ಬೆಂಗಳೂರು:ಎತ್ತಿನಹೊಳೆ ಯೋಜನೆಗೆ ಹತ್ತು ವರ್ಷ ಕಳೆದರೂ ಹನಿ ನೀರೂ ಹರಿಯುವ ನಿರೀಕ್ಷೆ ಇಲ್ಲ. ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
“ವಿಜಯವಾಣಿ’ ವಿಶೇಷ ವರದಿಗೆ ಧ್ವನಿಗೂಡಿಸಿರುವ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಎತ್ತಿನಹೊಳೆ ಇನ್ನೂ ತೆವಳುತ್ತಲೇ ಇದೆ. ಮಾರ್ಚ್ 3, 2014ರಂದು ಚಿಕ್ಕಬಳ್ಳಾಪುರದಲ್ಲಿ ಅಂದಿನ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಡಿಗಲ್ಲು ಭಾಗ್ಯ ಕಂಡ ಈ ಯೋಜನೆ ಇವತ್ತು ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂದು ಟಅಂಗ್ ಕೊಟ್ಟಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಲ ಸಂಪನ್ಮೂಲಕ್ಕಿಂತ ಬೆಂಗಳೂರು ನಗರಾಭಿವೃದ್ಧಿ ಮೇಲೆಯೇ ಆಸಕ್ತಿ ಜಾಸ್ತಿ. ಒಮ್ಮೆಯಷ್ಟೇ ಎತ್ತಿನಹೊಳೆಗೆ ಕಾಟಾಚಾರದ ಭೇಟಿ ನೀಡಿದ್ದ ಅವರು, ಹೂತಿಟ್ಟ ನಿಧಿಯಂತಿರುವ ರಾಜಧಾನಿಯನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಅತ್ಯುತ್ಸಾಹ ತೋರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಳಪೆ ಕಾಮಗಾರಿ, ಅಧಿಕಾರಿ-ಮಂತ್ರಿಗಳ ನಿರ್ಲಕ್ಷ್ಯದಿಂದ ಇಡೀ ಯೋಜನೆ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ. ಪೈಪುಗಳು ತುಕ್ಕು ಹಿಡಿಯುತ್ತಿದ್ದರೆ, ತಡೆಗೋಡೆಗಳು ಕುಸಿದು ಬೀಳುತ್ತಿವೆ. 10 ವರ್ಷ ಕಳೆದರೂ ಹನಿ ನೀರೂ ಹರಿಯುವ ನಿರೀಕ್ಷೆ ಇಲ್ಲ. ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ ಎಂದು ಸರ್ಕಾರಕ್ಕೆ ತಿವಿದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
