ಬೆಂಗಳೂರು:ರಾಜ್ಯದಲ್ಲಿರುವ ಅಂಗವಿಕಲರಿಗೆ ಸರ್ಕಾರ ಇಲ್ಲೊಂದು ಶುಭ ಸುದ್ದಿ ನೀಡಿದೆ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವ ಉದ್ದೇಶದಿಂದ ಎಲ್ಲ ಇಲಾಖೆಗಳಲ್ಲಿ ರೋಸ್ಟರ್ ಬಿಂದು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಿದೆ. ರಾಜ್ಯದಲ್ಲಿ ಮೊದಲು 7 ರೀತಿಯ ಅಂಗವಿಕಲತೆಯನ್ನು ಗುರುತಿಸಲಾಗುತ್ತಿತ್ತು. ಆದರೆ 2016 ರಿಂದ 21 ರೀತಿಯ ಅಂಗ ವೈಕಲ್ಯವನ್ನು ಪರಿಗಣಿಸಲಾಗುತ್ತಿದೆ. 2011ರ ಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ಅಂಗವಿಕಲರಿದ್ದಾರೆ. ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು. ಇತರರಂತೆ ಸರ್ಕಾರದ ಹುದ್ದೆಗಳು ಹಾಗೂ ಸೌಲಭ್ಯವನ್ನು ಪಡೆದು ಗೌರವಯುತವಾಗಿ ಬದುಕು ಸಾಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸಾಮಾಜಿಕ ಭದ್ರತೆಯೊಂದಿಗೆ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಕಡೆ ಸರ್ಕಾರ ಆದ್ಯತೆ ನೀಡಿದೆ.
ಸರ್ಕಾರ 2016ರಲ್ಲಿ ಅಂಗವಿಕಲರಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀತಿ ಜಾರಿಗೆ ತಂದಿತು. ಅದರ ಪ್ರಕಾರ ಎ ಮತ್ತು ಬಿ ಶ್ರೇಣಿಯ ಹುದ್ದೆಗಳಲ್ಲಿ ಶೇ.4 ಹಾಗೂ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿ ಶೇ.4 ಮೀಸಲಾತಿ ನಿಗದಿ ಮಾಡಲಾಗಿದೆ. ಮೀಸಲಾತಿ ನೀತಿ ಜಾರಿಗೆ ಬಂದಿದ್ದರೂ ರೋಸ್ಟರ್ ಬಿಂದು ಗುರುತಿಸುವುದು ಅತ್ಯಂತ ಮುಖ್ಯ ಕೆಲಸವಾಗಿದೆ. ಮೀಸಲಾತಿ ಜಾರಿಯಾಗಿ ಕೆಲ ವರ್ಷದ ನಂತರ ಆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಇಲಾಖೆಯಲ್ಲಿಯೂ ಅಂಗವಿಕಲರು ನಿರ್ವಹಿಸಬಹುದಾದ ಹುದ್ದೆಗಳನ್ನು ಗುರುತಿಸಿ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ನೀಡುವ ಕಾರ್ಯವೇ ರೋಸ್ಟರ್ ಬಿಂದು. 61 ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳಲ್ಲಿ ಈ ಕಾರ್ಯ ನಡೆದಿದ್ದು ಒಂದು ವರ್ಷದಲ್ಲಿ ಪೂರ್ಣವಾಗಲಿದೆ. ಅಂಗವಿಕಲರು ಹೆಚ್ಚಿನ ಶಿಕ್ಷಣ ಪಡೆದು ಸರ್ಕಾರಿ ಹುದ್ದೆ ಪಡೆಯಲು ಅನುಕೂಲವಾಗುತ್ತದೆ. ವಿವಿಧ ಹುದ್ದೆಗಳಿಗೆ ನೇರ ನೇಮಕ ಅಥವಾ ವಿವಿಧ ನೇಮಕಾತಿ ಸಂಸ್ಥೆಗಳ ಮೂಲಕ ಭರ್ತಿ ಮಾಡುವ ಸಂದರ್ಭದಲ್ಲಿ ರೋಸ್ಟರ್ ಬಿಂದುವನ್ನು ಪರಿಗಣಿಸಲಾಗುತ್ತದೆ.
ಎಷ್ಟು ಹುದ್ದೆಗಳು ಅಂಗವಿಕಲರಿಗೆ ಸಿಗಲಿವೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಮೀಸಲಾತಿ ಪ್ರಕಾರವೇ ಹುದ್ದೆಗಳು ಅಂಗವಿಕಲರಿಗೆ ಲಭ್ಯವಾಗಲಿವೆ. ರೋಸ್ಟರ್ ಬಿಂದು ಗುರುತಿಸುವ ಕೆಲಸ ಎಲ್ಲ ಇಲಾಖೆಗಳಲ್ಲಿ ಆದಾಗ ಮಾತ್ರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ತಾಯಂದಿರಿಗೆ ತರಬೇತಿ:ಅಂಗವೈಕಲ್ಯದಲ್ಲಿಯೇ ಶ್ರವಣದೋಷ ಅತ್ಯಂತ ಗಂಭೀರ ಸಮಸ್ಯೆ. ಆದ್ದರಿಂದ ಅಂತಹ ಮಕ್ಕಳ ಪೋಷಣೆಯ ಬಗ್ಗೆ ತಾಯಂದಿರಿಗೆ ತರಬೇತಿ ನೀಡುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಎರಡು ಸಂಸ್ಥೆಗಳಿಗೆ ತರಬೇತಿಯ ಹೊಣೆ ನೀಡಿದೆ. ತರಬೇತಿಗೆ ಬರುವ ತಾಯಂದಿರಿಗೆ ಮಾಸಿಕ 2000 ರೂ. ಸಂಭಾವನೆ ನೀಡಲಾಗುತ್ತದೆ. ಪ್ರತಿ ಸಂಸ್ಥೆಯಲ್ಲಿ ಒಂದು ಬಾರಿ ತಲಾ 25 ಜನರಿಗೆ ತರಬೇತಿ ನೀಡಲಾಗುತ್ತದೆ. ಈ ವರ್ಷ 1.06 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ.
ಅಂಗವಿಕಲರಿಂದ ಅಂಗವಿಕಲರಿಗಾಗಿ:ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವುದು, ಯೋಜನೆಗಳು ಮನೆ ಬಾಗಿಲಿಗೆ ತಲುಪಿಸಲು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇವರೆಲ್ಲರೂ ಸಹ ಅಂಗವಿಕಲರೇ ಆಗಿರುವುದು ವಿಶೇಷ. ಆದ್ದರಿಂದಲೇ ಈ ಯೋಜನೆಯನ್ನು ಅಂಗವಿಕಲರಿಂದಲೇ ಅಂಗವಿಕಲರೇ ಅಂಗವಿಕಲರಿಗಾಗಿ ಎಂದು ಕರೆಯಲಾಗುತ್ತದೆ. ಪ್ರತಿ ಪಂಚಾಯಿತಿಗೆ ಒಬ್ಬ ಕಾರ್ಯಕರ್ತರಿದ್ದಾರೆ. ಪಟ್ಟಣಗಳಲ್ಲಿ 150 ಜನ ಹಾಗೂ ತಾಲೂಕು ಕೇಂದ್ರದಲ್ಲಿ 168 ಜನ ಕಾರ್ಯ ನಿರ್ವಹಿಸುತ್ತಾರೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವವರಿಗೆ 9 ಸಾವಿರ ರೂ. ಹಾಗೂ ಪಟ್ಟಣಗಳಲ್ಲಿ ಇರುವ ಕಾರ್ಯಕರ್ತರಿಗೆ 15 ಸಾವಿರ ರೂ. ನೀಡಲಾಗುತ್ತಿದೆ. ವಾಸಿಸುವ ಸ್ಥಳದಲ್ಲಿಯೇ ಸುಮಾರು 6500 ಜನರಿಗೆ ಉದ್ಯೋಗ ಸಿಕ್ಕಂತೆ ಆಗಿದೆ. ಜತೆಗೆ ಉಳಿದ ಅಂಗವಿಕಲರಿಗೆ ನೆರವು ನೀಡಬಹುದಾಗಿದೆ.
ಎಲ್ಲ ವಿಧದ ಅಂಗವಿಕರಲರಿಗೆ ಅವಕಾಶವನ್ನು ನೀಡಿ ಸಬಲೀಕರಣ ಮಾಡಲು ಸೂಕ್ತ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ ನೀಡುವುದು ಮುಖ್ಯವಾಗುತ್ತದೆ. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸೇರಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
|ಹಾಲಪ್ಪ ಆಚಾರ್ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ
ಅಂಗವಿಕಲರಿಗಾಗಿ ಸಾಮಾಜಿಕ ಭದ್ರತೆ ಸಿಕ್ಕಬೇಕು ಎಂಬ ಉದ್ದೇಶದಿಂದ ಸರ್ಕಾರ ಸಬಲೀಕರಣ ಮಾಡಲು ಕ್ರಮ ಕೈಗೊಂಡಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಇಲಾಖೆಯ ಮುಖ್ಯ ಉದ್ದೇಶವಾಗಿದೆ.
|ಕೆ.ಎಸ್. ಲತಾಕುಮಾರಿನಿರ್ದೇಶಕಿ, ವಿಕಲಚೇತನರ ಸಬಲೀಕರಣ ಇಲಾಖೆ
ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − one =
Remember me
