ಯಾದಗಿರಿ:ಮಹಾಮಾರಿ ಕರೊನಾ ವೈರಸ್​ ನಿಯಂತ್ರಿಸಲು ಲಾಕ್​ಡೌನ್​ ಹೇರಿರುವ ಸಮಯದಲ್ಲಿ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುವುದು ಸಾಮಾನ್ಯ. ಜನರು ಸರ್ಕಾರ ಮತ್ತು ಪೊಲೀಸರನ್ನು ಶಪಿಸುವುದು ಕೂಡ ಸಾಮಾನ್ಯವಾಗಿದೆ.
ಹೀಗಿರುವಾಗ ಇಲ್ಲೊಬ್ಬ ಪೊಲೀಸ್​ ಪೇದೆ ಬಡವರ ಹಸಿವು ನೀಗಿಸುವ ಜತೆಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ವಿಶೇಷವಾಗಿ ಕೋವಿಡ್ ಜಾಗೃತಿ ಕಾರ್ಯಕ್ರಮ ಮೂಲಕ ಗಮನ ಸೆಳೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಠಾಣೆಯ ಪೊಲೀಸ ಪೇದೆ ದಯಾನಂದ ಅವರಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಡಜನರಿಗೆ, ನಿರ್ಗತಿಕರಿಗೆ ಆಹಾರ ವಿತರಣೆಯಾಗುತ್ತಿದೆ.
ಅದೇ ರೀತಿ ಗ್ರಾಮೀಣ ಭಾಗಕ್ಕೆ ತೆರಳಿ ಕೋವಿಡ್ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ವಿತರಣೆಯ ಜತೆಗೆ ಸಾಮಾಜಿಕ ಅಂತರ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ‌ಕೂಡ ಕರೊನಾ ಎರಡನೇ ಅಲೆಯಿಂದ ಗ್ರಾಮೀಣ ಭಾಗದಲ್ಲಿ ದಿ‌ನ ನಿತ್ಯವೂ ‌ಕರೊನಾ ಪ್ರಕರಣಗಳ ಹೆಚ್ಚಳ‌ ಹಿನ್ನೆಲೆಯಲ್ಲಿ ದಯಾನಂದ ಅವರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಈ ನಟಿಗೆ ಟ್ರೈನ್​ ಅಂದ್ರೆ ಭಯವಂತೆ! ಬಾತ್​ರೂಮ್​ ಬಳಿ ಎದುರಿಸಿದ ಅಶ್ಲೀಲ ಘಟನೆ ಬಿಚ್ಟಿಟ್ಟ ನಟಿ

ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್​!​​

ಸವಿ ನಿದ್ರೆಯಲ್ಲಿದ್ದ ದಂಪತಿಗೆ ಕೇಳಿತು ಬಾಗಿಲು ಮುರಿತದ ಶಬ್ದ: ಎಚ್ಚರಗೊಂಡವರಿಗೆ ಕಾದಿತ್ತು ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
