ಯಾದಗಿರಿ:ಅಬ್ಬೆತುಮಕೂರ ಗ್ರಾಮದ ವಿಶ್ವರಾಧ್ಯ ಆಂಗ್ಲಾ ಶಾಲಾ ಮುಂಭಾಗದ ವಿಶ್ವಾರಾಧ್ಯರ ಗದ್ದುಗೆ ಬಳಿ ಮಗು ಅಳುತ್ತಿದ್ದ ಶಬ್ದ ಕೇಳಿಸುತಿತ್ತು. ಕುತೂಹಲದಿಂದ ಸ್ಥಳಕ್ಕೆ ಹೋದ ಸ್ಥಳೀಯರು ಅಲ್ಲಿದ್ದ ಮಗು ಕಂಡು ಅರೆಕ್ಷಣ ಶಾಕ್​ ಆದರು!
ಹೌದು, ತಾಲೂಕಿನ ಮುಂಡರಗಿ ಸಮೀಪದ ಮಳ್ಳುಕಂಟಿಯಲ್ಲಿ ಇತ್ತೀಚಿಗೆ ನವಜಾತ ಶಿಶು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಅನಾಥ ನವಜಾತ ಗಂಡುಶಿಶು ಅಬ್ಬೆತುಮಕೂರ ಗ್ರಾಮದಲ್ಲಿ ಸಿಕ್ಕಿದೆ. ಯಾರೋ ಕಿಡಿಗೇಡಿಗಳು ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗದ್ದುಗೆಯೊಳಗೆ ಇಟ್ಟು ಹೋಗಿರುವ ಘಟನೆ ಸೋಮವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಶಿಶು ಯೋಜನಾಧಿಕಾರಿ ರಾಧಾ ಮಣ್ಣೂರ ಮತ್ತು ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಸುಗೂಸನ್ನು ರಕ್ಷಿಸಿದರು. ಈ ಮಗುವಿನ ತೂಕ 2.5 ಕೆಜಿ ಇದ್ದು, ಆರೋಗ್ಯವಾಗಿದೆ.
ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದೆ. ವಿಶ್ವಾರಾಧ್ಯ ಗದ್ದುಗೆ ಬಳಿ ಸಿಸಿ ಕ್ಯಾಮರಾ ಇದೆ. ಇಲ್ಲಿಗೆ ಮಗು ತಂದಿಟ್ಟವರು ಯಾರು ಎಂದು ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ತಿಳಿಸಿದ್ದಾರೆ.
ದಿಢೀರ್​ ಖಾತೆ ಬದಲಾವಣೆಗೆ ಇದೇ ಕಾರಣ: ಡಿ.ಕೆ. ಶಿವಕುಮಾರ್

ಖಾತೆ ಕಿತ್ತುಕೊಂಡ ಬೆನ್ನಲ್ಲೇ ಖಾಸಗಿ ಕಾರನ್ನೇರಿ ಶ್ರೀರಾಮುಲು ಹೊರಟದ್ದೆಲ್ಲಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
