ಉಡುಪಿ:ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿ ಬಾರೀ ಸುದ್ದಿಯಾಗಿತ್ತು. ಇದೀಗ ಅದೇ ರೀತಿಯ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಯಕ್ಷಗಾನ ಕಲಾವಿದರೊಬ್ಬರ ಮೇಲೆ ದೈವ ಆವಾಹನೆಯಾಗಿರುವ ವಿಡಿಯೋ ವೈರಲ್​ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಬಡಗುತಿಟ್ಟುವಿನ ಪ್ರಸಿದ್ಧ ಹಟ್ಟಿಯಂಗಡಿ ಮೇಳದಿಂದ ದೈವದ ಮಹಿಮೆಗೆ ಸಂಬಂಧಿಸಿದ ಪ್ರಸಂಗದ ಯಕ್ಷಗಾನ ನಡೆಯುತ್ತಿತ್ತು. ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರು ದೈವದ ವೇಷ ಧರಿಸಿ, ದೀವಟಿಕೆ ಹಿಡಿದುಕೊಂಡು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶಿಸುತ್ತಿದ್ದರು. ಆ ವೇಳೆ ಅವರ ಮೈ ಮೇಲೆ ದೈವ ಆವಾಹನೆ ಆಗಿದೆ. ರಂಗಸ್ಥಳ ಏರುವುದಕ್ಕೂ ಸಲ್ವ ಮುನ್ನ ಆವಾಹನೆ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದೈವ ಆವಾಹನೆಯಾಗುತ್ತಿದ್ದಂತೆಯೇ ದೀವಟಿಕೆ ಹಿಡಿದುಕೊಂಡಿದ್ದ ಸಹಾಯಕ, ದೀವಟಿಗೆಯನ್ನು ಕಲಾವಿದನಿಂದ ಎಳೆದು ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಸಾಕಷ್ಟು ಜನರು ಕಣ್ಣು ತುಂಬಿಕೊಂಡಿದ್ದು, ಜಿಲ್ಲೆಯಾದ್ಯಂತ ಅದರದ್ದೇ ಚರ್ಚೆ ನಡೆಯುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದೀವಟಿಕೆ ಹಿಡಿದು ರಂಗ ಪ್ರವೇಶಿಸುತ್ತಿದ್ದ ಕಲಾವಿದನ ಮೇಲೆ ದೈವ ಆವಾಹನೆ!ಹಟ್ಟಿಯಂಗಡಿ ಮೇಳದಿಂದ, ಉಡುಪಿ ಜಿಲ್ಲೆಯಲ್ಲಿ ದೈವದ ಮಹಿಮೆಗೆ ಸಂಬಂಧಿಸಿದ ಪ್ರಸಂಗದ ಯಕ್ಷಗಾನ ನಡೆಸುತ್ತಿರುವಾಗ, ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರ ಮೇಲೆ ದೈವ ಆವಾಹನೆ ಆಗಿರುವ ದೃಶ್ಯವಿದು..ವಿವರಗಳಿಗೆhttps://t.co/JCps2efeGVನೋಡಿ..#Udupipic.twitter.com/kK4AVGHlAJ
— Vijayavani (@VVani4U)March 12, 2021

ಹನುಮಂತನ ಹೆಸರಲ್ಲೂ ರೇಷನ್​ ಕಾರ್ಡ್​! ಹನುಮನ ಅಪ್ಪನ ಹೆಸರು ಏನು ಗೊತ್ತಾ?

ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
