ಬೆಂಗಳೂರು:ಅಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾಗಿರುವ ಅಸ್ತಮಾ ಜಾಗತಿಕವಾಗಿ 26.2 ಕೋಟಿಗೂ ಅಧಿಕ ಜನರ ಮೇಲೆ ಪರಿಣಾಮ ಬೀರಿದ್ದು, ಪ್ರತಿ ವರ್ಷ 4.55 ಲಕ್ಷ ಮಂದಿ ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. ಕಾಯಿಲೆ ಬಗ್ಗೆ ಅರಿವು ಇದ್ದಲ್ಲಿ ಸೂಕ್ತ ಚಿಕಿತ್ಸೆಯ ಮೂಲಕ ಮರಣ ಪ್ರಮಾಣ ತಡೆಯಬಹುದಾಗಿದೆ ಎನ್ನುತ್ತಾರೆ ಶ್ವಾಸಕೋಶ ತಜ್ಞರು.
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ವರದಿ (ಜಿಬಿಡಿಆರ್) 2019ರ ಪ್ರಕಾರ ಭಾರತದಲ್ಲಿ 3.4 ಕೋಟಿಗೂ ಅಧಿಕ ಜನರಿಗೆ ಅಸ್ತಮಾ ಇದ್ದು, ವಿಶ್ವದ ಒಟ್ಟಾರೆ ರೋಗಿಗಳಲ್ಲಿ ಶೇ.42 ಹಾಗೂ ಭಾರತದಲ್ಲಿ ಶೇ.13 ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ತಪ್ಪಾದ ರೋಗನಿರ್ಣಯ, ಉರಿಯೂತದ ಇನ್ಹೇಲರ್ ತಪ್ಪಾದ ಬಳಕೆ ಮತ್ತು ಕಾರ್ಟಿಕೊಸ್ಟೆರಾಯ್್ಡ ಅತಿಯಾದ ಅವಲಂಬನೆಯಿಂದಾಗಿ ಸಾವುಗಳಿಗೆ ಕಾರಣವಾಗಿದೆ. ಹಾಗಾಗಿ ಈ ವರ್ಷ ‘ಅಸ್ತಮಾ ಶಿಕ್ಷಣ ಸಶಕ್ತಗೊಳಿಸುತ್ತದೆ’ ಎಂಬ ಘೋಷವಾಕ್ಯದೊಂದಿಗೆ ಅಸ್ತಮಾ ದಿನ ಆಚರಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಅಸ್ತಮಾ ಕುರಿತು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಶ್ವಾಸಕೋಶ ತಜ್ಞ ವೈದ್ಯ ಡಾ.ಪ್ರದೀಪ್ ಜಿ.ನಾಯ್ಕ ಅವರು ‘ವಿಜಯವಾಣಿ’ ನಡೆಸಿದ ಸಂವಾದದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಸ್ತಮಾ ಎಂದರೆ?:ಅಸ್ತಮಾ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಾಗಿದ್ದು, ಇದನ್ನು ಸೂಕ್ತ ಚಿಕಿತ್ಸೆಯ ಮೂಲಕ ನಿರ್ವಹಿಸಬಹುದೇ ಹೊರತು ಗುಣಪಡಿಸಲಾಗುವುದಿಲ್ಲ. ಇದು ಶ್ವಾಸಕೋಶದ ಒಳಗೆ ಮತ್ತು ಹೊರಗೆ ಗಾಳಿಯನ್ನು ಸಾಗಿಸುವ ವಾಯುಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶ್ವಾಸಕೋಶದ ಎಡಿಮಾ ಅಥವಾ ಉರಿಯೂತವನ್ನು ಉಂಟು ಮಾಡುತ್ತದೆ. ಇದರಿಂದ ಉಸಿರಾಡುವಾಗ ಶ್ವಾಸಕೋಶದಿಂದ ಗಾಳಿ ಬಿಡಲು ಕಷ್ಟವಾಗುತ್ತದೆ. ಜತೆಗೆ, ಇದು ಬ್ರಾಂಕೋಕನ್ಸಿ್ಟ್ರಕ್ಷನ್ ಅಥವಾ ಸ್ಕಿ್ವೕಜಿಂಗ್ ಮತ್ತು ಅತಿಸೂಕ್ಷ್ಮ ಅಥವಾ ಸೆಳೆತದ ವಾಯುಮಾರ್ಗಗಳಿಗೆ ಕಾರಣವಾಗಬಹುದು. ಅಂದರೆ ವಾಯುಮಾರ್ಗಗಳನ್ನು ಸಂಕುಚಿತ ಗೊಳಿಸಿ ಉಸಿರಾಡಲು ಕಷ್ಟವಾಗುತ್ತದೆ.
ಚಿಕಿತ್ಸಾ ವಿಧಾನ :ವೈದ್ಯರು ಮೊದಲಿಗೆ ನಿರ್ದಿಷ್ಟ ಔಷಧದೊಂದಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವ ಚಿಕಿತ್ಸೆ ನೀಡುತ್ತಾರೆ (ಛ್ಝಿಜಿಛಿಡಛ್ಟಿ ಠಿಜಛ್ಟಿಚಟಢ) ಮತ್ತು ಕೆಲ ಮನೆ ಮದ್ದುಗಳನ್ನು ಸೂಚಿಸುತ್ತಾರೆ. ನಂತರದಲ್ಲಿ ಆಹಾರ ಕ್ರಮ, ಜೀವನ ಶೈಲಿ ಬದಲಾವಣೆ, ವ್ಯಾಯಾಮ, ಯೋಗ ಇತ್ಯಾದಿ ಅಸ್ತಮಾ ನಿಯಂತ್ರಣಕ್ಕೆ ಉತ್ತಮ ಚಿಕಿತ್ಸೆಯಾಗಿವೆ. ಬ್ರಾಂಕೋಡೈಲೇಟರ್ ಅಥವಾ ಇನ್ಹೇಲರ್​ಗಳ ಬಳಕೆ ಸೇರಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ (Mಚಜ್ಞಿಠಿಛ್ಞಿಚ್ಞ್ಚ ಖಜಛ್ಟಿಚಟಢ) ದೀರ್ಘಾವಧಿಯ ಅಸ್ತಮಾ ಹೊಂದಿದ್ದಲ್ಲಿ ರೋಗಲಕ್ಷಣಗಳ ತೀವ್ರತೆ ಕಡಿಮೆ ಮಾಡಲು ವಿವಿಧ ಜೈವಿಕ ಔಷಧಗಳನ್ನು ಶಿಫಾರಸು ಮಾಡಲಾಗುತ್ತದೆ. ಕೆಲ ಸಂದರ್ಭದಲ್ಲಿ ರೋಗಿಗೆ ಶ್ವಾಸನಾಳದ ಥರ್ವೇಪ್ಲಾ್ಯಸ್ಟಿ ಚಿಕಿತ್ಸೆಗೆ ಸೂಚಿಸಲಾಗುವುದು. ಈ ಎಲ್ಲದರ ಬದಲು ರೋಗ ಲಕ್ಷಣಗಳ ಅರಿವಿದ್ದಲ್ಲಿ ಅಪಾಯ ತಡೆಗಟ್ಟಬಹುದಾಗಿದೆ.

ವೈದ್ಯಕೀಯ ಸಹಾಯದ ಅರಿವು:‘ಅಸ್ತಮಾ ಶಿಕ್ಷಣ ಸಶಕ್ತಗೊಳಿಸುತ್ತದೆ’ ಈ ವರ್ಷದ ಘೋಷವಾಕ್ಯವಾಗಿದೆ. ಇದು ಅಸ್ತಮಾ ಇರುವವರಿಗೆ ಕಾಯಿಲೆ ನಿರ್ವ ಹಿಸಲು ಸೂಕ್ತವಾದ ಶಿಕ್ಷಣದ ಅಗತ್ಯ ಒತ್ತಿ ಹೇಳುತ್ತದೆ. ಇದು ಯಾವಾಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂಬುದರ ಅರಿವು ಮೂಡಿಸುತ್ತದೆ.
ಧೂಮಪಾನದಿಂದ ಹೆಚ್ಚಳ: ಧೂಮಪಾನದಿಂದ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಅಸ್ತಮಾ ಕಾಣಿಸಿಕೊಳ್ಳುತ್ತಿದೆ. ಪ್ರಮುಖವಾಗಿ ನಗರ ಹಾಗೂ ಪಟ್ಟಣ ಮಹಿಳೆಯರಲ್ಲಿ ಹೆಚ್ಚಿದೆ. ಹಿಂದೆಲ್ಲಾ ಗ್ರಾಮೀಣ ಮಹಿಳೆಯರಲ್ಲಿ ಕಟ್ಟಿಗೆಯಿಂದ ಒಲೆ ಉರಿಸುತ್ತಿದ್ದ ಕಾರಣ ಅಸ್ತಮಾ ಕಾಣಿಸಿಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ಮಹಿಳೆಯರಲ್ಲಿ ಧೂಮಪಾನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಅಸ್ತಮಾ ಹೆಚ್ಚಲು ಕಾರಣವಾಗಿದೆ.
ವೈದ್ಯಕೀಯ ಸಹಾಯದ ಅರಿವು:‘ಅಸ್ತಮಾ ಶಿಕ್ಷಣ ಸಶಕ್ತಗೊಳಿಸುತ್ತದೆ’ ಈ ವರ್ಷದ ಘೋಷವಾಕ್ಯವಾಗಿದೆ. ಇದು ಅಸ್ತಮಾ ಇರುವವರಿಗೆ ಕಾಯಿಲೆ ನಿರ್ವ ಹಿಸಲು ಸೂಕ್ತವಾದ ಶಿಕ್ಷಣದ ಅಗತ್ಯ ಒತ್ತಿ ಹೇಳುತ್ತದೆ. ಇದು ಯಾವಾಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂಬುದರ ಅರಿವು ಮೂಡಿಸುತ್ತದೆ.
ರೋಗ ನಿರ್ಣಯ ಅಸ್ತಮಾವನ್ನು ಹೇಗೆ ಗುಣಪಡಿಸಬೇಕು ಎಂಬುದಕ್ಕೂ ಮೊದಲು ಸರಿಯಾಗಿ ರೋಗನಿರ್ಣಯ ಮಾಡುವ ಅಗತ್ಯವಿದೆ. ಇದಕ್ಕಾಗಿ ರೋಗಿಯ ವೈದ್ಯಕೀಯ ಇತಿಹಾಸ, ದೈಹಿಕ ಪರೀಕ್ಷೆಗಳು ಮತ್ತು ವಿವಿಧ ವಿಧಾನಗಳಲ್ಲಿ ರೋಗನಿರ್ಣಯ ಪರೀಕ್ಷೆಗಳ ಆಧಾರದ ಮೇಲೆ ರೋಗನಿರ್ಣಯ ಮಾಡಲಾಗುತ್ತದೆ. ಮೊದಲಿಗೆ ರೋಗ ಲಕ್ಷಣಗಳು, ಅಪಾಯಕಾರಿ ಅಂಶಗಳು, ಅಲರ್ಜಿಗಳು ಇತ್ಯಾದಿ ಮಾಹಿತಿಗಳಿಂದ ರೋಗ ನಿರ್ಣಯ ಮಾಡುತ್ತಾರೆ. ನಂತರ, ಕೆಲ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅವೆಂದರೆ
. ಶ್ವಾಸಕೋಶದ ಕಾರ್ಯ ಪರೀಕ್ಷೆ ಮೂಲಕ ಎಷ್ಟು ವೇಗದಲ್ಲಿ ಎಷ್ಟು ಗಾಳಿಯನ್ನು ಒಳಕ್ಕೆ ಹಾಗೂ ಹೊರಕ್ಕೆ ಹಾಕುವ ಮೂಲಕ ಉಸಿರಾಟ ನಡೆಸಲಾಗುತ್ತದೆ ಎನ್ನುವುದನ್ನು ಪತ್ತೆ ಹಚ್ಚುವುದು.
. ಬ್ರಾಂಕೋಡಿಲೇಟರ್ ಪರೀಕ್ಷೆಯಲ್ಲಿ ಇನ್ಹೇಲರ್ ಔಷಧ ನೀಡುವ ಮೂಲಕ ಉಸಿರಾಟದ ವೇಗ ಪತ್ತೆ ಹಚ್ಚುವುದು.
. ಬ್ರಾಂಕೋಪೊ›ವೊಕೇಶನ್ ಪರೀಕ್ಷೆ ಮೂಲಕ ಶ್ವಾಸಕೋಶದ ವಾಯುಮಾರ್ಗಗಳು ಅಲರ್ಜಿ ಅಥವಾ ಔಷಧಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತಿಳಿಯುವುದು.
. ದೇಹದಿಂದ ಹೊರಹಾಕಲ್ಪಟ್ಟ ಗಾಳಿಯಲ್ಲಿ ನೈಟ್ರಿಕ್ ಆಸಿಡ್ ಮಟ್ಟ ಅಳೆಯುವುದು.
. ಅಲರ್ಜಿ ಇದ್ದಲ್ಲಿ ಚರ್ಮ ಅಥವಾ ರಕ್ತ ಪರೀಕ್ಷೆಗಳ ಮೂಲಕ ಸಮಸ್ಯೆ ಪತ್ತೆ ಹಚ್ಚುವುದು.
. ವಾಯು ಮಾಲಿನ್ಯ, ಶೀತ ಗಾಳಿ, ಧೂಳಿನ ಕಣಗಳು, ಸಾಕು ಪ್ರಾಣಿಗಳು, ಸುಗಂಧ ದ್ರವ್ಯಗಳಿಂದ ಅಲರ್ಜಿ ಆಗುತ್ತಿದ್ದಲ್ಲಿ ಅವುಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಹಾಗೆಯೇ ಅಲರ್ಜಿ ಆಗುವ ಆಹಾರ ಪದಾರ್ಥಗಳ ಸೇವನೆ ಬಗ್ಗೆ ಎಚ್ಚರವಹಿಸಬೇಕು.
. ತಂಬಾಕು, ಪಟಾಕಿ, ಮೇಣದ ಬತ್ತಿ, ಧೂಪದ್ರವ್ಯಗಳ ಹೊಗೆಯಿಂದ ದೂರ ಉಳಿಯಬೇಕು.
. ಸಾಧ್ಯವಾದಷ್ಟು ಮಾಲಿನ್ಯಕ್ಕೆ ಅತಿಯಾಗಿ ಒಡ್ಡಿ್ಡೊಳ್ಳುವಿಕೆ ತಪ್ಪಿಸಬೇಕು.
. ಆರೋಗ್ಯಕರ ದಿನಚರಿ ರೂಢಿಸಿಕೊಳ್ಳುವುದು ಉತ್ತಮ, ಶ್ರಮದಾಯಕ ವ್ಯಾಯಾಮ ಬೇಡ.
. ಒತ್ತಡ ನಿರ್ವಹಣೆಗಾಗಿ ಯೋಗ, ಧ್ಯಾನ ಉತ್ತಮ.
. ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ನಿದ್ರೆಗೆ ಒತ್ತು ನೀಡಬೇಕು.
. ಮನೆಯನ್ನು ಸ್ವಚ್ಛವಾಗಿ ಹಾಗೂ ಧೂಳು ಮುಕ್ತವಾಗಿಟ್ಟು ಇಟ್ಟುಕೊಳ್ಳುವುದರ ಜೊತೆಗೆ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳಬೇಕು.
. ನ್ಯುಮೋನಿಯಾ, ಡೆಪ್ಟೀರಿಯಾ, ಟೆಟನಸ್ ಸೇರಿ ನಿಯಮಿತ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು.
. ನಿಯಮಿತವಾಗಿ ವೈದ್ಯರ ಸಲಹೆಯಂತೆ ಔಷಧ ಮತ್ತು ಇನ್ಹೇಲರ್ ಬಳಸಬೇಕು.
. ಉಸಿರಾಟದ ಸಮಯದಲ್ಲಿ ಉಬ್ಬಸ ಅಥವಾ ಶಿಳ್ಳೆ
. ರಾತ್ರಿ ಅಥವಾ ಮುಂಜಾನೆ ಕೆಮ್ಮುವುದು
. ಒಂದೇ ಸಮನೆ ಸೀನು ಬರುವುದು
. ಎದೆಯ ಬಿಗಿತ ಹಾಗೂ ಉಸಿರಾಟದಲ್ಲಿ ತೊಂದರೆ
. ಆಗಿಂದಾಗ್ಗೆ ವೈರಲ್ ಸೋಂಕು ಅಥವಾ ಶೀತ
. ಕಠಿಣ ವ್ಯಾಯಾಮ ಸಂದರ್ಭದಲ್ಲಿ ಉಸಿರಾಟದಲ್ಲಿ ಸಮಸ್ಯೆ (ಉಛ್ಟಿ್ಚಠಛಿ ಐಛ್ಠ್ಚಛ ಅಠಠಿಜಞಚ)
. ಧೂಳು ಸೇವಿಸಿದಾಗ, ತಣ್ಣನೆ ಪಾನಿಯ ಅಥವಾ ಕೆಲ ನಿರ್ದಿಷ್ಟ ಆಹಾರದಿಂದ ಅಲರ್ಜಿ ಆಗುವುದು.
. ಅಸ್ತಮಾ ಹೊಂದಿರುವ ಜನರು ಅಟೊಪಿಕ್ ಡರ್ಮಟೈಟಿಸ್ (ಎಸ್ಜಿಮಾ) ಅಥವಾ ಅಲರ್ಜಿಕ್ ರಿನಿಟಿಸ್​ನಿಂದ ಬಳಲುತ್ತಿದ್ದಾರೆ. ಜಿರಳೆ, ಕೆಲ ಆಹಾರ ಪದಾರ್ಥಗಳು, ಎಸಿ ಹೀಗೆ ಕೆಲವು ವಸ್ತು ಹಾಗೂ ಆಹಾರಗಳಿಂದ ಅಲರ್ಜಿ ಅಸ್ತಮಾಗೆ ಕಾರಣವಾಗುತ್ತವೆ.
. ಕುಟುಂಬದ ಇತಿಹಾಸ ಹೊಂದಿರುವವರಲ್ಲಿ ಹಾಗೂ ಅನುವಂಶಿಕವಾಗಿಯೂ ಬರುವ ಸಾಧ್ಯತೆ ಇದೆ.
. ಅಧಿಕ ತೂಕ ಹೊಂದಿರುವ ವ್ಯಕ್ತಿಗಳು (ಒಎಸ್​ಎ ಖಾಯಿಲೆ ಬರುವ ಸಾಧ್ಯತೆ ಹೆಚ್ಚು) ಮತ್ತು ಮಕ್ಕಳಲ್ಲಿ ಸಾಧ್ಯತೆ ಹೆಚ್ಚು.
. ವಾಯು ಮಾಲಿನ್ಯ ಮತ್ತು ಸೂಕ್ಷಾತಿ ಸೂಕ್ಷ್ಮ ಧೂಳಿನಿಂದ ಅರ್ಜಿ ಉಂಟಾಗುತ್ತದೆ.
. ಧೂಮಪಾನ ಮಾಡುವವರಲ್ಲಿ ಅಪಾಯ ಹೆಚ್ಚು. ಇದು ಶ್ವಾಸನಾಳಕ್ಕೆ ಬೇಗ ಹಾನಿ ಉಂಟು ಮಾಡುತ್ತದೆ. ಧೂಮಪಾನಿಗಳು ಬಿಡುವ ಹೊಗೆ ಸೇವಿಸುವವರಿಗೂ (ಸೆಕೆಂಡ್ ಹ್ಯಾಂಡ್ ಸ್ಮೋಕ್) ಅಸ್ತಮಾ ಸಾಧ್ಯತೆ ಹೆಚ್ಚು.
. ಮಹಿಳಾ ಧೂಮಪಾನಿಗಳಲ್ಲಿ ಹೆಚ್ಚಿನ ಅಪಾಯದ ಸಾಧ್ಯತೆಗಳಿರುತ್ತವೆ.
. ಜೀವನಶೈಲಿ ಬದಲಾವಣೆ ಮತ್ತು ಕೆಟ್ಟ ಆಹಾರ ಕ್ರಮದಿಂದಾಗಿಯೂ ಅಸ್ತಮಾ ಬರುತ್ತದೆ.
. ಒಳಾಂಗಣ ಮತ್ತು ಹೊರಾಂಗಣ ಮಾಲಿನ್ಯ, ಧೂಳು, ರಾಸಾಯನಿಕ ಹೊಗೆ, ಕ್ರಷರ್, ಗಣಿ, ಡಾಂಬರು ಕೆಲಸ ಮಾಡುವವರಲ್ಲಿ ಹೆಚ್ಚು (ಇಂಥವರಲ್ಲಿ ಸಿಒಪಿಡಿ ಖಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು)
ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ತೋರಬೇಕಾಗಿಲ್ಲ: ಕಾಂಗ್ರೆಸ್‌ನ ನಡೆಯನ್ನು ಪ್ರಶ್ನಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
