ಬೆಂಗಳೂರು:ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕೆಪಿಸಿಸಿ ಕಟ್ಟಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು(ಭಾನುವಾರ) ಬೆಳಗ್ಗೆ ಪೂಜೆ ನೆರವೇರಿಸಿದರು.
ಬೆಳಗಿನ ಜಾವ 5ರಿಂದಲೇ ಹೋಮ-ಹವನ ಆರಂಭವಾಗಿ ಸುಮಾರು 10 ಗಂಟೆಗೆ ಪೂರ್ಣಾವುತಿ ನೆರವೇರಿತು. ಲೋಕಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ ಮತ್ತಿತರ ಮುಖಂಡರು ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಸಂಕಲ್ಪ ಮಾಡಿದರು.
ಇದನ್ನೂ ಓದಿರಿಐಸಿಯುನಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿ, ಸಾವಿನಮನೆಯ ಹಾದಿ ತುಳಿದ…
ಪೂಜೆಯಲ್ಲಿ ಡಿಕೆಶಿ ಜತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡ ಭಾಗವಹಿಸಿದ್ದರು. ಹೋಮ‌ ಮುಗಿದ ಬಳಿಕ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು. ಹೋಮ ಕಾರ್ಯಕ್ರಮ ವೇಳೆ ಕಾಂಗ್ರೆಸ್ ನಾಯಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಕರೊನಾ ಆತಂಕದ ನಡುವೆಯೂ ಗುಂಪು ಗುಂಪಾಗಿ ಸೇರಿದ್ದರು.
ಇನ್ನು ಹೋಮ-ಹವನ ಸ್ಥಳಕ್ಕೆ ಆಗಮಿಸಿದ ಮಂಗಳಮುಖಿಯರು ಡಿಕೆಶಿಗೆ ಆಶೀರ್ವಾದ ಮಾಡಿದರು. ಜೇಬಿನಿಂದ 500 ರೂ. ಮುಖ ಬೆಲೆಯ ದುಡ್ಡಿನ ಕಂತೆ ತೆಗೆದ ಡಿಕೆಶಿ, ಅದರಲ್ಲಿ ಮಂಗಳಮುಖಿಯರಿಗೆ ಮೂರು ಸಾವಿರ ರೂ. ಕೊಟ್ಟರು.
ಈ ವಿಡಿಯೋ ನೋಡಿ
https://www.facebook.com/VVani4U/videos/579662602694249/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 2 =
Remember me
