ಉಗರಗೋಳ(ಬೆಳಗಾವಿ):ಈ ಧಾರ್ವಿುಕ ಕ್ಷೇತ್ರಕ್ಕೆ ಯಾವುದೇ ಧರ್ಮ, ಭಾಷೆಯ ಹಂಗಿಲ್ಲ. ಹೈಟೆಕ್ ಯುಗದ ಅಬ್ಬರದ ಮಧ್ಯೆಯೂ ಇಲ್ಲಿ ಗ್ರಾಮೀಣ ಸಂಸ್ಕೃತಿ ಮರೆಯಾಗಿಲ್ಲ. ಇನ್ನು, ಮೈ ಕೊರೆಯುವ ಚಳಿ ಮಧ್ಯೆಯೇ ಪ್ರವಾಹದಂತೆ ಹರಿದುಬರುವ ಭಕ್ತರಿಗೆ ಕೊರತೆ ಇಲ್ಲ.
ಇದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನಗುಡ್ಡದ ವೈಶಿಷ್ಟ್ಯ ಈ ಏಳುಕೊಳ್ಳದ ನಾಡಿನಲ್ಲಿ ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಜರುಗಲಿರುವ ಬೃಹತ್ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
‘2 ಸಾವಿರ ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದ ಕ್ಷೇತ್ರದಲ್ಲಿ ಪ್ರತಿವರ್ಷ ಏಳು ಹುಣ್ಣಿಮೆಗಳಂದು ಜಾತ್ರೆ ಜರುಗುತ್ತವೆ. ಅದರಲ್ಲೂ, ಬನದ ಮತ್ತು ಭರತ ಹುಣ್ಣಿಮೆ ಜಾತ್ರೆಗಳ ಸಂಭ್ರಮ ಹೆಚ್ಚು. ಜೋಗುಳ ಬಾವಿ, ಎಣ್ಣೆ ಹೊಂಡದಲ್ಲಿ ಸ್ನಾನ ಮಾಡುವ ಭಕ್ತರು ಗುಡ್ಡದ ವಿಶಾಲ ಪ್ರದೇಶದಲ್ಲಿ 3-4 ದಿನಗಳವರೆಗೆ ವಾಸ್ತವ್ಯ ಹೂಡುತ್ತಾರೆ. ಆದಿಶಕ್ತಿ ಶ್ರೀ ರೇಣುಕೆಯ ನಾಮಸ್ಮರಣೆ ಮಾಡುತ್ತಾರೆ. ಭಕ್ತಿಯಿಂದ ನೈವೇದ್ಯ ತಯಾರಿಸಿ ಪರಡಿ ತುಂಬುತ್ತಾರೆ. ಯುವಕರು ಬಂಗಾರ ಮಯವಾದ ಭಂಡಾರದಲ್ಲಿ ಮಿಂದೇಳುತ್ತಾರೆ’ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಪಂಡಿತ ಯಡಿಯೂರಯ್ಯ.
‘ಇದು ದಕ್ಷಿಣ ಭಾರತದಲ್ಲೇ ಜರುಗುವ ದೊಡ್ಡ ಜಾತ್ರೆ. 15 ಲಕ್ಷಕ್ಕಿಂತ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ. ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರ ಗಸ್ತಿ. ಸುಕ್ಷೇತ್ರದ ಅಂಗಡಿ- ಮುಂಗಟ್ಟುಗಳಲ್ಲಿ ಹಸಿರು ಬಳೆ, ತೆಂಗಿನಕಾಯಿ, ಕರ್ಪರ, ಎಣ್ಣೆ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಚೌಡಕಿ ನಿನಾದ, ಜೋಗತಿಯರ ನೃತ್ಯ ಮನ ಸೆಳೆಯುತ್ತದೆ.
ಹಳ್ಳಿ ಜಾತ್ರೆ ಎಂದೇ ಫೇಮಸ್!
ಯಲ್ಲಮ್ಮನ ಸನ್ನಿಧಿಗೆ ಇಂದಿಗೂ ಚಕ್ಕಡಿಗಳಲ್ಲೇ ಅತ್ಯಧಿಕ ಭಕ್ತರು ಆಗಮಿಸು ವುದು ಇನ್ನೊಂದು ವಿಶೇಷ. ಇದೇ ಕಾರಣಕ್ಕೆ ‘ಹಳ್ಳಿ ಜಾತ್ರೆ’ ಎಂದೇ ಇದು ಫೇಮಸ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 9 =
Remember me
