ಬೆಂಗಳೂರು:2022-23ನೇ ಶೈಕ್ಷಣಿಕ ಸಾಲಿನ ‘ಪರಿಷ್ಕೃತ ಪಠ್ಯಕ್ರಮ’ದಲ್ಲಿ ತಮ್ಮ ಬರಹಗಳನ್ನು ಪರಿಗಣಿಸದಂತೆ ಕೋರಿದ್ದ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಏಳು ಜನ ಲೇಖಕರ ಗದ್ಯ-ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಯಿಂದ ಕೈಬಿಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿನ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ (ಗದ್ಯ), ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ರಚಿಸಿರುವ ಡಾ.ರಾಜ್‌ಕುಮಾರ್ (ಗದ್ಯ), ಕನ್ನಡ ತೃತೀಯ ಭಾಷಾ ಪಠ್ಯದಿಂದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕಂಬಳಿ ಅವರ ಹೀಗೊಂದು ಟಾಪ್ ಪ್ರಯಾಣ ಎಂಬ ಪೂರಕ ಗದ್ಯಭಾಗಗಳು, ಸತೀಶ್ ಕುಲರ್ಣಿ ಅವರ ಕಟ್ಟತೇವ ನಾವು (ಪದ್ಯ), ಕನ್ನಡ ದ್ವಿತೀಯ ಭಾಷಾ ಪಠ್ಯದಿಂದ ಸುಕನ್ಯ ಮಾರುತಿ ಅವರ ಏಣಿ (ಪದ್ಯ) ಪಾಠಗಳನ್ನು ಈ ವರ್ಷದ ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಯಿಂದ ಕೈಬಿಡಲು ಕ್ರಮ ವಹಿಸುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಎಲ್ಲ ಲೇಖಕರು ಪಠ್ಯ ಪರಿಷ್ಕರಣೆ ವಿವಾದದ ಸಂದರ್ಭದಲ್ಲಿ ತಮ್ಮ ಬರಹಗಳನ್ನು ಪಠ್ಯದಲ್ಲಿ ಅಳವಡಿಸಲು ಈ ಹಿಂದೆ ನೀಡಿದ್ದ ಅನುಮತಿ ಹಿಂಪಡೆದಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಕೊನೆಗೆ ಈ ಯಾವುದೇ ಸಾಹಿತಿ, ಲೇಖಕರ ಗದ್ಯ-ಪದ್ಯ ಸೇರಿ ಯಾವುದೇ ಬರಹಗಳನ್ನು ಪಠ್ಯದಲ್ಲಿ ಅಳವಡಿಸುವ ಮುನ್ನ ಅವರ ಅನುಮತಿ ಪಡೆಯಬೇಕಾಗುತ್ತದೆ. ಅವರು ಅನುಮತಿ ನೀಡದಿದ್ದರೆ ಅಥವಾ ನೀಡಿರುವ ಅನುಮತಿ ವಾಪಸ್ ಪಡೆದರೆ ಅಂತಹ ಬರಹಗಳನ್ನು ಪಠ್ಯದಿಂದ ಕೈಬಿಡಬೇಕಾಗುತ್ತದೆ. ಆದರೆ ಈ ಲೇಖಕರ ಅಭಿಪ್ರಾಯ ಬರುವ ವೇಳೆಗಾಗಲೇ ಸರ್ಕಾರ ಪಠ್ಯಪುಸ್ತಕಗಳನ್ನು ಮುದ್ರಿಸಿದ್ದರಿಂದ ಈಗ ಪಠ್ಯದಲ್ಲಿ ಅವರ ಬರಹಗಳು ಇದ್ದರೂ ಮಕ್ಕಳಿಗೆ ಬೋಧನೆ, ಕಲಿಕೆ ಮತ್ತು ಪರೀಕ್ಷೆಗೆ ಪರಿಗಣಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಸಾರ್ಟಲ್ಲಿ ಯುವತಿಯ ಕೊಲೆ, ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್; ವಾರದ ಹಿಂದೆ ನಾಪತ್ತೆ ಆಗಿದ್ದ ಉದ್ಯೋಗಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + two =
Remember me
