ಬೆಂಗಳೂರು:ಕಾಂಗ್ರೆಸ್ ವಿರುದ್ಧ ಗುಡುಗಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ನಿನ್ನೆ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದು, ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಿದ್ದರು. ಆದರೆ, ಇಂದು ಅವರದ್ದೇ ಪಕ್ಷದವರಾದ ಹಾಗೂ ಕರ್ನಾಟಕ ವಕ್ಫ್ ಖಾತೆ ಸಚಿವರಾದ ಜಮೀರ್ ಅಹ್ಮದ್, ಅರಣ್ಯ ಭೂಮಿಯನ್ನು ವಕ್ಫ್​ಗೆ ವರ್ಗಾಯಿಸಿಕೊಂಡು ಅಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳುತ್ತಾರೆ.
ಇದನ್ನೂ ಓದಿ:737 ಮ್ಯಾಕ್ಸ್‌ ವಿಮಾನ ಮಾರಾಟ ಕುಸಿತ: ಬೋಯಿಂಗ್‌ ಕಂಪನಿ ಷೇರುಗಳ ಬೆಲೆ ಪಾತಾಳಕ್ಕೆ
“ಇಷ್ಟಕ್ಕೆ ನಿಲ್ಲಿಸದೆ, ನಮ್ಮ ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಮಗ ಸಾಗರ್ ಖಂಡ್ರೆ ಚುನಾವಣೆಯಲ್ಲಿ ಗೆದ್ದಿರುವುದು ನಮ್ಮ ಮುಸಲ್ಮಾನರ ಮತದಿಂದಲೇ ಆಗಿರುವುದರಿಂದ ಅವರು ಮಾಡಲೇ ಕೊಡಬೇಕು ಅಂತ ಹೇಳಿದ್ದಾರೆ. ಅಸಲಿಗೆ, ಸಂವಿಧಾನ ಅಪಾಯದಲ್ಲಿರುವುದು ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದಾಡುವ ನೀತಿಯಂದಲೇ ಹೊರತು ಬೇರೆಯವರಿಂದಲ್ಲ” ಎಂದು ಸಚಿವರ ವಿರುದ್ಧ ಗುಡುಗಿದರು.
ನಿನ್ನೆ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದು, ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಿದ್ದರು…ಆದರೆ, ಇಂದು ಅವರದ್ದೇ ಪಕ್ಷದವರಾದ ಹಾಗೂ ಕರ್ನಾಟಕ ವಕ್ಫ್ ಖಾತೆ ಸಚಿವರಾದ ಜಮೀರ್ ಅಹ್ಮದ್ ಅವರು ಅರಣ್ಯ ಭೂಮಿಯನ್ನು ವಕ್ಫ್ ಗೆ ವರ್ಗಾಯಿಸಿಕೊಂಡು ಅಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದು…pic.twitter.com/bVLSohMdte
— Basanagouda R Patil (Yatnal) (@BasanagoudaBJP)June 25, 2024

“ವಕ್ಫ್ ಸಚಿವರು ಸಾರ್ವಜನಿಕವಾಗಿ ಅರಣ್ಯ ಭೂಮಿಯನ್ನು ವಕ್ಫ್​ಗೆ ಬಳಸುತ್ತೇವೆ ಹಾಗೂ ಅದನ್ನು ಅಧಿಕೃತವಾಗಿ ವರ್ಗಾಯಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅರಣ್ಯ ಸಂಪತ್ತನ್ನು ಲೂಟಿ ಹೊಡೆಯಲು ಹೊರಟಿರುವ ವಕ್ಫ್ ಮಂಡಳಿಗೆ ಹಾಗೂ ವಕ್ಫ್ ಸಚಿವರಿಗೆ ಧಿಕ್ಕಾರವಿರಲಿ. ಇವರ ನಕಲಿ ಜಾತ್ಯಾತೀತೆಯನ್ನು ಜನರು ನೋಡಿದ್ದರೆ, ಅರ್ಥೈಸಿಕೊಂಡಿದ್ದಾರೆ. ಸಂವಿಧಾನ ವಿರೋಧಿ ಕಾಂಗ್ರೆಸ್ ಕೂಡಲೇ ಜಮೀರ್ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಈಗಾಗಲೇ, ವಕ್ಫ್​ಗೆ ಕೊಟ್ಟಿರುವ ಆಸ್ತಿ ಅನುತ್ಪಾದಕವಾಗಿದೆ. ಅರಣ್ಯ ಭೂಮಿಯ ಒಂದು ಇಂಚು ಭೂಮಿಯನ್ನು ವಕ್ಫ್​ಗೆ ನೀಡಬಾರದು” ಎಂದು ಆಗ್ರಹಿಸಿದ್ದಾರೆ.
ಎದೆಯಲ್ಲಿ ಕುದಿಯುತ್ತಿದ್ದ ಸೇಡು ಜ್ವಾಲೆಯಂತೆ ಸ್ಫೋಟ; ಈ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದರು ಅಭಿಮಾನಿಗಳು

ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eight =
Remember me
