ಮೈಸೂರು:ಒಂದು ಕಡೆ ಕ್ರಿಕೆಟ್ ಮ್ಯಾಚ್, ಮತ್ತೊಂದೆಡೆ ದಸರಾ ಉತ್ಸವ ನಡೆಯುತ್ತಿದೆ. ಈ ಹಿನ್ನಲೆ ಕ್ರಿಕೆಟ್ ಜತೆಗೆ ದಸರಾಕ್ಕೂ ಪೊಲೀಸ್​​ ಬಂದೋಬಸ್ತ್ ಹೆಚ್ಚಿಸಲಾಗಿದೆ.
ದೇಶ-ವಿದೇಶಗಳಿಂದ ಪ್ರವಾಸಿಗರು ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಬರುತ್ತಿದ್ದಾರೆ. ಈ ಬಾರಿ ಉಗ್ರರ ಕರಿನೆರಳು ಮೈಸೂರು ದಸರಾ ಮೇಲೆ ಬಿದ್ದಿದೆ ಎನ್ನುವ ಮಾಹಿತಿ ಹಿನ್ನಲೆ ಪೊಲೀಸ್​ ಇಲಾಖೆ ತುರ್ತಾಗಿ ಭದ್ರತೆ ಹೆಚ್ಚಿಸಿದೆ.
ಶ್ರೀರಂಗಪಟ್ಟಣ, KRS ಪೊಲೀಸರಿಗೂ ಅಲರ್ಟ್ ಇರುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ನಕಲಿ ಪಾಸ್ ಪೋರ್ಟ್ ಪಡೆದು ಸುಮಾರು 70 ಜನರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಮಾಹಿತಿಯನ್ನು ಕೇಂದ್ರ ಐಬಿ ಟೀಂ ಮಾಹಿತಿ ಕಲೆಹಾಕಿದೆ.
ಡಿಜಿ & ಐಜಿಪಿ ಅಲೋಕ್ ಮೋಹನ್ ಅವರು ತುರ್ತಾಗಿ ಇಂದು ಬೆಳಗ್ಗೆ 9 ಗಂಟೆಗೆ 1568 ಪೊಲೀಸರ ನಿಯೋಜನೆ ಮಾಡಿದ್ದು, ಜೊತೆಗೆ 40 CAR ತುಕಡಿಗಳು, 30 KSRP ತುಕಡಿಗಳನ್ನು ನಿಯೋಜಿಸಿದ್ದಾರೆ. ಪ್ರತಿ ಬಾರಿ ದಸರಾಗೆ 1700 ರಿಂದ 2000 ಪೊಲೀಸರ ನಿಯೋಜಿಸಲಾಗುತ್ತಿತ್ತು. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರು, ರಾಜ್ಯದ ಎಲ್ಲಾ ವಲಯ, ಸಿಐಡಿ, ಐಎಸ್​ಡಿಯಿಂದಲೂ ನಿಯೋಜನೆ ಮಾಡಲಾಗಿದೆ.
ಮರಾಠಿ ನಟಿ ಆದಿತಿ ಡ್ರಾವಿಡ್​ಗೆ ರಾಹುಲ್​ ಡ್ರಾವಿಡ್​ ಏನಾಗಬೇಕು? ವೈರಲ್​ ಆಗುತ್ತಿದೆ ನಟಿಯ ಫೋಟೋಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
