|ನಾರಾಯಣ ರಾಯಚೂರ್
ಚಾರ್ಲಿ ಚಾಪ್ಲಿನ್ ಪ್ರಕಾರ- ನಗದೇ ಕಳೆದ ದಿನ ಅದು ವ್ಯರ್ಥ ದಿನ! ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೆಲವು ನಿಮಿಷಗಳಾದರೂ ನಗೆ, ಹಾಸ್ಯ, ತುಂಟತನದಿಂದ ಕೂಡಿದ್ದರೆ ಗಂಭೀರ ಬದುಕಿನ ಒತ್ತಡ ದೂರವಾಗಿ, ದೇಹ-ಮನಸ್ಸುಗಳು ಹಗುರಗೊಂಡು ಉಲ್ಲಾಸಕ್ಕೆಡೆಮಾಡಿಕೊಡುತ್ತವೆ, ಆರೋಗ್ಯಭಾಗ್ಯವನ್ನು ಒದಗಿಸುತ್ತವೆ. ಇಂದಿನ ಪೀಳಿಗೆಯಂತೂ ಒತ್ತಡದ ಬದುಕಿಗೇ ಒಗ್ಗಿಹೋಗಿದೆ. 247 ಸೂತ್ರಕ್ಕೆ ತಲೆಬಾಗಿ, ವಿಕೆಂಡ್ ಬಂದರೂ ಇನ್ನೇನೋ ಅಂಟಿಸಿಕೊಂಡು ಆಕಾಶವೇ ಕಳಚಿ ಬಿದ್ದಂತೆ ವರ್ತಿಸುತ್ತಾರೆ. ಅದರ ಫಲವೇ ಲಾಫ್ಟರ್ ಕ್ಲಬ್, ನಗೆಹಬ್ಬಗಳು, ಹಾಸ್ಯೋತ್ಸವ ಇತ್ಯಾದಿಗಳು. ಮುಂಬೈನ ಖ್ಯಾತ ವೈದ್ಯ ಮದನ್ ಕಟಾರಿಯಾ ಮಹಾನಗರಿಯ, ಒತ್ತಡ ಬದುಕಿಗೆ ವಿದಾಯ ಹೇಳಲಾಗದಿದ್ದರೂ, ತುಸು ವಿರಾಮವನ್ನಾದರೂ ಹೇಳಲು, ನಗೆ-ಯೋಗಕ್ಕೆ ಒತ್ತು ಕೊಡುವ ಲಾಫ್ಟರ್ ಕ್ಲಬ್​ಗಳನ್ನು ಆರಂಭಿಸಿದರು. ಮಾತ್ರವಲ್ಲ, 1998ರಿಂದ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗೆ ದಿನವನ್ನೂ ಪ್ರಾರಂಭಿಸಿದರು. ಈಗ ಅದಕ್ಕೆ ಬೆಳ್ಳಿ ಹಬ್ಬದ ಸಂಭ್ರಮ. ಸುಮಾರು ನೂರೈದಕ್ಕೂ ಹೆಚ್ಚು ದೇಶಗಳು ವಿಶ್ವ ನಗೆ ದಿನವನ್ನು ನಗು-ನಗುತ್ತ ಆಚರಿಸಿಕೊಂಡು ಬರುತ್ತಿವೆ. ಈ ಲಾಫ್ಟರ್ ಕ್ಲಬ್​ಗಳು ತಮಾಷೆ, ನಗೆಗಷ್ಟೇ ಸೀಮಿತವಾಗದೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿ ನಗುವಿನಿಂದ ದೇಹದಲ್ಲಿ ಬಿಡುಗಡೆಯಾಗುವ ಹಾರ್ವೇನ್​ಗಳು ದೇಹ-ಮನಸ್ಸುಗಳ ಉಲ್ಲಾಸಕ್ಕೆ ಪೂರಕ ಎಂಬುದನ್ನು ದೃಢೀಕರಿಸಿವೆ.
ಖ್ಯಾತ ನಗೆಗಾರ/ದಾರ್ಶನಿಕ ಬೀಚಿ ಅವರ ಈ ಮಾತುಗಳನ್ನೇ ಗಮನಿಸಿ- ‘ನಮ್ಮ ಜನ ಬಾಯಿಬಿಡುವುದು, ಹಲ್ ಕಿರಿಯುವುದು ಟೂಥ್​ಬ್ರಷ್​ಗೆ ಮಾತ್ರ!’ ಲಾಫ್ಟರ್ ಕ್ಲಬ್​ನ ರೂವಾರಿ ಡಾ.ಮದನ್ ಕಟಾರಿಯಾ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ- ‘ನಕ್ಕು ನಕ್ಕು ಸತ್ತ ಒಬ್ಬನನ್ನೂ ನಾನೆಂದೂ ಕಂಡಿಲ್ಲ ; ನಗದೇ ಸತ್ತ ಲಕ್ಷಾಂತರ ಜನರನ್ನು ಕಂಡಿದ್ದೇನೆ’. ಮೇ ಮೊದಲ ಭಾನುವಾರ ಸಾರ್ವಜನಿಕ ಉದ್ಯಾನ, ಮೈದಾನ, ಮನೆಯಂಗಳಗಳಲ್ಲಿ ಸೇರಿ ಸುಲಭದ ಮೈ -ಸಡಿಲಿಸುವ ವ್ಯಾಯಾಮದ ನಂತರ ಗಟ್ಟಿಯಾಗಿ, ಸಾಮೂಹಿಕವಾಗಿ ನಗುತ್ತ, ಚಪ್ಪಾಳೆ ತಟ್ಟುತ್ತ ಬೆರೆಯುವುದು, ಮನೆ -ಮಂದಿಯೆಲ್ಲ ಭಾಗಿಯಾಗಿ ನಲಿಯುವುದು ವಿಶ್ವ ನಗೆ ದಿನದ ಪರಿಪಾಠ. ಅಂತೆಯೇ ಮಂಕುತಿಮ್ಮನ ಹಿತವಚನಗಳಂತೆ, ‘ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ; ನಗುತ ನಗಿಸುವುದು ಅತಿಶಯದ ಧರ್ಮ’ ಎನ್ನುತ್ತ ನಿತ್ಯ ನಗು ನಗುತ್ತ ಇರುವ ಸದಾಶಯವನ್ನು ನಮ್ಮದಾಗಿಸಿಕೊಳ್ಳೋಣ.
ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಎಚ್​ಡಿಕೆ-ಸಿಪಿವೈ ಮೇಲಾಟ; ತಹಶೀಲ್ದಾರ್​​ಗಳಿಗೆ ಪೀಕಲಾಟ, ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ವರ್ಗಾವಣೆ ಹುಡುಗಾಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 2 =
Remember me
