ಬೆಂಗಳೂರು:ಮಕ್ಕಳೇ ಕಲಾವಿದರಾಗಿ ಅಭಿನಯಿಸುತ್ತಿದ್ದ ಯಕ್ಷಗಾನ ಪ್ರದರ್ಶನವೊಂದನ್ನು ಪೊಲೀಸರು ನಿಲ್ಲಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರು ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಕಾರಣ ಏನು ಎಂಬ ಕುರಿತ ಮಾಹಿತಿಯೊಂದು ಬಹಿರಂಗಗೊಂಡಿದೆ.
ಮಹಾಬಲ ಹೇರಿಕುದ್ರು ಎಂಬವರು ಸುಮಾರು ಐದು ವರ್ಷಗಳಿಂದ ಸ್ಥಳೀಯ ಹವ್ಯಾಸಿ ತಂಡಗಳ ಪ್ರೋತ್ಸಾಹಕ್ಕಾಗಿ ನವೆಂಬರ್ ತಿಂಗಳಲ್ಲಿ 10 ದಿವಸ ದಿನಕ್ಕೊಂದರಂತೆ ಹತ್ತು ತಂಡಗಳ ಯಕ್ಷಗಾನ ಮಾಡಿಕೊಂಡು ಬರುತ್ತಿದ್ದಾರೆ. ಅದರ ಭಾಗವಾಗಿ ಶನಿವಾರ 15 ವರ್ಷಗಳ ಒಳಗಿನ ಮಕ್ಕಳಿಂದ ಪ್ರಸಂಗವೊಂದರ ಪ್ರದರ್ಶನ ಹಮ್ಮಿಕೊಂಡಿದ್ದು, ಅದನ್ನು ಪೊಲೀಸರ ಮೂಲಕ ತಡೆಯಲಾಗಿದೆ.
ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಉದಯ ಪೂಜಾರಿ ಎಂಬವರ ದೂರಿನ ಮೇರೆಗೆ ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದು, ಅನಿವಾರ್ಯವಾಗಿ ಪ್ರಸಂಗವನ್ನು ಇಲ್ಲಿಗೇ ನಿಲ್ಲಿಸಲಾಗುತ್ತಿದೆ ಎಂದು ಹೇಳಿ ಆಯೋಜಕರು ಯಕ್ಷಗಾನ ಪ್ರದರ್ಶನ ಮೊಟಕುಗೊಳಿಸಿದ್ದರು.
ಇದನ್ನೂ ಓದಿ:ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ: ಮಕ್ಕಳೆಂದೂ ನೋಡದೆ ತಡೆ; ವಿಡಿಯೋ ವೈರಲ್
ಈ ಪ್ರಕರಣ ಕುರಿತ ವಿಡಿಯೋ ವೈರಲ್ ಆಗಿದ್ದು, ಯಕ್ಷಗಾನವನ್ನು ನಿಲ್ಲಿಸಿದ ಬಗ್ಗೆ ಕಲಾಭಿಮಾನಿಗಳಿಂತ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮತ್ತೊಂದೆಡೆ ಇದರ ಹಿನ್ನೆಲೆ ಹೀಗೂ ಇರಬಹುದಾ ಎಂಬಂಥ ಸಂಗತಿಯೊಂದು ಕೂಡ ಬಯಲಾಗಿದೆ.
ಪೊಲೀಸರಿಗೆ ಹೇಳಿ ಯಕ್ಷಗಾನ ನಿಲ್ಲಿಸಿದ್ದ ಉದಯ ಪೂಜಾರಿ ಅವರು ಯಕ್ಷಗಾನ ಆಯೋಜಕ ಮಹಾಬಲ ಪೂಜಾರಿ ಅವರಿಗೆ ಗ್ರಾಮ ಪಂಚಾಯತ್​ನಿಂದ ನೀಡಿದ್ದ ತಿಳುವಳಿಕೆ ಪತ್ರ, ಯಕ್ಷಗಾನ ನಿಲ್ಲಿಸಿದ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಬಹಿರಂಗಗೊಂಡಿದ್ದು, ಅದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ:Mangaluru: ಯಕ್ಷಗಾನ ವೇಷಧರಿಸಿ ಭಿಕ್ಷಾಟನೆಗೆ ಮುಂದಾದ ವ್ಯಕ್ತಿಗೆ ಚಳಿ ಬಿಡಿಸಿದ ಕಲಾವಿದ
ಮಹಾಬಲ ಪೂಜಾರಿ ಅವರು ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೇರಿಕುದ್ರು ಮಾನಸ ಮಂದಿರ ಎಂಬ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ಆ ಕಟ್ಟಡಕ್ಕೆ ನೀರಿನ ಸಂಪರ್ಕವನ್ನೂ ಅಕ್ರಮವಾಗಿ ಪಡೆದುಕೊಂಡಿದ್ದು, ಅಲ್ಲಿ ಲಾಭದಾಯಕ ವ್ಯವಹಾರ ನಡೆಸಲಾಗುತ್ತಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ನೀರಿನ ಸಂಪರ್ಕವನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಆ ಕುರಿತ ದಂಡದ ಮೊತ್ತವನ್ನು ಗ್ರಾಮ ಪಂಚಾಯತ್​ಗೆ ಇನ್ನೂ ಪಾವತಿಸಿಲ್ಲ. ಕಟ್ಟಡದ ಪರವಾನಗಿ ಸಂಬಂಧ ದಾಖಲೆ ನೀಡಬೇಕು, ದಂಡದ ಹಣ ಪಾವತಿಸಬೇಕು, ಲಾಭದಾಯಕ ವ್ಯವಹಾರ ನಡೆಸಬಾರದು ಮತ್ತು ಆ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಕ್ರಮಕ್ಕೆ ಆಗ್ರಹಿಸಿದ ಉದಯ ಪೂಜಾರಿ ಅವರು ಗ್ರಾಮ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯ ಗ್ರಾಮ ಪಂಚಾಯತ್​ನವರು ಮಹಾಬಲ ಪೂಜಾರಿ ಅವರಿಗೆ ನ. 2ರ ದಿನಾಂಕ ಇರುವ ತಿಳುವಳಿಕೆ ಪತ್ರ ನೀಡಿ, ಮೂರು ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸಿ ಗ್ರಾಮ ಪಂಚಾಯತ್​ಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಲಾಗಿತ್ತು.
ಹೀಗಾಗಿ ಈ ಯಕ್ಷಗಾನ ಪ್ರದರ್ಶನ ತಡೆಗೆ ಈ ಹಿನ್ನೆಲೆಯೂ ಕಾರಣ ಇರಬಹುದಾ ಎಂಬ ಮಾತುಗಳು ಕೇಳಿಬರುತ್ತಿದೆ. ಅದಾಗ್ಯೂ ಮಕ್ಕಳ ಯಕ್ಷಗಾನವನ್ನು ಆ ರೀತಿಯಾಗಿ ನಿಲ್ಲಿಸಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಬೆಂಗಳೂರಿನ ಈ ಅಪಾರ್ಟ್​ಮೆಂಟ್​​ನಲ್ಲಿ ನಾಯಿಯನ್ನು ಸಾಕಲು 10 ಸಾವಿರ ರೂ. ಕೊಡಬೇಕಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
