ಶ್ರೀಕಾಂತ್ ಶೇಷಾದ್ರಿ
ಯೋಜನಾ ಹಂತ ಏನಿದೆ?
1. ಹಂತ-1 ರಲ್ಲಿ 5 ಪ್ಯಾಕೇಜ್ ಮೂಲಕ ಟೆಂಡರ್ ಕೈಗೊಳ್ಳಲಾಗಿದ್ದು, 8 ವಿಯರ್​ಗಳಲ್ಲಿ 5 ವಿಯರ್ ಕಾಮಗಾರಿ (ತಡೆಗೋಡೆ) ಮುಗಿಸಿದೆ. 9 ಪಂಪ್ ಹೌಸ್​ಗಳ ಪೈಕಿ 6 ಮುಗಿಯುವ ಹಂತದಲ್ಲಿದೆ.2. 129.8 ಕಿ.ಮೀ. ಉದ್ದದ ರೈಸಿಂಗ್ ಮೇನ್ ಅಳವಡಿಸಲು ಎಲ್ಲ ಕೊಳವೆಗಳು ಸಿದ್ಧವಾಗಿದೆ. 106.88 ಕಿ.ಮೀ. ಕೊಳವೆ ಅಳವಡಿಸಲಾಗಿದೆ. 4 ವಿತರಣಾ ತೊಟ್ಟಿಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.3. ಮೊದಲ ಹಂತದ ಕಾಮಗಾರಿಗಳಿಗೆ ಅವಶ್ಯವಿರುವ 219.44 ಮೆಗಾ ವಾಟ್ ವಿದುತ್ ಪೂರೈಸುವ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ಮತ್ತು ಟ್ರಾನ್ಸ್ ಮಿಷನ್ ಮಾರ್ಗ ನಿರ್ಮಾಣ ಹಂತದಲ್ಲಿದೆ.4. ಎರಡನೇ ಹಂತದ 260 ಕಿ.ಮೀ. ಗುರುತ್ವಾಕರ್ಷಣೆ ಕಾಲುವೆಯ ಕಾಮಗಾರಿ ಪೈಕಿ 62.17 ಕಿ.ಮೀ. ಪೂರ್ಣಗೊಂಡಿದೆ.5. ಗುರುತ್ವಾಕರ್ಷಣೆ ಕಾಲುವೆ ಕೊನೆಯ ಭಾಗದಲ್ಲಿ ಬರುವ ಕೊರಟಗೆರೆ ತಾಲೂಕು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಲು ಕ್ರಮಕೈಗೊಳ್ಳಲಾಗಿದೆ.6. ರಾಮನಗರ, ಪಾವಗಡ, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬರುವ 188 ಕೆರೆಗಳಿಗೆ ನೀರು ಒದಗಿಸುವ ಕಾಮಗಾರಿ ಪ್ರಾರಂಭಿಸಲಾಗಿದೆ.7. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸುವ ಕುಂದಾಣ ಏತ ಕಾಮಗಾರಿ ಮತ್ತು ಫೀಡರ್ ಕಾಲುವೆ ಅಂದಾಜು ತಯಾರಿಸಲಾಗುತ್ತಿದೆ.
ಬೆಂಗಳೂರು: ಎತ್ತಿನಹೊಳೆ ಯೋಜನೆ ಅನುಷ್ಠಾನ ಆಮೆವೇಗಕ್ಕಿಂತಲೂ ನಿಧಾನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ವಿವಾದ ಸೃಷ್ಟಿಸಿದ್ದ ಈ ಯೋಜನೆ ಜಾರಿಯಿಂದ ಬರಪೀಡಿತ 29 ತಾಲೂಕುಗಳ ನೀರಿನ ದಾಹ ನೀಗಿಸುವ ಆಶಯ ಸರ್ಕಾರದ್ದು. ಆದರೆ, ಕಾರ್ಯಾನುಷ್ಠಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.
ಸರ್ಕಾರದ ಹಿರಿಯ ಅಧಿಕಾರಿಗಳೇ ಹೇಳುವಂತೆ 2021ರ ಜೂನ್ ವೇಳೆಗೆ ಮೊದಲ ಹಂತದ ಭಾಗಶಃಯೋಜನೆ ಸಿದ್ಧವಾಗಬೇಕು. ಮಳೆಗಾಲದಲ್ಲಿ ಸಿಗುವ ನೀರನ್ನು ಪಂಪ್ ಮಾಡಿ ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಂಡು ಕನಿಷ್ಠ ಯೋಜನೆ ಕಾರ್ಯಾರಂಭಕ್ಕೆ ಚಾಲನೆ ಕೊಡಬೇಕೆಂಬ ಉದ್ದೇಶ ಹೊಂದಿದ್ದಾರೆ.
ಇದನ್ನೂ ಓದಿ:ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ದೂರು; ಸುಪ್ರೀಂಕೋರ್ಟ್ ಮುಂದಿರುವ ಆಯ್ಕೆಗಳೇನು?
ಈ ನಡುವೆ ಹಣಕಾಸಿನ ಮುಗ್ಗಟ್ಟು ಮತ್ತು ಭೂ ಸ್ವಾಧೀನ ಸಮಸ್ಯೆಯಿಂದ ಯೋಜನೆ ಮಂದಗತಿಯಲ್ಲಿ ಸಾಗುವ ಜತೆಗೆ ಯೋಜನಾ ವೆಚ್ಚವೂ ಹೆಚ್ಚಾಗುವಂತಾಗಿದೆ. ಈಗಿನ ಅಂದಾಜಿನ ಪ್ರಕಾರವೇ ಸೂಕ್ತ ಹಣಕಾಸು ನೆರವು ಸಿಕ್ಕರೂ 18,397.04 ಕೋಟಿ ರೂ. ಬೇಕಾಗಬಹುದೆಂದು ಅಧಿಕಾರಿಗಳು ಅಂದಾಜಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ ಯೋಜನೆಯನ್ನು 2023-24ಕ್ಕೆ ಮುಗಿಸಲು ನಿರ್ಧರಿಸಲಾಗಿದೆ. ಇದು ಇನ್ನಷ್ಟು ವಿಸ್ತರಣೆಯಾದರೆ ಮತ್ತೆ ಮೊತ್ತ ಪರಿಷ್ಕೃತಗೊಳ್ಳಲಿದೆ. 20 ಸಾವಿರ ಕೋಟಿ ರೂ. ಗಳನ್ನೂ ದಾಟಬಹುದು.

ಇದನ್ನೂ ಓದಿ:‘ಹಿಂದು ಹೆಸ್ರಲ್ಲಿ ಫೇಸ್​ಬುಕ್​ ಅಕೌಂಟ್ ಕ್ರಿಯೇಟ್ ಮಾಡಿ, ಮದುವೆ ಆಗುವ ವಿಶ್ವಾಸ ವಂಚಕ ಮುಸ್ಲಿಂ ಹುಡುಗರ ವಿರುದ್ಧ ಕಠಿಣ ಕ್ರಮ ತಗೊಳ್ತೇವೆ’
ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 12912.36 ಕೋಟಿ ಮೊತ್ತದ ಪರಿಷ್ಕೃತ ವಿವರ ಯೋಜನಾ ವರದಿಗೆ 2014ರ ಡಿಸೆಂಬರ್ 17ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2014ರಲ್ಲೇ ಯೋಜನೆ ಕೆಲಸ ಪ್ರಾರಂಭವಾಗಿದೆ.
ಇದನ್ನೂ ಓದಿ:17ರಂದು ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ : ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಪರೀಕ್ಷೆ
ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹಂತದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 4,477.15 ವೆಚ್ಚ ಮಾಡಲಾಗಿದ್ದು 2019ರಲ್ಲಿ ಈ ವರೆಗಿನ ಗರಿಷ್ಠ ಹಣ ವೆಚ್ಚ ಮಾಡಲಾಗಿದೆ. ಒಟ್ಟಾರೆ ಆರಂಭದಿಂದ ಇಲ್ಲಿಯವರೆಗೆ 6,585 ಕೋಟಿ ರೂ. ವೆಚ್ಚಮಾಡಲಾಗಿದೆ. ಈ ಲೆಕ್ಕ ಪರಿಗಣಿಸಿದರೆ ಯೋಜನೆ ಪೂರ್ಣಗೊಳಿಸಲು ಇನ್ನೂ ಮೂರು ಅಥವಾ ನಾಲ್ಕು ಪಟ್ಟು ಹಣವನ್ನು ಮುಂದಿನ ಮೂರು ವರ್ಷದಲ್ಲಿ ಖರ್ಚುಮಾಡಬೇಕಾಗುತ್ತದೆ. ಸಾಲ ಮಾಡಿ ಬೇಕಾದ ಹಣ ತಂದರೂ ಕರೊನಾ ಕಾಲದಲ್ಲಿ ಈ ಸಾಲ ತೀರಿಸುವ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಯೋಚನೆ ಮಾಡುವ ಸಂದರ್ಭವಿದು.
ಇದನ್ನೂ ಓದಿ:ವೃಷಭಾವತಿ ನದಿ ಪುನಶ್ಚೇತನ ಸರ್ಕಾರದ ಹೊಣೆ|ನೀರಿ ಸಂಸ್ಥೆ ನೇಮಕಕ್ಕೆ ಹೈಕೋರ್ಟ್ ಇಂಗಿತ
ನೀರಿಗಾಗಿ ಕಾದಿರುವ 29 ತಾಲೂಕುಗಳುಆಲೂರು, ಬೇಲೂರು, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಗುಡಿಬಂಡೆ, ಚಿಂತಾಮಣಿ, ಮಾಲೂರು, ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು.
“ಖುರಾನ್​ ಮಾತ್ರ ಸರ್ಕಾರಿ ವೆಚ್ಚದಲ್ಲಿ ಕಲಿಸಲಾಗದು, ಮದರಸಾ ಮತ್ತು ಸಂಸ್ಕೃತ ಸ್ಕೂಲ್​ಗಳನ್ನೂ ಮುಚ್ತೇವೆ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
