ಯಾದಗಿರಿ:ಚಂದ್ರಯಾನ 3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಕುಟುಂಬವೊಂದು ತಮ್ಮ ಮಕ್ಕಳಿಬ್ಬರಿಗೆ ವಿಕ್ರಮ್​ ಹಾಗೂ ಪ್ರಗ್ಯಾನ್ ಎಂದು ಹೆಸರಿಡುವ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಒಂದೇ ಕುಟುಂಬದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜನಿಸಿರುವ ಗಂಡು ಮಕ್ಕಳಿಬ್ಬರಿಗೆ ನಾಮಕರಣ ಮಾಡಲಾಗಿದೆ.
ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್​ ಎಂದು ಹಾಗೂ ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ. ವಿಕ್ರಮ್​ ಹೆಸರಿನ ಮಗು ಜುಲೈ 28 ರಂದು ಜನಿಸಿತು ಮತ್ತು ಪ್ರಗ್ಯಾನ್ ಹೆಸರಿನ ಮಗು ಅಗಸ್ಟ್ 18 ರಂದು ಜನಿಸಿತು.
ಆಗಸ್ಟ್ 24ರಂದು ಮಕ್ಕಳಿಬ್ಬರಿಗೂ ಕುಟುಂಬಸ್ಥರು ನಾಮಕರಣ ಮಾಡಿದ್ದಾರೆ. ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಕುಟುಂಬಸ್ಥರು ಮಕ್ಕಳಿಗೆ ಹೆಸರಿಟ್ಟಿದ್ದಾರೆ.
ಇದನ್ನೂ ಓದಿ:ಛೇ ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ರಾಜ್ಯ ಬಿಜೆಪಿ ನಾಯಕರನ್ನು ಅಣಕಿಸಿದ ಕಾಂಗ್ರೆಸ್​
ಚಂದ್ರಯಾನ 3 ನೌಕೆಯನ್ನು ಜುಲೈ 14 ರಂದು ಮಧ್ಯಾಹ್ನ 2.35ರ ಸಮಯಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಯಿತು. ಆಗಸ್ಟ್​ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದ್ದು, ಚಂದ್ರನ ಮೇಲೆ ಇಳಿಗೆ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ಇದುವರೆಗೂ ಅಮೆರಿಕ, ಚೀನಾ, ರಷ್ಯಾ ಮಾತ್ರ ಚಂದ್ರನ ಮೇಲೆ ಇಳಿದಿದೆ.
ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ವಿಕಮ್​ ಲ್ಯಾಂಡರ್​ನಿಂದ ಪ್ರಗ್ಯಾನ್​ ರೋವರ್​ ಚಂದ್ರನ ಅಂಗಳಕ್ಕೆ ಇಳಿದಿದ್ದು, ತನ್ನ ಅಧ್ಯಯನವನ್ನು ಆರಂಭಿಸಿದೆ. ಚಂದ್ರನ ಮೇಲೆ ನೀರು, ಖನಿಜಗಳ ಅಧ್ಯಯನ, ಚಂದ್ರನ ಮೇಲ್ಮೈ ಹಾಗೂ ಚಂದ್ರನ ವಾತಾವರಣವನ್ನು ಅಧ್ಯಯನ ಮಾಡಲಿದೆ.(ದಿಗ್ವಿಜಯ ನ್ಯೂಸ್​)
ಚಂದ್ರಯಾನ ಯಶಸ್ಸು ಸಹಿಸದ ಬ್ರಿಟನ್​ ಮಂದಿ: ವಿದೇಶಿ ನೆರವು ನಿಲ್ಲಿಸಲು ಒತ್ತಾಯ, ಭಾರತೀಯರ ತಿರುಗೇಟು ಹೀಗಿತ್ತು…

ಇದೇ ನೋಡಿ ಚಂದ್ರಯಾನ-3 ಚಂದ್ರನನ್ನು ಸ್ಪರ್ಶಿಸಿದ ಜಾಗ! ಲ್ಯಾಂಡಿಂಗ್​ ಬಳಿಕ ಸೆರೆಹಿಡಿದ ಮೊದಲ ಚಿತ್ರ ಬಿಡುಗಡೆ

ನಾಚಿಕೆಯಾಗಬೇಕು! ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕ್​ ನಟಿ ಸೆಹರ್​ ಶಿನ್ವಾರಿ ನೀಡಿದ ಹೇಳಿಕೆ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 16 =
Remember me
