ಬೆಂಗಳೂರು:ವಿಪಕ್ಷ ನಾಯಕರ ಆಯ್ಕೆ ಕುರಿತಂತೆ ನಡೆಯುತ್ತಿರುವ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗದೆ ಹೊರಹೋಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುಳಿವನ್ನು ನೀಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ಶಾಸಕಾಂಗ ಸಭೆಗೆ ಹಾಜರಾಗದೆ ಹೊರಹೋಗಿದ್ದರಿಂದ ಬಿಜೆಪಿಯಲ್ಲಿನ ಭಿನ್ನಮತ ಬಯಲಾಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ ಇದೀಗ ಯತ್ನಾಳ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಇದು ಭಾರತೀಯರು ಈ ವರ್ಷ ಅತಿಹೆಚ್ಚು ಬಳಸಿದ ಪಾಸ್​​ವರ್ಡ್​; ಇವೆಲ್ಲ ದುರ್ಬಲ ಪಾಸ್​ವರ್ಡ್​ಗಳು!
ಯತ್ನಾಳ್ ತಮ್ಮ ಎಕ್ಸ್​ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿರುವ ಸಾಲು ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳಲಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ. ‘ನ ದೈನ್ಯಂ, ನ ಪಲಾಯನಂ’ ಎಂದು ಕನ್ನಡದಲ್ಲಿ ಬರೆದಿರುವ ಅವರು ಇಂಗ್ಲಿಷ್​ನಲ್ಲಿ ಇನ್ನೊಂದಷ್ಟು ಸಂಗತಿ ಹೇಳಿಕೊಂಡಿದ್ದಾರೆ.
ದೀನನಾಗಿಯೂ ಇರುವುದಿಲ್ಲ, ಪಲಾಯನವನ್ನೂ ಮಾಡುವುದಿಲ್ಲ ಎಂದಿರುವ ಯತ್ನಾಳ್, ತಮ್ಮ ಹೋರಾಟ ಪ್ರಬಲವಾಗಿ ಮುಂದುವರಿಯಲಿದೆ ಎಂಬುದನ್ನು ತಿಳಿಸಿದ್ದಾರೆ. ಒಬ್ಬ ಹೋರಾಟಗಾರ ಯಾವುದನ್ನೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಆತನ ಜೀವನವು ಅಂತ್ಯವಿಲ್ಲದ ಸವಾಲು ಮತ್ತು ಸವಾಲುಗಳಲ್ಲಿ ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದು ಎಂದಿರಲು ಸಾಧ್ಯವಿಲ್ಲ. ಸವಾಲುಗಳು ಸವಾಲುಗಳಷ್ಟೇ ಎಂಬುದನ್ನೂ ಯತ್ನಾಳ್ ಹೇಳಿಕೊಂಡಿದ್ದಾರೆ.
ನ ದೈನ್ಯಂ, ನ ಪಲಾಯನಂ 🙏
A warrior cannot complain or regret anything. His life is an endless challenge, and challenges cannot possibly be good or bad. Challenges are simply challenges.
— Basanagouda R Patil (Yatnal) (@BasanagoudaBJP)November 17, 2023

ವಿಪಕ್ಷ ನಾಯಕರ ಆಯ್ಕೆ: ರಾಜ್ಯದ ಮತ್ತೊಂದು ಪ್ರಬಲ ಸಮುದಾಯಕ್ಕೆ ಮಹತ್ವ ಕೊಟ್ಟ ಬಿಜೆಪಿ

ವಿಶ್ವಕಪ್ ಕ್ರಿಕೆಟ್ ಫೈನಲ್​ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 4 =
Remember me
