ಬೆಂಗಳೂರು:ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್​​​ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal), ದೇಶದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಅವರು ಆಗಬೇಕಿತ್ತು. ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್. ಅಲ್ಲಿಂದ ಶುರುವಾದ ಕಾಂಗ್ರೆಸ್ ಮೋಸ, ಇಲ್ಲಿಯವರೆಗೂ ಮುಂದುವರಿದಿದೆ ಎಂದು ಹೇಳಿದರು.
ಇದನ್ನೂ ಓದಿ:ಸುಳ್ಳು ಹೇಳುವುದು ಕಾಂಗ್ರೆಸ್​​ನ ‘ಡಿಎನ್‌ಎ’ಯಲ್ಲಿದೆ: ಮಾಜಿ ಶಾಸಕ ಎನ್​. ಮಹೇಶ್
“ಸಿದ್ದರಾಮಯ್ಯ ಕುರ್ಚಿ ಬಿಡಲ್ಲ, ಡಿ.ಕೆ. ಶಿವಕುಮಾರ್​ ಸಿಎಂ ಆಗಲ್ಲ. ಡಿಸೆಂಬರ್​​ಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ, ವ್ಯಾರಂಟಿ ಮುಗಿಯುತ್ತೆ. ಇಂದು ದೆಹಲಿ, ಪಂಜಾಬ್ ದಿವಾಳಿಯಾಗಿವೆ. ರಾಜ್ಯದಲ್ಲಿ ಅರಾಜಾಕತೆ ಈಗಾಗಲೇ ಪ್ರಾರಂಭವಾಗಿದೆ. ಜನರಿಗೆ 24 ಗಂಟೆಯಲ್ಲೇ ಈ ಸರ್ಕಾರದ ಬಂಡವಾಳ. ಕರ್ನಾಟಕ ಮುಂದೆ ಪಾಕಿಸ್ತಾನ, ಶ್ರೀಲಂಕಾ ಆಗುವುದರಲ್ಲಿ ಸಂಶಯವಿಲ್ಲ. ಲೋಕಸಭೆ ಚುನಾವಣೆ ಕಳೆದ ನಂತರ ಎಲ್ಲಾ ಗ್ಯಾರಂಟಿ ಹೋಗುತ್ತದೆ” ಎಂದು ವ್ಯಂಗ್ಯವಾಡಿದರು.
“ಇಂದು ಉಚಿತ ಪ್ರಯಾಣ ಪಡೆಯುತ್ತಿದ್ದೀರಾ, ಮುಂದೆ ದುಪ್ಪಟ್ಟು ಹಣ ಕೊಟ್ಟು ಓಡಾಡುವಂತ ಪರಿಸ್ಥಿತಿ ಎದುರಾಗುತ್ತದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಈ ರಾಜ್ಯದ ಕೊನೆ ಮುಖ್ಯಮಂತ್ರಿ. ತಮ್ಮ ಸ್ಥಾನವನ್ನು ಸಿದ್ದರಾಮಯ್ಯ ಬಿಟ್ಟುಕೊಡುವುದಿಲ್ಲ. ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ಸಿಎಂ ಆಗುವುದಿಲ್ಲ. ಕಾಂಗ್ರೆಸ್ ಶಾಸಕರು ಜನರಿಗೆ ಮುಖ ತೋರಿಸಲು ಆಗದೆ ಇರುವಂತೆ ಪರಿಸ್ಥಿತಿ ಎದುರಾಗಿದೆ. ನಾವು ಸದನ ನಡೆಯಲು ಬಿಡುವುದಿಲ್ಲ. ಎಲ್ಲಾ ಗ್ಯಾರಂಟಿಗಳು ಶೀಘ್ರವೇ ಜಾರಿ ಮಾಡಬೇಕು. ಇಲ್ಲ ಕುರ್ಚಿ ಖಾಲಿ ಮಾಡಿ ಹೋಗಬೇಕು” ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
