ಹುಬ್ಬಳ್ಳಿ:ವಿಆರ್​ಎಲ್​ ಲಾಜಿಸ್ಟಿಕ್, ವಿಜಯವಾಣಿ ಕನ್ನಡದ ನಂ. 1 ಪತ್ರಿಕೆ, ದಿಗ್ವಿಜಯ 24×7 ನ್ಯೂಸ್ ಚಾನೆಲ್, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಯೋಗಗುರು ಬಾಬಾ ರಾಮದೇವ ನೇತೃತ್ವದಲ್ಲಿ ಏರ್ಪಡಿಸಲಾಗಿರುವ ಯೋಗ ಶಿಬಿರದ ನಾಲ್ಕನೇ ದಿನದಲ್ಲಿ ಪ್ರಮುಖ ಗಣ್ಯರು ಭಾಗವಹಿಸಿದರು.
ವಿ.ಪ.ಸದಸ್ಯ ಬಸವರಾಜ ಹೊರಟ್ಟಿ, ಶ್ರೀಮತಿ ಲಲಿತಾ ಸಂಕೇಶ್ವರ, ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ ಹಾಗೂ ಸಂಸದ ಭಗವಂತ ಖೂಬಾ ಅವರು 4ನೇ ದಿನದ ಯೋಗ ಶಿಬಿರ ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಯೋಗ ಕಾರ್ಯಕ್ರಮಕ್ಕೆ ಆಗಮಿಸಿ, ಬಾಬಾ ರಾಮದೇವ್​​ರೊಟ್ಟಿಗೆ ವೇದಿಕೆ ಮೇಲೆ ಯೋಗ್ಯಾಭ್ಯಾಸ ಮಾಡಿದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಆಗಮಿಸಿದರು. ಅವರನ್ನು ಬಾಬಾ ರಾಮ್​​ದೇವ್​ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು ಸ್ವಾಮಿ ವಿವೇಕಾನಂದರ ಮೂರ್ತಿ ನೀಡಿ ಗೌರವಿಸಿದರು.
ಉಪರಾಷ್ಟ್ರಪತಿ ಎದುರಿಗೆ ಬಾಬಾ ರಾಮದೇವ್​ ಅವರು ಕಾಡಾಸನ ಪ್ರದರ್ಶಿಸಿದರು. ಸ್ವಯಂ ವೆಂಕಯ್ಯನಾಯ್ಡು ಅವರು ಕೂಡ ಯೋಗಾಭ್ಯಾಸ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
