ಯಾದಗಿರಿ:ಜಿಲ್ಲೆಯಾದ್ಯಂತ ಇಂದು ಗುಡುಗು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಸ್ವಲ್ಪ ತಂಗಾಳಿಯನ್ನು ಮಳೆ ತಂದಿದ್ದರೆ, ಅದರೊಂದಿಗೆ ಕೆಲ ಸಮಸ್ಯೆಗಳನ್ನೂ ಸೃಷ್ಟಿಸಿ ಹೋಗಿದೆ.
ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್​ ಕಂಬಗಳು ನೆಲಕ್ಕುರಳಿವೆ. ಸುಭಾಷ್​ ಚೌಕ್​ ಹತ್ತಿರವಿರುವ ಉಳ್ಳೆಸೂಗುರ್ ಕಾಂಪ್ಲೆಕ್ಸ್​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಓರ್ವ ಮಹಿಳೆ ಗಾಯಾಳುವಾಗಿರುವುದಾಗಿ ಹೇಳಲಾಗಿದೆ. ಕಾಂಪ್ಲೆಕ್ಸ್ ಬಳಿ ಇದ್ದ ಹತ್ತಾರು ಬೈಕ್​ಗಳು ನುಜ್ಜುಗುಜ್ಜಾಗಿರುವ ಮಾಹಿತಿಯಿದೆ.
ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಾಗಪ್ಪ ಹೆಸರಿನ ರೈತನಿಗೆ ಸೇರಿರುವ ಹಸುವೊಂದಕ್ಕೆ ಸಿಡಿಲು ಬಡಿದಿದ್ದು, ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಯಾದಗಿರಿ-ಬೆಂಗಳೂರು ರಾಜ್ಯ ಹೆದ್ದರಿಯಲಿ ದೊಡ್ಡ ನೀಲಗಿರಿ ಮರವೊಂದು ಧರೆಗುರುಳಿದೆ. ರಸ್ತೆ ಮೇಲೆ ಮರ ಬಿದ್ದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಗ್ರಾಮಸ್ಥರ ನೆರವಿನಿಂದಾಗಿ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಿನಕ್ಕೆ 5 ಬಾಟಲಿ ಬಿಯರ್​ ಕುಡಿದು 46 ದಿನಗಳಲ್ಲಿ 18 ಕೆಜಿ ಇಳಿಸಿದ ಭೂಪ!

ಆ ರೀತಿಯ ವಿಡಿಯೋವನ್ನು ಅಮ್ಮನಿಗೆ ಕಳುಹಿಸಿದ ಮಗಳು! ಇದೆಲ್ಲ ಆ್ಯಪ್​ ತಪ್ಪೆಂದು ಕ್ಷಮೆಯಾಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
