ಬೆಂಗಳೂರು:ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ವಿಚಾರದಲ್ಲಿ ವಿಶೇಷ ಪ್ರಯತ್ನ-ಪ್ರದರ್ಶನಗಳು ನಡೆಯುತ್ತಿರುತ್ತವೆ. ಅದೇ ರೀತಿ ಈ ಸಲ ವಿಶ್ವದಾಖಲೆಯ ಪ್ರಯತ್ನವೊಂದು ನಡೆಯುತ್ತಿದೆ. ಕನ್ನಡ ಬಾವುಟದ ವಿಚಾರದಲ್ಲಿ ಇಂಥದ್ದೊಂದು ಯತ್ನ ನಡೆಯಲಿದೆ.
ಈಗಾಗಲೇ ಸರ್ಕಾರಿ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿರುವ ಕನ್ನಡ ಮನಸುಗಳು ಎಂಬ ಬಳಗ ಈ ಪ್ರಯತ್ನವೊಂದನ್ನು ಮಾಡಲು ಮುಂದಾಗಿದೆ. ಕನ್ನಡದ ಕೆಲಸದಲ್ಲಿ ತೊಡಗಿಕೊಂಡು ಐದು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ರಾಜ್ಯೋತ್ಸವದಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಮನಸುಗಳು ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ನಾವು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸುದೀರ್ಘ 5 ವರ್ಷಗಳ ಪಯಣವನ್ನು ಮುಗಿಸಿರುತ್ತೇವೆ. ಈ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿ, ಅನೇಕ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಜೊತೆ ಚರ್ಚಿಸಿ ಬೆಳಗಾವಿಯಲ್ಲಿ
ಈ ಸಲ ನ. 1ರಂದು ಅತಿ ಉದ್ದದ ಕನ್ನಡ ಬಾವುಟ ಪ್ರದರ್ಶನ ಮತ್ತು ಮೆರವಣಿಗೆ ಮಾಡಿ ಅದನ್ನು ಲಂಡನ್ ಬುಕ್ ಆಫ್ ರೆಕಾರ್ಡ್ಸ್​​ಗೆ ಸೇರಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈ ಹಿಂದೆ ಬೆಂಗಳೂರಿನಲ್ಲಿ 2,040 ಮೀಟರ್ ಉದ್ದದ ಬಾವುಟ ಪ್ರದರ್ಶನ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈ ಭಾರಿ ಸುಮಾರು 10000 ಅಡಿ ಅಂದರೆ ಸುಮಾರು 3,200 ಮೀಟರ್ ಉದ್ದದ ಬಾವುಟ ಬೆಳಗಾವಿಯ ಚೆನ್ನಮ್ಮ ಸರ್ಕಲ್ ಬಳಿ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಅನೇಕ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಕೈಜೋಡಿಸಲಿವೆ ಎಂದು ಕನ್ನಡ ಮನಸುಗಳ ಪವನ್​ ತಿಳಿಸಿದ್ದಾರೆ.
‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
