ಬೆಂಗಳೂರು:
ಕೆಜಿಎಫ್​ ಚಾಪ್ಟರ್​ 1 ಮತ್ತು 2 ಭರ್ಜರಿ ಯಶಸ್ಸಿನ ಬಳಿಕ ನಟ ಯಶ್​ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್​ ಚಿತ್ರದಲ್ಲಿ ತಮ್ಮ ಮ್ಯಾನರಿಸಂನಿಂದ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಯಶ್​ ಸಂಪಾದಿಸಿದ್ದಾರೆ. ಇನ್ಮುಂದೆ ಅವರು ಸಣ್ಣ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದಾರೆ. ಆ ಮಟ್ಟಕ್ಕೆ ಯಶ್​ ತಲುಪಿದ್ದಾರೆ.
ಕೆಜಿಫ್ ಖ್ಯಾತಿಯ ಯಶ್​, ರಾಧಿಕಾ ಪಂಡಿತ್​ ಜೊತೆ ಯುರೋಪ್​ ಸುತ್ತಾಟ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಆಗಾಗ ಬೇರೆ ಬೇರೆ ದೇಶಗಳಲ್ಲಿ ಇವು ಫೊಟೊಗಳಿಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಲೇ ಇದ್ದರು. ಆದರೆ ಯಶ್​ರ ಯುರೋಪ್​ ಪ್ರವಾಸದ ಹಿಂದೆ ಬೇರೆಯದೇ ಕಥೆ ಇದೆ. ಈ ಸುದ್ದಿ ಕೇಳಿದರೆ ನಿಮ್ಮ ಹುಬ್ಬೇರೊದು ಗ್ಯಾರೆಂಟಿ!
ರಾಕಿಭಾಯ್ ಯುರೋಪ್ ಸುತ್ತಾಟದ ಹಿಂದಿನ ಮೆಗಾ ಸೀಕ್ರೆಟ್ ಈಗ ಬೆಳಕಿಗೆ ಬಂದಿದೆ. ಇನ್ನು ಕನ್ನಡ ಚಿತ್ರಗಳಲ್ಲಿ ಹಾಲಿವುಡ್​ನ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆಯಂತೆ! ಅನೇಕ ಸಮಯದಿಂದ ರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ದಕ್ಷಿಣಭಾರತದ ನಟರನ್ನು ತುಚ್ಛವಾಗಿ ಕಾಣಲಾಗುತ್ತಿತ್ತು ಎನ್ನುವುದನ್ನು ಅನೇಕ ನಟರು ಈ ಹಿಂದೆ ಹೇಳಿಕೊಂಡಿದ್ದರು. ಈಗ ಕನ್ನಡ ಸಿನಿ ಇಂಡಸ್ಟ್ರಿಯನ್ನು ನೆಕ್ಸ್ ಲೆವೆಲ್ ತಲುಪಿಸೋಕೆ ಯಶ್ ಪ್ಲಾನ್ ಮಾಡಿದ್ದಾರಂತೆ!
ಅದಕ್ಕಾಗಿ ತಜ್ಞರ ಜತೆ ಗಂಟೆಗಟ್ಟಲೇ ಚರ್ಚೆ, ಚಿಂತನ ಮಂಥನ ನಡೆಯುತ್ತಿದೆ. 2ನೇ ಫಿಲ್ಡ್ ಕಂಪಾನಿಯನ್ ವಾರ್ಷಿಕೋತ್ಸವದಲ್ಲಿ ಈ ಮೆಗಾ ರಹಸ್ಯ ಬಯಲಾಗಿದೆ. ಫಾರಿನ್ ಸುತ್ತಾಟದ ಬಗ್ಗೆ ಸ್ವಯಂ ರಾಜಾ ಹುಲಿ ರಹಸ್ಯ ಬಿಚ್ಚಿಟ್ಟಿದ್ದಾರೆ.
ಇದೀಗ ಹಾಲಿವುಡ್ ಸ್ಟಂಟ್ ಮಾಸ್ಟರ್ ಜಾನ್ ಪೆರ್ರಿಯನ್ನು ಯಶ್ ಭೇಟಿ ಮಾಡಿದ್ದು ಅದರ ಹಿಂದೆ ಸಿನಿಮಾ ರಣತಂತ್ರ ಇದೆ ಎನ್ನಲಾಗುತ್ತಿದೆ. ಎರಡನೇ ಫಿಲ್ಮ್ ಕಂಪಾನಿಯನ್ ವಾರ್ಷಿಕೋತ್ಸವದಲ್ಲಿ ರಾಕಿಂಗ್ ಸ್ಟಾರ್ ಮಿಂಚಿದ್ದು ರಾಕಿ ಭಾಯ್​ ಫಸ್ಟ್ ರೋ ಡಿಸ್ಕಷನ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಷ್ಟಕ್ಕೇ ನಿಲ್ಲದ ಯಶ್, ಸಿನಿಮಾ ವಿಮರ್ಶಕಿ ಅನುಪಮಾ ಚೋಪ್ರಾ ಜೊತೆ ವಿಶೇಷ ಸಂದರ್ಶನ ಕೂಡ ನಡೆಸಿದ್ದಾರೆ. ಇವರು ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಶೀರ್ಷಿಕೆ ಅಡಿಯಲ್ಲಿ ಚರ್ಚೆ ಮಾಡಿದ್ದಾರೆ. ಹಾಲಿವುಡ್ ಸಿನಿಮಾಗಳ ಮೇಕಿಂಗ್ ಸ್ಟೈಲ್ ಬಗ್ಗೆ ರಾಕಿ ಮಾತನಾಡಿದ್ದು ಕನ್ನಡ ಚಿತ್ರಗಳಲ್ಲಿ ಹೊಸ ತಂತ್ರಗಳನ್ನು ಅಳವಡಿಸುವ ಬಗ್ಗೆ ಘಟಾನುಘಟಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾಗೆ ಹಾಲಿವುಡ್ ಫ್ಲೇವರ್ ಅಳವಡಿಸುವ ಮೂಲಕ ಕನ್ನಡ ಇಂಡಸ್ಟ್ರಿಯನ್ನು ನೆಕ್ಸ್ಟ್ ಲೆವೆಲ್ ಗೆ ತಲುಪಿಸೋ‌ ಪ್ಲಾನ್​ನಲ್ಲಿ ಯಶ್ ಇದ್ದಾರೆ. ಚರ್ಚೆಯ ಸಂದರ್ಭ ಸುಮಾರು ಒಂದು ತಾಸಿನ ಕಾಲ ಸಿನಿಮಾ ಕನಸು, ಆಸಕ್ತಿ, ಮುಂದಿನ ಪ್ರಾಜೆಕ್ಟ್ ಬಗ್ಗೆ ಮುಕ್ತವಾಗಿ ರಾಕಿಭಾಯ್ ಹಂಚಿಕೊಂಡಿದ್ದಾರೆ. ಚರ್ಚೆಯಲ್ಲಿ ಯಶ್, ಹಿಂದೆಂದೂ ಕೇಳಿರದ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಈ ಸಂದರ್ಭ ಸ್ಯಾಂಡಲ್​ವುಡ್​ಗೆ ಹೊಸ ರೂಪ ಕೊಡುವ ಕನಸನ್ನು ಬಹಿರಂಗಗೊಳಿಸಿದ್ದಾರೆ.
ಇದೀಗ ಫಿಲ್ಮ್‌ ಕಂಪಾನಿಯನ್‌ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು ಕನ್ನಡ ಚಿತ್ರರಂಗದ ಹಲವು ಕನಸು ನನಸು ಮಾಡೋಕೆ ರಾಕಿ ಪರಿಶ್ರಮ ಪಡುತ್ತಿರುವ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:four × two =
Remember me
