ಬೆಂಗಳೂರು:ಹತ್ತಾರು ಸಮಸ್ಯೆಗಳು, ದ್ವಂದ್ವಗಳಲ್ಲಿ ಮನುಷ್ಯರು ಸಿಲುಕಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಕ್ಷೀಣಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ಮಾನಸಿಕ, ದೈಹಿಕ ಸಮತೋಲನ ಕಾಯ್ದುಕೊಳ್ಳಲು ಯೋಗಾಭ್ಯಾಸ ನೆರವಾಗಿ, ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
10ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತಪಕ್ಷದ ಕಚೇರಿ ಮುಂದಿನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರು ಸಾವಿರ ವರ್ಷಗಳ ಇತಿಹಾಸವುಳ್ಳ ಯೋಗ ನಮ್ಮದು. ವಿಶ್ವದ ಯೋಗ ದಿನಾಚರಣೆ ಮುಖೇನ ಜಗತ್ತಿನ ಅನೇಕ ದೇಶಗಳು ಇದರ ಮಹತ್ವ ತಿಳಿದು, ಅನುಸರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣ.
ಮಾನವನ ಒಳಿತು, ಜಗತ್ತಿನ ಕ್ಷೇಮ ಎರಡನ್ನೂ ಬಯಸಿದ ಮೋದಿ, ಅಮೂಲ್ಯ ಅಭ್ಯಾಸವನ್ನು ವಿಶ್ವಕ್ಕೆ ಬೆಸೆಯುವ ಮೂಲಕ ತಮ್ಮ ಕಳಕಳಿ ತೋರಿಸಿಕೊಟ್ಟರು. ದೈಹಿಕ ಆರೋಗ್ಯದ ಜತೆಗೆ ಮಾನಸಿಕವಾಗಿ ಸದೃಢತೆಯನ್ನು ಸಾಧಿಸುವುದಕ್ಕೆ ಸಾಧನವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು‌.
ಒಂದೆರಡು ಆಸನಗಳು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸೀಮಿತವಾಗಬಾರದು. ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ವೈಯಕ್ತಿಕವಾಗಿ ಸಾಕಷ್ಟು ಉಪಯುಕ್ತವಾಗಲಿದೆ ಎಂದು ಸಲಹೆ ನೀಡಿದರು.
ಚಿತ್ರನಟ ವಿಕ್ಕಿ ವರುಣ್ ಮಾತನಾಡಿ ಬಹಿರಂಗವಾಗಿ ಸಂಪರ್ಕಕ್ಕೆ ಮೊಬೈಲ್, ಇಂಟರ್ ನೆಟ್ ಇತ್ಯಾದಿ ಸಾಧನಗಳಿವೆ. ಹಾಗೆಯೇ ದೈಹಿಕ, ಮಾನಸಿಕವಾಗಿ ಆಂತರಿಕ ಸಂಪರ್ಕಕ್ಕೆ ಯೋಗ ಸಾಧನವಾಗಿದೆ ಎಂದರು.
ದೈಹಿಕ ದೃಢತೆ, ಮಾನಸಿಕ ಸ್ಥಿಮಿತತೆ ಸಾಧಿಸಬಹುದಾಗಿದೆ. ಆ ಮೂಲಕ ಉದ್ವೇಗ, ಆತಂಕ ಕಡಿಮೆಯಾಗಿ ಸಂಯಮ, ಸಂವೇದನೆಶೀಲತೆ, ಮಾನವೀಯ ಅಂತಃಕರಣ ನೆಲೆಸುತ್ತದೆ ಎಂದು ಹೇಳಿದರು‌.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿದರು. ಹರ್ಷ ಹಾಗೂ ಆನಂದ ಯೋಗಾಭ್ಯಾಸ ಮಾಡಿಸಿದರು. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಮತ್ತಿತರ ಮುಖಂಡರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 1 =
Remember me
