ಚಿಕ್ಕಮಗಳೂರು:ಲಾಕ್​ಡೌನ್​ನಿಂದಾಗಿ ರೈತರ ಪಾಡು ಸಂಕಷ್ಟಕ್ಕೀಡಾಗಿದೆ. ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದಂತಾಗಿದೆ. ರೈತರ ಪರವಾಗಿ ಸರ್ಕಾರ ನಿಂತಿದೆ. ಆದರೂ ಪ್ರತಿ ಹಳ್ಳಿಯ ರೈತರನ್ನು ತಲುಪುವುದು ಕೊಂಚ ಕಷ್ಟವೇ ಆಗುತ್ತಿದೆ.
ಹೀಗಿರುವಾಗ ಮಾಜಿ ಶಾಸಕ ವೈ.ಎಸ್​.ವಿ.ದತ್ತ ಕಡೂರು ರೈತರ ನೆರವಿಗೆ ನಿಂತಿದ್ದಾರೆ. ಜಮೀನಿಗೇ ಹೋಗಿ ಅವರು ಬೆಳೆದ ಹಣ್ಣು, ತರಕಾರಿ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:ಏರ್​ ಇಂಡಿಯಾದ ಐವರು ಪೈಲಟ್​ಗಳಲ್ಲಿ ಕರೊನಾ ಸೋಂಕು; ಚೀನಾವೇ ಮೂಲ…!
ಸುಮಾರು ಒಂದೂವರೆ ಲಕ್ಷ ರೂ.ಮೌಲ್ಯದ 10 ಟನ್​ ಕಲ್ಲಂಗಡಿ, 3 ಟನ್​ ಟೊಮ್ಯಾಟೋವನ್ನು ಅದರ ಬೆಳೆಗಾರರಿಂದಲೇ ನೇರವಾಗಿ ಖರೀದಿಸಿ ಔದಾರ್ಯ ತೋರಿಸಿದ್ದಾರೆ.
ಕಡೂರಿನ ಕೆಲವು ರೈತರು ತಮ್ಮ ಕಲ್ಲಂಗಡಿ, ಟೊಮ್ಯಾಟೋಗಳನ್ನೆಲ್ಲ ಮಾರಾಟ ಮಾಡಲು ಸಾಧ್ಯವಾಗದೆ ಜಮೀನಿನಲ್ಲಿಯೇ ಬಿಟ್ಟಿದ್ದರು. ಅವರಿಗೆಲ್ಲ ಹಣ ಪಾವತಿಸಿ ಖರೀದಿ ಮಾಡಿದ ವೈ.ಎಸ್​.ವಿ.ದತ್ತ, ಅದನ್ನು ಕಡೂರು, ಬೀರೂರು ಮತ್ತಿತರ ಕಡೆ ಉಚಿತವಾಗಿ ಹಂಚಲು ತೀರ್ಮಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ:ಬೇಕರಿ ಮಾಲೀಕನ ಬಂಧನ..ಕಾರಣ ಅಂಗಡಿಯೆದುರು ಹಾಕಿದ್ದ ಒಂದು ಜಾಹೀರಾತು…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
