ಹುಬ್ಬಳ್ಳಿ:ಖ್ಯಾತ ಯೋಗ ಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ಇಲ್ಲಿನ ರೈಲ್ವೆ ಮೈದಾನದಲ್ಲಿ ಜ. 30ರಿಂದ ಫೆ. 3ರವರೆಗೆ ನಡೆಯಲಿರುವ ಉಚಿತ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ, ವಿಆರ್​ಎಲ್ ಮೀಡಿಯಾದ ದಿಗ್ವಿಜಯ 24×7 ಸುದ್ದಿವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.
ಪ್ರತಿದಿನ ಬೆಳಗ್ಗೆ 5ರಿಂದ 7.30ರವರೆಗೆ ಶಿಬಿರ ನಡೆಯಲಿದೆ. ಬಾಬಾ ರಾಮದೇವ್ ಕಲಿಸಿಕೊಡುವ ಪ್ರತಿ ಆಸನ, ಅದರ ವಿವರಣೆ ದಿಗ್ವಿಜಯ ಸುದ್ದಿವಾಹಿನಿಯಲ್ಲಿ ಆ ಕ್ಷಣದಲ್ಲೇ ಪ್ರಸಾರವಾಗಲಿದ್ದು, ಶಿಬಿರಕ್ಕೆ ಹಾಜರಾಗಲು ಸಾಧ್ಯವಾಗದೇ ಇರುವವರು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ.
ಹುಬ್ಬಳ್ಳಿಯ ರೈಲ್ವೆ ಸ್ಪೋರ್ಟ್ಸ್ ಗ್ರೌಂಡ್​ನಲ್ಲಿ ಶಿಬಿರಕ್ಕಾಗಿ ಕೊನೆಯ ಹಂತದ ಸಿದ್ಧತೆಗಳು ನಡೆದಿವೆ. ಹರಿಯಾಣದಿಂದ ಲಾರಿಯಲ್ಲಿ ವೇದಿಕೆ ನಿರ್ವಣದ ಸಾಮಗ್ರಿಗಳು ಆಗಮಿಸಿದ್ದು, ಅಂತಿಮ ಸಿದ್ಧತೆಗಳು ಭರದಿಂದ ಸಾಗಿದೆ.
15 ಸಾವಿರ ಯೋಗಾಸಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 10 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ವಿಆರ್​ಎಲ್ ಸಂಸ್ಥೆವತಿಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಬಾಬಾ ರಾಮದೇವ್ ಅವರ ಯೋಗಶಿಬಿರ ಏರ್ಪಾಟಾಗಿತ್ತು. ಅಂದಿನ ಶಿಬಿರ ಈ ಭಾಗದಲ್ಲಿ ಯೋಗ ಕ್ರಾಂತಿಯನ್ನುಂಟು ಮಾಡಿತ್ತು. ಮತ್ತೊಮ್ಮೆ ಅಂಥ ಸದಾವಕಾಶ ಯೋಗಾಸಕ್ತರಿಗೆ ಲಭಿಸಿದೆ.
ಬೇಸಿಕ್ ಯೋಗ, ಉನ್ನತ ಯೋಗ ತರಬೇತಿ, ಆಯುರ್ವೆದ, ಮನೆ ಮದ್ದು, ಔಷಧಗಳು, ಆಹಾರ ಪದ್ಧತಿ, ಅಕ್ಯುಪ್ರೆಷರ್, ಬೊಜ್ಜು ನಿವಾರಣೆ, ಸಹಜ ಸಮಾಧಿ ಸ್ಥಿತಿ, ಕುಂಡಲಿನಿ ಜಾಗರಣ, ಅಷ್ಟಾಂಗ ಯೋಗ, ಕ್ರಿಯಾ ಯೋಗವನ್ನು ಬಾಬಾ ರಾಮದೇವ್ ತಿಳಿಸಿಕೊಡಲಿದ್ದಾರೆ. 300 ವಿಜ್ಞಾನಿಗಳು ಯೋಗದ ಮೇಲೆ ಮಾಡಿದ ಸಂಶೋಧನೆ ಆಧರಿಸಿದ ವಿಷಯ ಈ ಸಲದ ಶಿಬಿರದ ವಿಶೇಷವಾಗಿದೆ. ವಿದೇಶಿ ಹಾಗೂ ಸ್ವದೇಶಿ ಯೋಗ ಶಿಕ್ಷಕರು, ಯೋಗಾಸಕ್ತರು ಭಾಗವಹಿಸಲಿದ್ದಾರೆ. ಈಗಾಗಲೇ ಬಹಳಷ್ಟು ಜನರು ಹುಬ್ಬಳ್ಳಿಯತ್ತ ದೃಷ್ಟಿ ನೆಟ್ಟಿದ್ದಾರೆ.
ಬಾಬಾ ರಾಮದೇವ್ ಮಾರ್ಗದರ್ಶನ
ಯೋಗ ಗುರು ಬಾಬಾ ರಾಮದೇವ್ ಜ. 29ರಂದು ಸಂಜೆಯೇ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 5 ದಿನ ನಗರದಲ್ಲಿ ವಾಸ್ತವ್ಯ ಹೂಡ ಲಿದ್ದು, ಜ. 30ರ ಬೆಳಗ್ಗೆ 4.45ಕ್ಕೆ ಯೋಗ ಶಿಬಿರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ವಿಆರ್​ಎಲ್ ಸಹಭಾಗಿತ್ವ
ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ರಾಜ್ಯದ ನಂ.1 ದಿನಪತ್ರಿಕೆ ‘ವಿಜಯವಾಣಿ’, ‘ದಿಗ್ವಿಜಯ 247 ನ್ಯೂಸ್ ಚಾನೆಲ್’, ‘ಪವರ್ ನ್ಯೂಸ್ ಆ್ಯಪ್’ ಸಹಭಾಗಿತ್ವ ವಹಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
