ಬೆಂಗಳೂರು:ನಿನ್ನೆ (ಏ.10) ರಾತ್ರಿ ಬಿಜೆಪಿ ತನ್ನ ಮೊಟ್ಟ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಬಹುಕಾಲದ ನಿರೀಕ್ಷೆಗೆ ತೆರೆಬಿದ್ದಿದೆ. ಪಟ್ಟಿ ಬಿಡುಗಡೆ ಆಗಿದ್ದೇ ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಈ ಬಿಎಸ್​ ಯಡಿಯೂರಪ್ಪ ಸೈಡ್​ಲೈನ್​ ಆಗಿದ್ದಾರೆ ಎನ್ನುತ್ತಿದ್ದವರಿಗೆ ಸ್ಪಷ್ಟ ತಿರುಗೇಟು ಸಿಕ್ಕಿದೆ ಎಂದೇ ಹೇಳಬಹುದು.
ಈ ಬಾರಿಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದು ಬಹುತೇಕ ಎಲ್ಲಾ ಯಡಿಯೂರಪ್ಪ ಬೆಂಬಲಿಗರಿಗೆ ಹೈಕಮಾಂಡ್ ‌ಮಣೆ ಹಾಕಿದೆ ಎಂದೇ ಹೇಳಬಹುದು. ರೇಣುಕಾಚಾರ್ಯ, ನಾಯಾರಾಣ ಗೌಡ, ಹಾಲಪ್ಪ ಆಚಾರ್, ವಿಜಯೇಂದ್ರ, ಮಂಗೋಟೆ ರುದ್ರೇಶ್, ಮುಂತಾದವರಿಗೆ  ಈ ಬಾರಿ ಟಿಕೆಟ್​ ಸಿಕ್ಕಿದೆ. ಈ ನಡುವೆ ಈಶ್ವರಪ್ಪ ಕೂಡ ಚುನಾವಣೆಯಿಂದ ನಿವೃತ್ತಿ ಪಡೆದಿದ್ದು ಜಗದೀಶ್ ಶೆಟ್ಟರ್​ಗೂ ಟಿಕೆಟ್ ಭರವಸೆ ಸಿಕ್ಕಿಲ್ಲ. ಹಾಲಿ ಶಾಸಕರ ಜೊತೆಯಲ್ಲಿ ಹೊಸಬರಿಗೂ ಹೈಕಮಾಂಡ್​ ಟಿಕೆಟ್ ನೀಡಿದ್ದು ಈ ಬಾರಿ ಯಡಿಯೂರಪ್ಪ ದೊಡ್ಡ ಮಟ್ಟದಲ್ಲಿ ಬೆಂಬಲಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಅನೇಕರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದು ಯಡಿಯೂರಪ್ಪ ಮಾತಿಗೆ ಹೈಕಮಾಂಡ್ ಮನ್ನಣೆ ನೀಡಿದೆ ಎಂದೇ ಹೇಳಬಹುದು. ಈ ಮೂಲಕ ಯಡಿಯೂರಪ್ಪ ಸೈಡ್ ಲೈನ್ ಅಂದವರಿಗೆ ತಿರುಗೇಟು ಸಿಕ್ಕಿದೆ. ಅದಲ್ಲದೇ ಈ ಬಾರಿ ಯಡಿಯೂರಪ್ಪ ವಿರುದ್ಧ ನಿಲ್ಲುತ್ತಿದ್ದವರು ಸೈಡ್ ಲೈನ್ ಆಗಿದ್ದು ಇದು ರಾಜಕೀಯ ಗೆಲುವು ಎಂದೇ ಹೇಳಬಹುದು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
