|ಅವಿನಾಶ ಮೂಡಂಬಿಕಾನಬೆಂಗಳೂರು
ಅಂತರ್ಜಾಲದ ಅವಲಂಬನೆ ಹೆಚ್ಚುತ್ತಿದ್ದಂತೆ ‘ಸೈಬರ್ ಕ್ರೖೆಂ’ ವಂಚನೆಗೊಳಗಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯವೊಂದರಲ್ಲೇ ವಾರ್ಷಿಕ 150 ಕೋಟಿ ರೂ. ಸೈಬರ್ ಅಪರಾಧಿಗಳ ಪಾಲಾಗುತ್ತಿದೆ! 2019ರಿಂದ 2022ರ ಜನವರಿವರೆಗೆ 434.71 ಕೋಟಿ ರೂ. ಲಪಟಾಯಿಸಿದ್ದು, ಕನ್ನ ಹಾಕಿದ ತತ್​ಕ್ಷಣದಲ್ಲೇ ಪೊಲೀಸರಿಗೆ ದೂರು ಕೊಟ್ಟರೂ ಬರೀ 55 ಕೋಟಿ ರೂ. ಜಪ್ತಿಯಾಗಿದೆ! 2021ರಲ್ಲಿ 157.94 ಕೋಟಿ ರೂ. ಸೈಬರ್ ಕಳ್ಳರ ಖಜಾನೆ ಸೇರಿದೆ.
ಉತ್ತರ ಭಾರತದಲ್ಲೋ ಅಥವಾ ವಿದೇಶದಲ್ಲೋ ಕುಳಿತುಕೊಂಡೇ ಕ್ಷಣಮಾತ್ರದಲ್ಲಿ ಕೋಟಿಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ಕರ್ನಾಟಕ ಸೈಬರ್ ಕಳ್ಳರಿಗೆ ಫೇವರೇಟ್ ಆಗಿದೆ. 2019 ರಿಂದ 2022 ಜನವರಿವರೆಗೆ 434,71,30,847 ರೂ. ಸೈಬರ್ ಕಳ್ಳರ ಪಾಲಾಗಿದೆ. ಈ ಪೈಕಿ ಕೇವಲ 55,70,93,022 ರೂ. ಪೊಲೀಸರು ವಸೂಲು ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಸೈಬರ್ ಪೊಲೀಸ್ ಠಾಣೆಗಳ ಮೆಟ್ಟಿಲೇರಿದ್ದ 29,816 ಪ್ರಕರಣಗಳ ಪೈಕಿ 6,673 ಕೇಸ್ ಇತ್ಯರ್ಥವಾಗಿದ್ದು, 5,216 ಪ್ರಕರಣಗಳಲ್ಲಿ ಸೈಬರ್ ಅಪರಾಧ ನಡೆದಿರುವುದು ಸಾಬೀತಾಗಿದೆ. ಉಳಿದಂತೆ ಶೇ.60 ಕೇಸ್​ಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖಾ ಹಂತದಲ್ಲೇ ಇವೆ. ಬಹುಮಾನ ಬಂದಿದೆ, ಸಾಲ ನೀಡುತ್ತೇವೆ, ಕೌನ್ ಬನೇಗಾ ಕರೋಡ್​ಪತಿ , ಭಾರಿ ಮೊತ್ತದ ಲಾಟರಿ ಬಂದಿದೆ ಮತ್ತಿತರ ಆಮಿಷಗಳನ್ನು ಒಡ್ಡಿ ವಂಚನೆ ಎಸಗಲಾಗುತ್ತಿದೆ.
ಸೌಲಭ್ಯವಿದ್ದರೂ ಕಡಿವಾಣ ಬಿದ್ದಿಲ್ಲ:ಸೈಬರ್ ಅಪರಾಧದ ನಿಯಂತ್ರಣ ಹಾಗೂ ಆರೋಪಿಗಳ ಪತ್ತೆಗಾಗಿ ರಾಜ್ಯಾದ್ಯಂತ ಒಟ್ಟು 46 ಸಿಇಎನ್ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಅಲ್ಲದೆ, ಸಿಐಡಿ ಕಚೇರಿಯಲ್ಲಿ ಸೆಂಟರ್ ಫಾರ್ ಸೈಬರ್ ಕ್ರೖೆಂ ಇನ್​ವೆಸ್ಟಿಗೇಶನ್ ಹಾಗೂ ಡಿಜಿಟಲ್ ಫೋರೆನ್ಸಿಕ್ ಟ್ರೖೆನಿಂಗ್ ಮತ್ತು ರಿಸರ್ಚ್ ಘಟಕವನ್ನೂ ತೆರೆಯಲಾಗಿದೆ. ಡಾಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ಸೈಬರ್ ಕ್ರೖೆಂ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮೊಬೈಲ್ ನಂಬರ್​ಗಳ ಸಿಡಿಆರ್, ಎಸ್​ಡಿಆರ್, ಸಿಎಎಫ್ ಮಾಹಿತಿಗಳ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನವಿದ್ದರೂ ಸೈಬರ್ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ.
ಕೇಸ್ ಇಳಿದರೂ ಹೋದ ಹಣ ಜಾಸ್ತಿ:2021ರಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ 7,462ಕ್ಕೆ ಇಳಿಕೆಯಾಗಿದ್ದರೂ, ಅತೀ ಹೆಚ್ಚಿನ ಮೊತ್ತ 157.94 ಕೋಟಿ ರೂ. ಸೈಬರ್ ಕಳ್ಳರು ಲಪಟಾಯಿಸಿದ್ದಾರೆ. ಜನವರಿಯಲ್ಲೇ 15.11 ಕೋಟಿ ರೂ. ಸೈಬರ್ ವಂಚಕರ ಬ್ಯಾಂಕ್ ಖಾತೆ ಸೇರಿದ್ದು, 735 ಮಂದಿ ವಂಚನೆಗೊಳಗಾಗಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ತನಿಖೆಗೆ ಸಹಕಾರ ನೀಡುತ್ತಿದ್ದು, ಸೈಬರ್ ಕ್ರೖೆಂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಅಂತರ್ಜಾಲದ ಬಳಸುವಾಗ ಸೈಬರ್ ವಂಚನೆ ಕುರಿತು ಎಚ್ಚರಿಕೆ ವಹಿಸಬೇಕು.
| ಕಮಲ್ ಪಂತ್ ನಗರ ಪೊಲೀಸ್ ಆಯುಕ್ತರು
ಸೈಬರ್ ವಂಚನೆಯಾದ 1 ಗಂಟೆಯನ್ನು ಗೋಲ್ಡನ್ ಹವರ್ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ ಸೈಬರ್ ವಂಚನೆಗೊಳಗಾದವರು ಮಾಹಿತಿ ಕೊಟ್ಟರೆ, ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲು ಅವಕಾಶಗಳಿವೆ. ಈ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆಯಾಗದಂತೆ ತಡೆಗಟ್ಟಲು ಅವಕಾಶವಿದ್ದರೂ 3 ವರ್ಷದಲ್ಲಿ ಜಪ್ತಿಯಾದ ಹಣ ಮಾತ್ರ 55 ಕೋಟಿ ರೂ ಮಾತ್ರ. ಸೈಬರ್ ಕ್ರೖೆಂ ಪೊಲೀಸರು, ವರ್ಗಾವಣೆಯಾಗಿರುವ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡು, ಹಣ ಜಪ್ತಿ ಮಾಡುತ್ತಿದ್ದರು. ಬಳಿಕ ಕೋರ್ಟ್ ಅನುಮತಿ ಮೇರೆಗೆ ಹಣ ಕಳೆದುಕೊಂಡವರಿಗೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಆದರೀಗ ಆರೋಪಿಗಳು ಕದ್ದ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಹಣ ಡ್ರಾ ಮಾಡಿಕೊಂಡು ಯಾಮಾರಿಸ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
