
ಬೆಂಗಳೂರು:ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಆರ್‌ಆರ್‌ಎಂಸಿಎಚ್) ಯೋಗ ದಿನವನ್ನು ಆಚರಿಸಿತು.ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ್ ನೇತೃತ್ವದಲ್ಲಿ ಪ್ರಾಂಶುಪಾಲರಾದ ಡೀನ್ ಡಾ.ಸತ್ಯಮೂರ್ತಿ ಬಿ., ಡಾ.ಎಸ್.ನವೀನ್, ಉಪಪ್ರಾಂಶುಪಾಲ ಡಾ.ಬಸವರಾಜ ಭಂಡಾರೆ, ವೈದ್ಯಕೀಯ ಅಧೀಕ್ಷಕ ಡಾ.ಪ್ರವೀಣ್ ಕುಮಾರ್, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡರು.ಯೋಗ ಮತ್ತು ಪ್ರಾಯೋಗಿಕ ಮಹತ್ವ ಕುರಿತು ತಿಳಿವಳಿಕೆ ಅವಧಿಗಳನ್ನು ಒಳಗೊಂಡಿತ್ತು. ವಿವಿಧ ಆಸನಗಳ ಪ್ರಾತ್ಯಕ್ಷಿಕೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.ಮುಖ್ಯ ಅತಿಥಿಗಳಾದ ಆರ್ಟ್ ಆ್ ಲಿವಿಂಗ್ ಯೋಗ ತಜ್ಞ ಸಂದೀಪ್ ಶರ್ಮಾ ಅವರು, ದಿನ ನಿತ್ಯ ನಿಯಮಿತ ಯೋಗಾಭ್ಯಾಸದಿಂದ ಆಗುವ ಪ್ರಯೋಜನವನ್ನು ತಿಳಿಸಿಕೊಟ್ಟರು.2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ದಿನಂದಿ ಯೋಗಕ್ಕೆ ಮಹತ್ವತೆ ಬಂದಿದೆ ಎಂದರು. ಒಂದೂವರೆ ಗಂಟೆಗಳ ತನಕ ಯೋಗಾಭ್ಯಾಸ ನಡೆಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 19 =
Remember me
