ಹುಬ್ಬಳ್ಳಿ:ಯೋಗವು ಏಕತೆಯ ಪ್ರತೀಕವಾಗಿದೆ. ಯೋಗಾಭ್ಯಾಸ ಮಾಡುವವನು ನಿಜವಾದ ದೇಶಭಕ್ತ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದರು.
ವಿಆರ್​ಎಲ್​ ಲಾಜಿಸ್ಟಿಕ್, ವಿಜಯವಾಣಿ ಕನ್ನಡದ ನಂ. 1 ಪತ್ರಿಕೆ, ದಿಗ್ವಿಜಯ 24×7 ನ್ಯೂಸ್ ಚಾನೆಲ್, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಯೋಗಗುರು ಬಾಬಾ ರಾಮದೇವ ನೇತೃತ್ವದಲ್ಲಿ ಏರ್ಪಡಿಸಲಾಗಿರುವ ಯೋಗ ಶಿಬಿರದ ನಾಲ್ಕನೇ ದಿನದಲ್ಲಿ ಭಾಗವಹಿಸಿ ವೆಂಕಯ್ಯನಾಯ್ಡು ಅವರು ಮಾತನಾಡಿದರು.
ಸ್ಪಷ್ಟವಾಗಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ, ಯೋಗ ವ್ಯಾಯಾಮ ಅಷ್ಟೇ ಅಲ್ಲ. ಯೋಗ ಜಗತ್ತಿನ ಏಕತೆಗೆ ಸಹಕಾರಿ. ಯೋಗವನ್ನು ಜನರವರೆಗೂ ತಲುಪಿಸುವ ಜವಾಬ್ದಾರಿಯನ್ನು ಬಾಬಾ ರಾಮದೇವ ವಹಿಸಿಕೊಂಡಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಯೋಗ ಸಾಧನೆಯನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಕೊಂಡಾಡಿದರು.
ಸನಾತನ ಧರ್ಮವನ್ನು ಪಾಲಿಸುವುದು ಹಾಗೂ ಯೋಗ ಮಾಡುವುದು ಕೂಡ ದೇಶಭಕ್ತಿ. ಯೋಗ ಮಾಡುವವನೂ ನಿಜವಾದ ದೇಶಭಕ್ತ. ಯೋಗವನ್ನು ನಮ್ಮ ದೇಶ ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗವು ತುಂಬಾ ಉಪಯೋಗಕಾರಿಯಾಗಿದೆ ಎಂದು ಹೇಳಿದರು.
ಯೋಗವು ಸಂಸ್ಕಾರವನ್ನು ಕಲಿಸುತ್ತದೆ. ಯೋಗ ಕಡಿಮೆ ವೆಚ್ಚದ ಔಷಧಿಯಾಗಿದೆ. ಯೋಗಾಭ್ಯಸದಿಂದ ಆತ್ಮವಿಸ್ವಾಸ ಹೆಚ್ಚಾಗುತ್ತದೆ. ಯೋಗಾಭ್ಯಾಸದಿಂದ ಯುವಕರ ಸಮಸ್ಯೆ ಬಗೆಹರಿಯಲಿದೆ. ಯೋಗವು ಸಭ್ಯತೆಯ ಸೂಚಕವಾಗಿದೆ. ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿಕೊಟ್ಟ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ವಿಶ್ವದೆಲ್ಲೆಡೆ ಇದರ ಆಚರಣೆಗೆ ಪ್ರಧಾನಿ ಮೋದಿ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 20 =
Remember me
