ಬಾಗಲಕೊಟೆ:ಹಿರಿಯ ಸಾಹಿತಿ, ಹೆಸರಾಂತ ಕತೆಗಾರ ಪ್ರೊ.ಅಬ್ಬಾಸ್ ಮೇಲಿನಮನಿ(66) ಸೋಮವಾರ ತೀವ್ರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಮುಸ್ಲಿಂ ಸಂಪ್ರದಾಯದಂತೆ ಹಳೇ ಬಾಗಲಕೋಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಥಾ ಸಂಕಲನಗಳು:ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಾದಂಬರಿ: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ. ಸಂಪಾದಿತ ಕೃತಿ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು.
ಪ್ರಶಸ್ತಿ-ಪುರಸ್ಕಾರಗಳು:ಮಂಗಳೂರಿನ ಮಹ್ಯುದ್ದೀನ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸಾ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ.
ಉಡುಪಿಯಲ್ಲಿ ಬಹುಮಹಡಿ ಕಟ್ಟಡದ ಬಳಿ ಭೂಕುಸಿತ; ಆತಂಕದಲ್ಲಿ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
