ಯಾದಗಿರಿ:ಕೇಸು ದಾಖಲಾಗುತ್ತಿದ್ದಂತೆ ಅಪಹರಣಕಾರರು ಅಂಗನವಾಡಿ ಸಹಾಯಕಿಯನ್ನು ರಾತ್ರೋ ರಾತ್ರಿ ಊರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿರುವ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿಯಲ್ಲಿ ನಿನ್ನೆ ನಡೆದಿದೆ.
ಆಸ್ತಿ ವಿಚಾರವಾಗಿ ಸಹೋದರನಿಂದಲೇ ಸಹೋದರಿ ಅಂಗನವಾಡಿ ಸಹಾಯಕಿ ಮಲ್ಲಮ್ಮಳನ್ನು ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪ ಕೇಳಿಬಂದಿದೆ.
ಶುಕ್ರವಾರ ಕೋವಿಡ್ ಜಾಗೃತಿ ಮೂಡಿಸುವ ಕರ್ತವ್ಯದಲ್ಲಿರುವಾಗಲೇ ಮಲ್ಲಮ್ಮಳನ್ನು ಅಪಹರಣ ಮಾಡಲಾಗಿತ್ತು. ಸಹೋದರ ಬಸವರಾಜು ಹಾಗೂ ಆತನ ಮಕ್ಕಳು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.
ಇತ್ತ ಕಿಡ್ನಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್​ಪಿ ವೇದಮೂರ್ತಿ ಸ್ಥಳಕ್ಕೆ ಭೇಟಿ ಪೊಲೀಸರ ಕಟ್ಟೆಚ್ಚೆರ ವಹಿಸಿದ್ದರು. ಈ ಬಗ್ಗೆ ಕೆಂಭಾವಿ ಪೊಲೀಸ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೆವೆಂಬ ಭಯದಲ್ಲಿ ಶುಕ್ರವಾರ ರಾತ್ರಿಯೇ ಕೊರೊನಾ ವಾರಿಯರ್ಸ್‌ ಮಲ್ಲಮ್ಮಳನ್ನು ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರ ಕಟ್ಟೆಚ್ಚೆರದಿಂದ ಕಿಡ್ನಾಪ್ ಆಗಿದ್ದ ಕೊರೊನಾ ವಾರಿಯರ್ಸ್‌ ಮಲ್ಲಮ್ಮ ಬಚಾವ್ ಆಗಿದ್ದಾರೆ. ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮತ್ತೆ ಶುರುವಾಗುತ್ತಾ ಬಿಗ್​ಬಾಸ್​ ಸೀಸನ್​ 8? ಕಿಚ್ಚನ ಆ ಒಂದು ಮಾತು ನಿಜವಾಗಲಿದೆಯೇ?

ಅಮೇಜಾನ್​ನಲ್ಲಿ ಮೌಥ್​ವಾಶ್​ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಕಾದಿತ್ತು ಬಿಗ್​ ಸರ್ಪ್ರೈಸ್​..!

19 ಮಹಿಳೆಯರ ಮೇಲೆ ಕಾಮುಕನ ಅಟ್ಟಹಾಸ: ರೇಪ್​ ಬಗ್ಗೆ ಆರೋಪಿ ಕೊಟ್ಟ ಹೇಳಿಕೆ ಕೇಳಿ ಪೊಲೀಸರೇ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eight =
Remember me
