ಬೆಂಗಳೂರು:ಮ್ಯಾಗಿ, ನೂಡಲ್ಸ್​ ಅಂದ್ರೆ ಮಕ್ಕಳಿಗೆ ಮಾತ್ರವಲ್ಲ, ಬಹುತೇಕ ಎಲ್ಲ ವಯೋಮಾನದವರಿಗೂ ಇಷ್ಟ. ಎರಡೇ ನಿಮಿಷದಲ್ಲಿ ತಿಂದು ಮುಗಿಸುವ ತವಕ. ಅಷ್ಟೊಂದು ಇಷ್ಟಪಟ್ಟು ತಿನ್ನುವ ನೂಡಲ್ಸ್​ನಲ್ಲಿ ಸಿಗಬಾರದ್ದು ಸಿಕ್ಕಿ ಬಿಟ್ಟರೆ?
ಅಷ್ಟಕ್ಕೂ ಈಗ ಏನು ಸಿಕ್ತು ಅಂತೀರಾ? ನೂಡಲ್ಸ್​ ಮಸಾಲ ಪ್ಯಾಕೇಟ್​ನಲ್ಲಿ ಬಳಸಿದ ಬ್ಯಾಂಡೇಜ್​ ಪತ್ತೆಯಾಗಿದೆ! ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಮಾನಸ ಎಂಬುವವರು ಮನೆ ಸಮೀಪದ ಅಂಗಡಿಯೊಂದರಲ್ಲಿ ನೂಡಲ್ಸ್ ಪ್ಯಾಕೇಟ್​ ಖರೀದಿಸಿದ್ದರು. ನೂಡಲ್ಸ್​ ಬೇಯಿಸಲು ಮನೆಯಲ್ಲಿ ಪ್ಯಾಕೇಟ್​ ಓಪನ್​ ಮಾಡಿದ್ದಾರೆ. ಆಗ ಮಸಾಲ ಪ್ಯಾಕೇಟ್​​ನಲ್ಲಿ ಮಸಲಾ ಪುಡಿ ಜತೆಗೆ ಬಳಸಿದ ಬ್ಯಾಂಡೇಜ್​ ಇರುವುದನ್ನ ನೋಡಿ ಶಾಕ್​ ಆಗಿದ್ದಾರೆ. ಬ್ಯಾಂಡೇಜ್​ ಇರುವ ಫೋಟೋವನ್ನು ‘ವಿಜಯವಾಣಿ‘ ಪತ್ರಿಕೆಗೆ ಮಾನಸ ಅವರ ಸಹೋದರಿ ಮಂದಾರ ಕಳುಹಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿ ನೂಡಲ್ಸ್​ನ ಪ್ಯಾಕೆಟ್​ ಒಳಗೆ ಮಸಲಾ ಪುಡಿಯ ಚಿಕ್ಕದೊಂದು ಪ್ಯಾಕೇಟ್​ ಇರುತ್ತೆ. ಅದರಲ್ಲಿ ಬ್ಯಾಂಡೇಜ್​ ಸಿಕ್ಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ನೂಡಲ್ಸ್ ತಯಾರಿಕಾ ಕಂಪನಿಯಲ್ಲೇ ದುರುದ್ದೇಶದಿಂದಲೇ ಯಾರಾದರೂ ಹಾಕಿರಬಹುದೇ? ಅಥವಾ ಸಿಬ್ಬಂದಿ ಬೇಜವಾಬ್ದಾರಿಯಿಂದ ಬಳಸಿದ್ದ ಬ್ಯಾಂಡೇಜ್​ ಅನ್ನು ಮಸಾಲ ಪುಡಿ ತಯಾರಿಕಾ ಘಟಕದಲ್ಲಿ ಬೀಳಿಸಿದ್ದು, ಆಕಸ್ಮಿಕವಾಗಿ ಇದು ಪ್ಯಾಕಿಂಗ್​ ಆಯಿತೇ? ಇದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
ಭಾರತೀಯರು ಸೇರಿ ಒಟ್ಟು 72 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನೇಪಾಳದಲ್ಲಿ ಪತನ: 36ಕ್ಕೇರಿದ ಸಾವಿನ ಸಂಖ್ಯೆ

ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು

ಊಟದ ವಿಚಾರಕ್ಕೆ ಜಗಳ: ರಾಮನಗರದಲ್ಲಿ ತಾಯಿ-ಮಗ ದುರಂತ ಅಂತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + one =
Remember me
