತಿ ವ್ಯವಸ್ಥೆ ಮಾಡಿದ್ದರಿಂದ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿನ ಎರಡನೇ ಟರ್ವಿುನಲ್ ನಿರ್ಮಾಣ ಕಾರ್ಯಕ್ಕೂ ಸಮಸ್ಯೆಯಾಗಿಲ್ಲ.
ಗ್ರಾಮೀಣಾಭಿವೃದ್ಧಿಗೆ ಸ್ಥಳೀಯರ ಬಲ
ನರೇಗಾ ಕೆಲಸಗಳಿಗೆ ಆಯಾ ಹಳ್ಳಿಯವರನ್ನೇ ಆಯ್ಕೆ ಮಾಡಲು ಸೂಚಿಸಲಾಗಿದೆ. ಅದು ನಿಯಮ ಕೂಡ. ಹೀಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಳ್ಳಿಗಳಲ್ಲಿ ನಡೆಯುವ ಕೆಲಸಗಳನ್ನು ನರೇಗಾ ಅಡಿಯಲ್ಲಿ ತೆಗೆದುಕೊಂಡು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ನಿರ್ಧರಿಸಲಾಗಿದೆ.
ಕಾರ್ವಿುಕರನ್ನು ಬಿಡುತ್ತಿಲ್ಲ
ನಗರ ತೊರೆದಿರುವ ವಲಸೆ ಕಾರ್ವಿುಕರನ್ನು ವಾಪಸ್ ಕರೆತರಲು ಸಾಧ್ಯವಾಗುತ್ತಿಲ್ಲ. ಚೆಕ್​ಪೋಸ್ಟ್​ಗಳಲ್ಲಿ ಕಾರ್ವಿುಕರನ್ನು ಕರೆತರುವ ವಾಹನಗಳನ್ನು ತಡೆಯುತ್ತಿರುವ ಪೊಲೀಸರು, ವಾಪಸ್ ತೆರಳುವಂತೆ ಸೂಚಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಸೇರಿ ಇನ್ನಿತರ ನಗರಗಳಲ್ಲಿ ಕಾಮಗಾರಿಗಳ ಪುನರಾರಂಭಕ್ಕೆ ಹಿನ್ನಡೆಯಾಗಿದೆ. ಅದೇ ರೀತಿ, ಕಟ್ಟಡ ನಿರ್ವಣ, ರಸ್ತೆ ಕಾಮಗಾರಿಗಳಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಗೂ ಕೆಲವೆಡೆ ತಡೆಯೊಡ್ಡಲಾಗುತ್ತಿದೆ.
ರಸ್ತೆ ಕಾಮಗಾರಿಗೆ ಸಮಸ್ಯೆ
ಬೆಂಗಳೂರಿನಲ್ಲಿ ನಡೆಯುವ ರಸ್ತೆ ಕಾಮಗಾರಿಗಳಲ್ಲಿ ಅತಿಹೆಚ್ಚು ತೆಲುಗು ಮತ್ತು ತಮಿಳು ಭಾಷಿಕ ಕಾರ್ವಿುಕರು ತೊಡಗಿಕೊಂಡಿದ್ದರು. ಆದರೆ, ಅವರೆಲ್ಲ ಈಗ ನಗರವನ್ನು ಬಿಟ್ಟಿದ್ದಾರೆ. ಹೀಗಾಗಿ ವೈಟ್​ಟಾಪಿಂಗ್, ಡಾಂಬರೀಕರಣದಂತಹ ರಸ್ತೆ ಕಾಮಗಾರಿಗೆ ಹೆಚ್ಚಿನ ಸಮಸ್ಯೆಗಳಾಗುತ್ತಿದೆ. ಉಳಿದಂತೆ ವಸತಿ ಇಲಾಖೆಯಿಂದ ನಿರ್ವಣಗೊಳ್ಳಬೇಕಿರುವ 4 ಲಕ್ಷಕ್ಕೂ ಹೆಚ್ಚಿನ ಮನೆಗಳ ನಿರ್ವಣಕ್ಕೂ ಕಾರ್ವಿುಕರ ಕೊರತೆ ಎದುರಾಗಿದೆ. ಈಗಾಗಲೆ ಆರಂಭವಾಗಬೇಕಿದ್ದ ವಸತಿ ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ.
ಲಾಕ್​ಡೌನ್​ ಕರ್ತವ್ಯದ ಒತ್ತಡ, ಆದರೂ ನಿಲ್ಲಲಿಲ್ಲ ಪ್ರಾರ್ಥನೆ; ರಸ್ತೆಯಲ್ಲೇ ನಮಾಜ್​ ಮಾಡಿದ ಪೊಲೀಸ್​ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
