|ಧನಂಜಯ ಗುರುಪುರ
ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಕರಿಮಣೇಲು ಗ್ರಾಮದ ಯಕ್ಷಗಾನ ಕಲಾವಿದ ಕೃತಕ ಕಾಲಿನಿಂದ ಕುಣಿದು ಛಲವಿದ್ದರೆ ಅಂಗವೈಕಲ್ಯ ಶಾಪವಲ್ಲ ಎಂಬ ಮಾತನ್ನು ನಿಜವಾಗಿಸಿದ್ದಾರೆ. ಅಂಗವಿಕಲರಿಗೆ ಯಕ್ಷಗಾನ ರಂಗದಲ್ಲಿ ಸಾಧನೆ ಸುಲಭವಲ್ಲ. ಕಲಾವಿದನ ಸರ್ವಾಂಗವೂ ಈ ಕ್ಷೇತ್ರದಲ್ಲಿ ಸರಿಯಾಗಿರಬೇಕು. ಶೀನ – ಮಲ್ಲಿಕಾ ದಂಪತಿ ಪುತ್ರ ಮನೋಜ್ ರಂಗಪ್ರಸ್ತುತಿ ನೋಡಿದರೆ, ಅವರು ಎಡಕಾಲನ್ನು ಕಳೆದುಕೊಂದ ಕಲಾವಿದ ಎಂಬುದು ನೆನಪಾಗುವುದೇ ಇಲ್ಲ. 6ನೇ ತರಗತಿಯಲ್ಲಿದ್ದಾಗ ಎಡಗಾಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೊನೆಗೆ ಕಾಲನ್ನೇ ಕತ್ತರಿಸಬೇಕಾಯಿತು. 8ನೇ ತರಗತಿಯಲ್ಲಿರುವಾಗ ಮುಖ್ಯಶಿಕ್ಷಕ ವೆಂಕಟೇಶ್ ಎಸ್.ತುಳುಪುಳೆ ಅವರಿಂದ ಯಕ್ಷಗಾನದ ಪ್ರಾಥಮಿಕ ನಾಟ್ಯಾಭ್ಯಾಸ ಕಲಿತು, ಗಿರಿಜಾ ಕಲ್ಯಾಣ ಪ್ರಸಂಗದ ಬೈರಾಗಿ ಪಾತ್ರದಲ್ಲಿ ಪ್ರಥಮ ಬಾರಿಗೆ ರಂಗ ಪ್ರವೇಶಿಸಿದರು. ಮುಂದೆ ಮೂಡುಬಿದಿರೆ ಯಕ್ಷನಿಧಿಯಲ್ಲಿ ಶಿವಕುಮಾರ ಅವರಿಂದ ಹೆಚ್ಚಿನ ನಾಟ್ಯಾಭ್ಯಾಸ ಮಾಡಿದರು.
ಕರುಣಾಕರ ಶೆಟ್ಟಿ ಮತ್ತು ರಮೇಶ್ ಕುಲಶೇಖರ ಸುಂಕದಕಟ್ಟೆ ಮೇಳದಲ್ಲಿ ಹವ್ಯಾಸಿ ಕಲಾವಿದನಾಗಿ ಸೇರುವ ಅವಕಾಶ ನೀಡಿದರು. ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ತಿರುಗಾಟವನ್ನೂ ಮಾಡಿರುವ ಮನೋಜ್, ಬಪ್ಪನಾಡು ಮತ್ತು ಮಂಗಳಾದೇವಿ ಮೇಳದಲ್ಲಿ ಕಲಾಸೇವೆ ಮುಂದುವರಿಸಿದ್ದಾರೆ. ದೇವೇಂದ್ರ, ಬಲರಾಮ, ದೂಮ್ರಾಕ್ಷ, ಕಮಲಭೂಪ ಮೊದಲಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಸಂಘ-ಸಂಸ್ಥೆಗಳು ನಡೆಸುವ ಯಕ್ಷಗಾನ ಬಯಲಾಟಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ.
ನನ್ನ ಯಕ್ಷಗಾನ ಕಲಾಸಕ್ತಿಗೆ ಹಿರಿಯ, ಕಿರಿಯ ಕಲಾವಿದರು ಪ್ರೋತ್ಸಾಹ ನೀಡಿದ್ದಾರೆ. ರಮೇಶ್ ಕುಲಶೇಖರ, ಮಧುರಾಜ್ ಪೆಮುದೆ, ಮನೋಜ್ ಮೊದಲಾದವರ ಸಹಕಾರ ಅಪಾರ.
|ಮನೋಜ್ಯಕ್ಷಗಾನ ಕಲಾವಿದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
